ನವದೆಹಲಿ: ದೇಶದಲ್ಲಿ 140 ದಿನಗಳ ಬಳಿಕ ಅತಿ ಕಡಿಮೆ ಕೋವಿಡ್ ಪ್ರಕರಣ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 38,353 ಹೊಸ ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3,86,351 ಕ್ಕೆ ತಲುಪಿದೆ. ಗುಣಮುಖರ ಪ್ರಮಾಣ ಶೇ.97.45 ರಷ್ಟಿದೆ.
ಇದುವರೆಗೆ ದೇಶದಾದ್ಯಂತ ಒಟ್ಟು 53.24 ಕೋಟಿ (53,24,44,960) ಡೋಸ್ ಕೋವಿಡ್ ಲಸಿಕೆ ಒದಗಿಸಲಾಗಿದೆ. ಈ ಪೈಕಿ ಇಂದು ಬೆಳಗ್ಗೆ 8 ಗಂಟೆವರೆಗೆ ವ್ಯರ್ಥವಾದ ಡೋಸ್ ಸೇರಿ 51,56,11,035 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
2.25 ಕೋಟಿಗಿಂತ ಹೆಚ್ಚು (2,25,03,900) ಬಳಕೆಯಾಗದ ಕೋವಿಡ್ ಲಸಿಕೆ ಪ್ರಮಾಣಗಳು ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ.