ETV Bharat / bharat

UNSC ಆದ್ಯತೆ ಬಗ್ಗೆ ಭಾರತ, ಐರ್ಲೆಂಡ್ ಮಾತುಕತೆ

ಐರಿಶ್ ನಿಯೋಗದ ನೇತೃತ್ವವನ್ನು ಯುಎನ್ ನಿರ್ದೇಶಕ ಮತ್ತು ಯುಎನ್ಎಸ್​ಸಿ ಕಾರ್ಯ ತಂಡದ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ ಮುಖ್ಯಸ್ಥ ಜೆರಾರ್ಡ್ ಕಿಯೋನ್ ವಹಿಸಿದ್ದರು..

author img

By

Published : Feb 26, 2021, 10:17 AM IST

india-ireland-discuss-unsc-priorities
UNSC ಆದ್ಯತೆ ಬಗ್ಗೆ ಭಾರತ, ಐರ್ಲೆಂಡ್ ಮಾತುಕತೆ

ನವದೆಹಲಿ: ಭಾರತ ಮತ್ತು ಐರ್ಲೆಂಡ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಕಾರ್ಯಸೂಚಿಯಲ್ಲಿ ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಿದೆ. ಈ ವರ್ಷ ವಿಶ್ವ ಸಂಸ್ಥೆಯಲ್ಲಿ ತಮ್ಮ ಇನ್ನಿಂಗ್ಸ್ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿಡಿಯೋ-ಟೆಲಿಕಾನ್ ಕಾನ್ಫರೆನ್ಸಿಂಗ್ ವೇದಿಕೆ ಮುಖಾಂತರ ಉಭಯ ದೇಶಗಳ ಅಧಿಕಾರಿಗಳು ಯುಎನ್‌ಎಸ್‌ಸಿ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ಕಡೆಯವರು ಯುಎನ್‌ಎಸ್‌ಸಿಗೆ ಆಯ್ಕೆಯಾಗಿದ್ದಕ್ಕೆ ಪರಸ್ಪರ ಅಭಿನಂದಿಸಿದರು ಮತ್ತು ತಮ್ಮ ಆದ್ಯತೆಗಳ ಬಗ್ಗೆ ಪರಸ್ಪರ ವಿವರಿಸಿದರು.

ಐರಿಶ್ ನಿಯೋಗದ ನೇತೃತ್ವವನ್ನು ಯುಎನ್ ನಿರ್ದೇಶಕ ಮತ್ತು ಯುಎನ್ಎಸ್​ಸಿ ಕಾರ್ಯ ತಂಡದ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ ಮುಖ್ಯಸ್ಥ ಜೆರಾರ್ಡ್ ಕಿಯೋನ್ ವಹಿಸಿದ್ದರು. ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ ಅವರು ಭಾರತೀಯ ನಿಯೋಗ ಮುನ್ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.