ETV Bharat / bharat

ಕೋವಿಡ್​ ನಂತರದ ಹೊಸ ವಿಶ್ವ ನಿರ್ಮಾಣದಲ್ಲಿ ಭಾರತದ ಪಾತ್ರ ದೊಡ್ಡದು: ಪ್ರಧಾನಿ ಮೋದಿ

author img

By

Published : Jan 30, 2021, 10:13 PM IST

ಕೊರೊನಾ ಮಹಾಮಾರಿಯಿಂದ ಎಲ್ಲ ದೇಶಗಳು ತತ್ತರಿಸಿ ಹೋಗಿದ್ದು, ಇದೀಗ ಹೊಸ ವಿಶ್ವ ರೂಪಗೊಳ್ಳುತ್ತಿದೆ. ಇದರಲ್ಲಿ ಭಾರತದ ಪಾತ್ರ ದೊಡ್ಡದು ಎಂದು ನಮೋ ಹೇಳಿದ್ದಾರೆ.

PM Modi
PM Modi

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ನಿಂದ ನಲುಗಿ ಹೋಗಿದ್ದ ವಿಶ್ವ ಇದೀಗ ಚೇತರಿಸಿಕೊಳ್ಳುತ್ತಿದ್ದು, ಹೊಸ ವಿಶ್ವ ನಿರ್ಮಾಣದಲ್ಲಿ ಭಾರತದ ಪಾತ್ರ ಬಹುದೊಡ್ಡದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್​​ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ನಮೋ, ಈ ದಶಕ ತುಂಬಾ ಮಹತ್ವದ್ದಾಗಿದ್ದು, ಎರಡನೇ ಮಹಾಯುದ್ಧದ ನಂತರ ಅತಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಹಿಂದಿನಂತೆ ನಾವು ಮೂಕ ಪ್ರೇಕ್ಷರಾಗಲು ಸಾಧ್ಯವಿಲ್ಲ ಎಂದಿರುವ ಅವರು, ನಮ್ಮ ಸಂಪ್ರದಾಯದಂತೆ ವಸುದೈವ ಕುಟುಂಬಕಂ ಆದರ್ಶ ಆಧರಿಸಿ ಈ ಸಂದರ್ಭಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದರು. ಕೇಂದ್ರ ಬಜೆಟ್ ಮಂಡನೆಯಾಗಲು ಒಂದು ದಿನ ಬಾಕಿ ಇದ್ದು, ಅದಕ್ಕೂ ಮುಂಚಿತವಾಗಿ ಎನ್​ಡಿಎ ಮುಖಂಡ ಸಭೆ ನಡೆಸಲಾಯಿತು.

ಇದನ್ನೂ ಓದಿ: ಮಮತಾಗೆ ಬಿಗ್​ ಶಾಕ್​: ಬಿಜೆಪಿ ಸೇರಿದ ಐವರು ಟಿಎಂಸಿ ನಾಯಕರು!

ಸಾಂಕ್ರಾಮಿಕ ರೋಗ ಕೊರೊನಾ ನಂತರ ಹೊಸ ವಿಶ್ವ ರೂಪಗೊಳ್ಳುತ್ತಿದ್ದು, ಈ ಹೊಸ ವಿಶ್ವ ಕಟ್ಟುವಲ್ಲಿ ನಮ್ಮ ಪಾತ್ರ ದೊಡ್ಡದ್ದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.