ETV Bharat / bharat

BIG SHOCK: 2017ರಲ್ಲಿ ಇಸ್ರೇಲ್‌ ಜತೆಗಿನ ಒಪ್ಪಂದದ ಭಾಗವಾಗಿ ಭಾರತ ಪೆಗಾಸಸ್ ಖರೀದಿಸಿದೆ : ನ್ಯೂಯಾರ್ಕ್ ಟೈಮ್ಸ್ ವರದಿ

author img

By

Published : Jan 29, 2022, 2:32 PM IST

Updated : Jan 29, 2022, 4:48 PM IST

2017 ರಲ್ಲಿ ಇಸ್ರೇಲ್‌ನೊಂದಿಗಿನ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತ ಸರ್ಕಾರ ಪೆಗಾಸಸ್ ಸ್ಪೈ ಟೂಲ್ ಅನ್ನು ಖರೀದಿಸಿದೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಪೆಗಾಸಸ್
ಪೆಗಾಸಸ್

ನವದೆಹಲಿ: ಇಸ್ರೇಲ್‌ನೊಂದಿಗಿನ ರಕ್ಷಣಾ ಒಪ್ಪಂದದ ಭಾಗವಾಗಿ 2017 ರಲ್ಲಿ ಭಾರತ ಸರ್ಕಾರ ಪೆಗಾಸಸ್ ಸ್ಪೈ ಟೂಲ್ ಅನ್ನು ಖರೀದಿಸಿದೆ ಎಂದು ಅಮೆರಿಕದ ಸುದ್ದಿ ಪತ್ರಿಕೆಯಾದ 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​​ ವಾಗ್ದಾಳಿ ನಡೆಸಿದೆ.

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಇತರ ಗಣ್ಯ ವ್ಯಕ್ತಿಗಳ ಮೇಲೆ ಕಣ್ಣಿಡಲು ಕೆಲವು ಸರ್ಕಾರಗಳು ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿ ಬೇಹುಗಾರಿಕೆ ನಡೆಸಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಭಾರತದಲ್ಲಿ ಇದು ಕಳೆದ ವರ್ಷ ಭಾರಿ ವಿವಾದವು ಸ್ಫೋಟಗೊಳ್ಳಲು ಕಾರಣವಾಗಿತ್ತು.

ವರದಿಯಲ್ಲೇನಿದೆ?: ದಿ ಬ್ಯಾಟಲ್ ಫಾರ್ ದಿ ವರ್ಲ್ಡ್ಸ್ ಮೋಸ್ಟ್ ಪವರ್‌ಫುಲ್ ಸೈಬರ್‌ ವೆಪನ್' ಎಂಬ ಶೀರ್ಷಿಕೆಯ ಅಡಿ ನ್ಯೂಯಾರ್ಕ್ ಟೈಮ್ಸ್ ಮಾಡಿದ ವರದಿಯಲ್ಲಿ, ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆ 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು USD 2 ಬಿಲಿಯನ್ (2 ಬಿಲಿಯನ್​ ಡಾಲರ್​) ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಒಪ್ಪಂದದ ಕೇಂದ್ರ ಬಿಂದುಗಳಾಗಿವೆ ಎಂದು ಉಲ್ಲೇಖಿಸಲಾಗಿದೆ.

ಇಸ್ರೇಲಿ ಸಂಸ್ಥೆ ಎನ್​ಎಸ್​ಒ ಗ್ರೂಪ್ ಸುಮಾರು ಒಂದು ದಶಕದಿಂದ ತನ್ನ ಸಾಫ್ಟ್‌ವೇರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ಪ್ರಪಂಚದಾದ್ಯಂತದ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ.

ಖಾಸಗಿ ಕಂಪನಿಗಳು, ರಾಜ್ಯ ಗುಪ್ತಚರ ಇಲಾಖೆಗಳು ಸೇರಿದಂತೆ ಬೇರೆ ಯಾರೂ ಮಾಡದ ಕೆಲಸವನ್ನು ನಾವು ಮಾಡುತ್ತೇವೆ ಎಂಬ ಭರವಸೆಯನ್ನು ಇಸ್ರೇಲಿ ಸಂಸ್ಥೆ ತಿಳಿಸಿತ್ತು. ಬೇರೆ ಯಾರೂ ಮಾಡದ ಕೆಲಸವೆಂದರೆ, ಇಲ್ಲಿ ಐಫೋನ್​ ಅಥವಾ ಆ್ಯಂಡ್ರಾಯ್ಡ್​ ಸ್ಮಾರ್ಟ್‌ಫೋನ್‌ನ ಎನ್‌ಕ್ರಿಪ್ಟ್ ಮಾಡಲಾದ ಸಂವಹನಗಳನ್ನು ಭೇದಿಸುವ ಕೆಲಸವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪೆಗಾಸಸ್‌ ಗೂಢಚಾರಿಕೆ ತನಿಖೆಗೆ ಸ್ವತಂತ್ರ ಸಮಿತಿ ನೇಮಿಸಿದ ಸುಪ್ರೀಂಕೋರ್ಟ್​​

ಮೋದಿ ಇಸ್ರೇಲ್​ ಭೇಟಿ: ಜುಲೈ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದನ್ನೂ ವರದಿ ಉಲ್ಲೇಖಿಸಿದೆ. ಇಸ್ರೇಲ್​​​​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿಯಾಗಿದ್ದಾರೆ. ಏಕೆಂದರೆ ಅಲ್ಲಿಯವರಿಗೆ ಪ್ಯಾಲೆಸ್ತೀಯನ್​ ವಿಚಾರದಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಮಂಜಿನಿಂದ ಕೂಡಿದ್ದವು. ಹೀಗಿದ್ದೂ ನರೇಂದ್ರ ಮೋದಿ ಭೇಟಿ ನೀಡಿ, ಆಗಿನ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆ ಸಮುದ್ರತೀರದಲ್ಲಿ ಸಮಯ ಕಳೆದು ಬಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.