ETV Bharat / bharat

ಒಣಗಿದ ಹೂವುಗಳಿಂದ ಅಗರಬತ್ತಿ, ಧೂಪ: ತ್ಯಾಜ್ಯ ನಿರ್ಮೂಲನೆಗೆ ‘ಗ್ರೀನ್ ವೇವ್ಸ್’ ಪಣ - ತ್ಯಾಜ್ಯ ನಿರ್ಮೂಲನೆಗೆ ಪಣ ತೊಟ್ಟ ‘ಗ್ರೀನ್ ವೇವ್ಸ್’ ಸಂಘಟನೆ

ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ‘ಗ್ರೀನ್ ವೇವ್ಸ್’ ಎಂಬ ಯುವಕರ ತಂಡ ಒಣಗಿದ ಹೂವುಗಳನ್ನು ಬಳಸಿ ಪರಿಮಳಯುಕ್ತವಾದ ಅಗರಬತ್ತಿ, ಧೂಪ ಮತ್ತು ಇತರ ಉತ್ಪನ್ನಗಳನ್ನು ತಯಾರಿಸುತ್ತಿದೆ.

Agarbathi making from dried flowers
ತ್ಯಾಜ್ಯ ನಿರ್ಮೂಲನೆಗೆ ಪಣ ತೊಟ್ಟ ‘ಗ್ರೀನ್ ವೇವ್ಸ್’
author img

By

Published : Dec 7, 2020, 6:02 AM IST

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ದೇವರ ಪೂಜೆಗೆ ಹಾಗೂ ದೇವಸ್ಥಾನಗಳಲ್ಲಿ ಅಲಂಕಾರಕ್ಕೆ ಬಳಸುವ ಹೂವುಗಳನ್ನು ನಂತರದಲ್ಲಿ ನದಿ ಅಥವಾ ಕಸದ ರಾಶಿಯಲ್ಲಿ ಬಿಸಾಕಲಾಗುತ್ತದೆ. ಈ ಹೂವುಗಳು ತ್ಯಾಜ್ಯವಾಗಿ ಮಾರ್ಪಟ್ಟು, ಪರಿಸರ ಹಾಳಾಗುತ್ತದೆ. ಇದನ್ನು ಹೋಗಲಾಡಿಸಲು ಆಂಧ್ರಪ್ರದೇಶದ ವಿಶಾಖಪಟ್ಟಣಂನ ಯುವಕರ ತಂಡವೊಂದು, ‘ಗ್ರೀನ್ ವೇವ್ಸ್ ಎನ್ವಿರಾನ್ಮೆಂಟಲ್ ಸೊಲ್ಯೂಷನ್ಸ್’ ಎಂಬ ಸಂಘಟನೆ ಹುಟ್ಟು ಹಾಕಿದೆ.

ಒಣಗಿದ ಹೂವುಗಳನ್ನು ಬಳಸಿ ‘ಗ್ರೀನ್ ವೇವ್ಸ್’ ಪರಿಮಳಯುಕ್ತವಾದ ಅಗರಬತ್ತಿ, ಧೂಪ ಮತ್ತು ಇತರ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದರಿಂದ ತ್ಯಾಜ್ಯ ನಿರ್ಮೂಲನೆ ಜೊತೆಗೆ ಉದ್ಯೋಗವೂ ದೊರೆತಿದೆ.

ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಬೇರ್ಪಡಿಸುವ ಉದ್ದೇಶದಿಂದ ಅನಿಲ್ ಎಂಬ ಯುವಕ ಈ ಗ್ರೀನ್ ವೇವ್ಸ್ ಸ್ಥಾಪಿಸಿದ್ದಾರೆ. ಕೆಲವು ದೇವಾಲಯಗಳ ಸಹಯೋಗದೊಂದಿಗೆ ತೆಂಗಿನಕಾಯಿ ಮತ್ತು ಒಣಗಿದ ಹೂವುಗಳನ್ನು ಸಂಗ್ರಹಿಸಿ, ಇದರಿಂದ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ತ್ಯಾಜ್ಯ ನಿರ್ಮೂಲನೆಗೆ ಪಣ ತೊಟ್ಟ ‘ಗ್ರೀನ್ ವೇವ್ಸ್’

ಇದು ಕೇವಲ ಅಗರಬತ್ತಿ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಜೊತೆಗೆ ಸುಗಂಧ ದ್ರವ್ಯದ ಸಾಬೂನುಗಳನ್ನು ಸಹ ತಯಾರಿಸಲಾಗುತ್ತದೆ. ತೆಂಗಿನ ಚಿಪ್ಪು ಹಾಗೂ ನಾರಿನಿಂದ ಸಣ್ಣ ಬಟ್ಟಲುಗಳನ್ನು ತಯಾರಿಸಲು ನಿರ್ಧರಿಸಲಾಗಿದೆ. ಇನ್ನು ಹೂವುಗಳಲ್ಲಿ ಬೀಜಗಳು ಮತ್ತು ರಸಗೊಬ್ಬರಗಳಿಗೆ ಸೂಕ್ತವಾದ ಭಾಗಗಳನ್ನು ಬೇರ್ಪಡಿಸಿದ ನಂತರ ಉಳಿದ ತ್ಯಾಜ್ಯವನ್ನು ಶೇ. 100ರಷ್ಟು ಬಳಸಿಕೊಳ್ಳಲಾಗುತ್ತಿದೆ.

ಇನ್ನು ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಅಧಿಕಾರಿಗಳು, ಈ ಸಂಘಟನೆಯ ವಿಚಾರಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮಾರುಕಟ್ಟೆಗಳು, ದೇವಾಲಯಗಳು, ಉತ್ಸವ ಸೇರಿದಂತೆ ವಿವಿಧೆಡೆ ಬಳಸಿದ ಹೂವುಗಳನ್ನು ಸಂಗ್ರಹಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ಸಾಮಾಜಿಕ ಜವಾಬ್ದಾರಿ ಮತ್ತು ಸೃಜನಶೀಲತೆಯೊಂದಿಗೆ ಗ್ರೀನ್ ವೇವ್ಸ್, ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರಿಗೆ ಹೂವಿನ ತ್ಯಾಜ್ಯದಿಂದ ಧೂಪವನ್ನು ತಯಾರಿಸಲು ತರಬೇತಿ ನೀಡುತ್ತಿದೆ. ಯಾವುದೇ ಯಂತ್ರೋಪಕರಣಗಳ ಅಗತ್ಯವಿಲ್ಲದೆ ಅದನ್ನು ಕೈಯಿಂದ ಮಾಡಲು ಸಾಧ್ಯವಿರುವುದರಿಂದ ಈ ಚಟುವಟಿಕೆಯನ್ನು ‘ಕಾಟೇಜ್-ಇಂಡಸ್ಟ್ರಿ’ ಯೋಜನೆಯಡಿ ಉತ್ತೇಜಿಸಬೇಕು ಮತ್ತು ಅದರಿಂದ ಉತ್ತಮ ಆದಾಯ ಗಳಿಸಲು ಸಾಧ್ಯವಾಗುವಂತೆ ಮಾಡುವ ಯೋಚನೆ ಸಂಸ್ಥೆಯದ್ದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.