ಮುಂಬೈ (ಮಹಾರಾಷ್ಟ್ರ) : ರಾಜ್ಯದಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರ ರಚನೆಯಾದ ಒಂದೂವರೆ ವರ್ಷಗಳ ನಂತರ ಶಿವಸೇನೆಯ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಸಿಎಂ ಉದ್ಧವ್ ಠಾಕ್ರೆ ಸಮರ ಸಾರಿದ್ದಾರೆ. ಬಂಡಾಯ ಶಾಸಕರ ಸದಸ್ಯತ್ವ ರದ್ದು ಮಾಡುವಂತೆ ಶಿವಸೇನೆ ಒತ್ತಾಯಿಸಿದೆ.
ಸಿಎಂ ಉದ್ಧವ್ ಠಾಕ್ರೆ ಅವರು ಇಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ಸಂಪರ್ಕ ಮುಖ್ಯಸ್ಥರ ಸಭೆಯನ್ನು ಕರೆದಿದ್ದರು. ಈ ವೇಳೆ ಮಾತನಾಡಿದ ಅವರು, ನನ್ನೊಂದಿಗಿನ ಪ್ರೀತಿಯಲ್ಲಿ ನೀವು ಸಿಲುಕಬೇಡಿ, ನಾನು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಇದು ಭಾವನಾತ್ಮಕ ಮನವಿಯೂ ಅಲ್ಲ. ನೀವು ಅವರೊಂದಿಗೆ ಹೋಗಲು ಬಯಸಿದರೆ ಹೋಗಿ.
ಶಿವಸೇನೆ ರಚನೆಯಾಗುವ ಸಮಯ ಬಂದಿದೆ. ನಾನು ಹೊಸ ಶಿವಸೇನೆಯನ್ನು ಕಟ್ಟಲು ಬಯಸುತ್ತೇನೆ ಎಂದಿದ್ದಾರೆ. ಎಲೆಗಳು ಉದುರಿದಾಗ ಹೊಸ ಎಲೆಗಳು ಮೊಳಕೆಯೊಡೆಯುತ್ತವೆ. ನಿಮ್ಮಲ್ಲಿ ಹಠ ಇದ್ದರೆ ನನ್ನ ಜೊತೆಯಲ್ಲಿ ಇರಿ, ಇಲ್ಲದಿದ್ದರೆ ಹೊರಡಿ. ನಮ್ಮ ಮೇಲೆಯೇ ಆರೋಪ ಮಾಡಿ ರಾಜತಾಂತ್ರಿಕತೆ ಮೆರೆದ ಬಿಜೆಪಿ ಜೊತೆ ಹೋಗಬೇಕೆ? ಎಂದು ಹರಿಹಾಯ್ದರು.
ಇದನ್ನೂ ಓದಿ : ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಅಕ್ರಮ ಹಣ ವಸೂಲಿ : ಶಾಸಕರಿಗೆ ರೆಡ್ಹ್ಯಾಂಡ್ಆಗಿ ಸಿಕ್ಕಿಬಿದ್ದ ಸಿಬ್ಬಂದಿ