ಸಿರೋಹಿ(ರಾಜಸ್ಥಾನ ) : ಉತ್ತರ ಭಾರತದಲ್ಲಿ ಹಿಮಪಾತ ಮತ್ತು ಪಾಶ್ಚಿಮಾತ್ಯ ಅಡಚಣೆಗಳಿಂದಾಗಿ, ಚಳಿಗಾಲದ ಶೀತವು ರಾಜಸ್ಥಾನ ರಾಜ್ಯದಲ್ಲಿ ಮುಂದುವರಿಯುತ್ತದೆ.
ರಾಜಸ್ಥಾನ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮಳೆ ಕಾಣಿಸಿಕೊಂಡರೆ, ಮತ್ತೊಂದೆಡೆ ಮೌಂಟ್ ಅಬುವಿನಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿದ್ದು, ತಾಪಮಾನದಲ್ಲಿ ಏರಿಕೆ ಕಂಡಿದೆ. ಬುಧವಾರ, ಮೋಡಗಳ ಚಲನ, ವಲನ ಹೆಚ್ಚಾದಂತೆ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ತಾಪಮಾನವು ಇದ್ದಕ್ಕಿದ್ದಂತೆ ಮೈನಸ್ 3.4 ಡಿಗ್ರಿಗೆ ಇಳಿದಿದೆ.
ಹಿಲ್ ಸ್ಟೇಷನ್ ಮೌಂಟ್ ಅಬುವಿನಲ್ಲಿ ಚಳಿಗಾಲದ ಮೂರನೇ ಹಂತದ ತಾಪಮಾನ ಮುಂದುವರೆದಿದೆ. ಮಂಗಳವಾರ, ಹಿಮ ಬೀಳುವುದರಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಇಂದು ಕನಿಷ್ಠ ಮೈನಸ್ 3.4 ಡಿಗ್ರಿ ತಾಪಮಾನ ದಾಖಲಾಗಿದೆ.
ಓದಿ : ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ವಿಷಪೂರಿತ ಅನಿಲ ಸೋರಿಕೆ: ಇಬ್ಬರು ಸಾವು, ಹಲವರು ಅಸ್ವಸ್ಥ
ಕಾರುಗಳು ಹಾಗೂ ಮನೆಯ ಛಾವಣಿ, ಹಾಗೂ ಹೋಟೆಲ್ಗಳು ಹಿಮದಿಂದ ಆವೃತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.