ETV Bharat / bharat

ನಾಯಿ ಮಾಂಸ ಮಾರಾಟ- ಸೇವನೆ ನಿಷೇಧಿಸಿದ ನಾಗಾಲ್ಯಾಂಡ್ ಆದೇಶ ರದ್ದುಪಡಿಸಿದ ಹೈಕೋರ್ಟ್​ - Gauhati High Court

ನಾಗಾಲ್ಯಾಂಡ್​ನಲ್ಲಿ ನಾಯಿ ಮಾಂಸ ಮಾರಾಟ ಮತ್ತು ಸೇವನೆ ಮೇಲಿನ ನಿಷೇಧವನ್ನು ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠ ತೆಗೆದು ಹಾಕಿದೆ.

High Court quashes Nagaland govt's order banning dog meat sale
ನಾಯಿ ಮಾಂಸ ಮಾರಾಟ- ಸೇವನೆ ನಿಷೇಧಿಸಿದ ನಾಗಾಲ್ಯಾಂಡ್ ಸರ್ಕಾರದ ಆದೇಶ ರದ್ದು ಮಾಡಿದ ಹೈಕೋರ್ಟ್​
author img

By

Published : Jun 7, 2023, 9:20 PM IST

ಗುವಾಹಟಿ: ನಾಯಿ ಮಾಂಸ ಮಾರಾಟ ಮತ್ತು ಸೇವನೆ ನಿಷೇಧಿಸಿ ನಾಗಾಲ್ಯಾಂಡ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠವು ರದ್ದುಗೊಳಿಸಿದೆ. ಈ ಬಗ್ಗೆ ಜೂನ್ 2ರಂದು ನ್ಯಾಯಮೂರ್ತಿ ಮಾರ್ಲಿ ವ್ಯಾಂಕುಂಗ್ ತೀರ್ಪು ನೀಡಿದ್ದು, ಸೂಕ್ತವಾದ ಕಾನೂನು ಆಧಾರವಿಲ್ಲದೆ ರಾಜ್ಯ ಸರ್ಕಾರವು ನಾಯಿ ಮಾಂಸ ಸೇವನೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಾಯಿ ಮಾಂಸ ಮಾರಾಟ ಮತ್ತು ಸೇವನೆಯನ್ನು ಸರ್ಕಾರ ನಿಷೇಧಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಜಾರಿಗೊಳಿಸಿಲ್ಲ. ಆದ್ದರಿಂದ ಇದಕ್ಕೆ ಯಾವುದೇ ಕಾನೂನಿನ ಆಧಾರ ಇಲ್ಲ. ಹೀಗಾಗಿ 2020ರಲ್ಲಿ ಹೊರಡಿಸಿದ್ದ ನಾಯಿ ಮಾಂಸದ ಮೇಲಿನ ನಿಷೇಧವನ್ನು ರದ್ದು ಮಾಡಲಾಗುತ್ತದೆ. ಇದು ಸಂಪುಟದಲ್ಲಿ ಅನುಮೋದನೆಗೊಂಡಿದ್ದರೂ ಸಹ ರದ್ದಾಗಲಿದೆ ಎಂದು ನ್ಯಾಯಪೀಠ ಹೇಳಿದೆ.

ನಾಯಿ ಮಾಂಸವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸಂಯೋಜಕಗಳು) ನಿಯಮಗಳಿಗೆ ಒಳಪಟ್ಟಿಲ್ಲ ಎನ್ನುವುದನ್ನೂ ನ್ಯಾಯಾಲಯ ಗಮನಿಸಿದೆ. ನಾಯಿಗಳ ಮಾಂಸವನ್ನು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರ ಸೇವಿಸಲಾಗುತ್ತದೆ. ಮಾಂಸ ಸೇವಿಸುವ ಕಲ್ಪನೆಯು ದೇಶದ ಇತರ ಭಾಗಗಳಲ್ಲಿ ಪರಕೀಯವಾಗಿದೆ. ನಿಯಮ 2.5.1 (ಎ)ರ ಅಡಿಯಲ್ಲಿ ಮಾನವ ಬಳಕೆಗಾಗಿ ನರಿ/ನಾಯಿಗಳನ್ನು ಪ್ರಾಣಿಯಾಗಿ ಸೇರಿಸುವುದು ಕಲ್ಪನೆಗೂ ಮೀರಿದೆ. ಏಕೆಂದರೆ ನಾಯಿ ಮಾಂಸದ ಸೇವನೆಯು ಯೋಚಿಸಲಾಗದು ಎಂದು ಪರಿಗಣಿಸಲಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಇದೇ ವೇಳೆ ಆಧುನಿಕ ಕಾಲದಲ್ಲೂ ನಾಯಿ ಮಾಂಸದ ಸೇವನೆಯು ನಾಗಾಗಳ ನಡುವೆ ಸ್ವೀಕಾರಾರ್ಹವಾದ ರೂಢಿ ಮತ್ತು ಆಹಾರವಾಗಿದೆ. ಇದರಲ್ಲಿ ಅರ್ಜಿದಾರರು ನಾಯಿಗಳನ್ನು ಸಾಗಿಸುವ ಮತ್ತು ನಾಯಿ ಮಾಂಸವನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ರಾಜ್ಯದೊಳಗೆ ಯಾವುದೇ ಮಾಂಸದ ಮಾರಾಟವನ್ನು ನಿಷೇಧಿಸುವ ಆದೇಶಗಳನ್ನು ಹೊರಡಿಸುವ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತರು ಮಾತ್ರ. ರಾಜ್ಯದ ಮುಖ್ಯ ಕಾರ್ಯದರ್ಶಿಯಲ್ಲ ಎಂದು ನ್ಯಾಯಾಲಯವು ಒತ್ತಿಹೇಳಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ವಧೆಗಾಗಿ ಉದ್ದೇಶಿಸಿರುವ ನಾಯಿಗಳ ನಿರ್ವಹಣೆಯು ಸಂಪೂರ್ಣವಾಗಿ ನೈರ್ಮಲ್ಯ ಅಥವಾ ಕಸಾಯಿಖಾನೆ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ. ಆದಾಗ್ಯೂ, ಇದರ ನಿಷೇಧವನ್ನು ಬೆಂಬಲಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ನಾಯಿಗಳು ಸಾಯುವ ಮೊದಲು ನರಳುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳನ್ನು ಜಾರಿಗೊಳಿಸಲು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೇಳಿ, 2020ರ ನವೆಂಬರ್​ನಲ್ಲಿ, ರಾಜ್ಯದಲ್ಲಿ ನಾಯಿ ಮಾಂಸದ ಆಮದು, ವ್ಯಾಪಾರ ಮತ್ತು ಮಾರಾಟವನ್ನು ನಿಷೇಧಿಸಿದ ನಾಗಾಲ್ಯಾಂಡ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಇದನ್ನೂ ಓದಿ: ಕಾಡುಹಂದಿ ಮಾಂಸ ಅಂತಾ ಊರ ಹಂದಿ ಮಾಂಸ ತಿನ್ನಿಸಿದ ಯುವಕರು.. ಗ್ರಾಮಸ್ಥರಿಂದ ಗೂಸಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.