ಗಾಂಧಿನಗರ : ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಗುಜರಾತ್ ಪ್ರವಾಸದಲ್ಲಿದ್ದು, ಇಂದು ಬನಸ್ಕಾಂತ ಜಿಲ್ಲೆಯ ನಡಬೆಟ್‌ನಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿನ ವ್ಯೂ ಪಾಯಿಂಟ್ ಅನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಉಪಸ್ಥಿತರಿದ್ದರು. ಇದನ್ನು ಗುಜರಾತ್ ರಾಜ್ಯ ಮಂಡಳಿಯು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಿದೆ. ಹಾಗೆಯೇ ಇದು ಗುಜರಾತ್‌ನ ಮೊದಲ ಗಡಿ ವ್ಯೂ ಪಾಯಿಂಟ್ ಆಗಿದ್ದು, ಗಡಿ ಮತ್ತು ಸಶಸ್ತ್ರ ಟ್ಯಾಂಕ್‌ಗಳ ಫೋಟೋ ಗ್ಯಾಲರಿಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಈ ವೇಳೆ ಮಾತನಾಡಿದ ಅವರು, ದೇಶವು ಗಡಿಯೊಳಗೆ ಸುರಕ್ಷಿತವಾಗಿದೆ. ಪ್ರಗತಿಯನ್ನು ಸಾಧಿಸುತ್ತಿದೆ ಮತ್ತು ಪ್ರಪಂಚದ ಮುಂದೆ ವೇಗವಾಗಿ ಬೆಳೆಯುತ್ತಿದ್ದರೆ ಎಂದರೆ ನೀವು ಸಾವಿರಾರು ಕಿಲೋಮೀಟರ್ ದೂರದಿಂದ ಬಂದು ದೇಶವನ್ನು ಕಾಯುತ್ತಿರುವ ಕಾರ್ಯದಿಂದ ಎಂದು ಹೇಳಲು ಬಯಸುತ್ತೇನೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ: ತ್ವಚೆಯ ಆರೋಗ್ಯಕ್ಕಾಗಿ ಇಲೆಕ್ಟ್ರಾನಿಕ್ ಗಾಜೆಟ್ಗಳಿಂದ ದೂರವಿರಿ..
ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ವೀಕ್ಷಣಾ ಸ್ಥಳವು ರಾಜ್ಯದ ಮೊದಲ ಮಹತ್ವದ ಪ್ರವಾಸೋದ್ಯಮ ತಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಡಬೆಟ್‌ಗೆ ಭೇಟಿ ನೀಡುವ ಪ್ರಯಾಣಿಕರು ಭಾರತೀಯ ಗಡಿಯಲ್ಲಿನ ಸೇನಾ ಪೋಸ್ಟ್‌ನ ಕಾರ್ಯನಿರ್ವಹಣೆಯನ್ನು ಅನುಭವಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಗುಜರಾತ್ ಪ್ರವಾಸೋದ್ಯಮ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ನಡಬೆಟ್‌ನಲ್ಲಿ ಈ ಭಾರತ-ಪಾಕ್ ಗಡಿ ವೀಕ್ಷಣಾ ಕೇಂದ್ರವನ್ನು 125 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆವರಣದಲ್ಲಿರುವ ಹಲವಾರು ಪ್ರವಾಸಿ ಆಕರ್ಷಣೆಗಳು ಮತ್ತು ಪಾಯಿಂಟ್‌ಗಳು ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಭಾಂಗಣದಲ್ಲಿ ಏಕಕಾಲದಲ್ಲಿ ಸುಮಾರು 500 ಜನರು ಕುಳಿತುಕೊಳ್ಳಬಹುದು.