ETV Bharat / bharat

ಬಾಲಕಿ ಮೇಲೆ ಅತ್ಯಾಚಾರವೆಸಗಿದ 10 ವರ್ಷದ ಬಾಲಕ.. ಸ್ವಂತ ಮಗಳನ್ನೇ ಕೊಂದ ಪಾಪಿ ತಂದೆ - madhyapradesh

8 ವರ್ಷದ ಬಾಲಕಿಯನ್ನು ಅಡ್ಡಹಾಕಿ ಬಲವಂತವಾಗಿ ಅತ್ಯಾಚಾರವೆಸಗಿದ 10ವರ್ಷದ ಬಾಲಕ - ಉತ್ತರ ಪ್ರದೇಶದಲ್ಲಿ ನಡೆದ ಎರಡು ಘಟನೆಗಳು - ಅನ್ಯ ಜಾತಿ ಹುಡುಗನನ್ನು ಪ್ರೀತಿ ಮಾಡಿದಕ್ಕಾಗಿ ಉಸಿರುಗಟ್ಟಿಸಿ ಕೊಂದ ತಂದೆ.

girl-raped-by-10-year-old-boy-on-farm-in-binjor
ಉತ್ತರ ಪ್ರದೇಶ: ಬಾಲಕಿ ಮೇಲೆ ಅತ್ಯಾಚಾರವೆಸಗಿದ 10 ವರ್ಷದ ಬಾಲಕ..ಸ್ವಂತ ಮಗಳನ್ನೆ ಕೊಂದ ಪಾಪಿ ತಂದೆ
author img

By

Published : Jan 12, 2023, 9:29 PM IST

ಬಿಜ್ನೋರ್(ಉತ್ತರ ಪ್ರದೇಶ): ಎಂಟು ವರ್ಷದ ಬಾಲಕಿಯ ಮೇಲೆ 10 ವರ್ಷದ ಬಾಲಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಬುಧವಾರ ನಡೆದಿದೆ. ಅತ್ಯಾಚಾರ ಘಟನೆಯ ಬಗ್ಗೆ ಬಾಲಕಿಯು ತನ್ನ ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯ ಕುಟುಂಬದವರು ಪೊಲೀಸ್ ಠಾಣೆಗೆ ಧಾವಿಸಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ. "ಧಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ರೈತನೊಬ್ಬ ತನ್ನ ಪತ್ನಿಯೊಂದಿಗೆ ಹೊಲದ ಕೆಲಸಕ್ಕೆ ಹೋಗಿದ್ದ. ಈ ಸಮಯದಲ್ಲಿ ಬಾಲಕಿ ಕೂಡ ತನ್ನ ತಂದೆ ತಾಯಿಯನ್ನು ಹಿಂಬಾಲಿಸಿ ಹೊಲದ ಕಡೆ ಹೊರಟಿದ್ದಳು, ಮಧ್ಯ ದಾರಿಯಲ್ಲಿ ಇದ್ದಕ್ಕಿದ್ದಂತೆ ಅದೇ ಗ್ರಾಮದ 10 ವರ್ಷದ ಬಾಲಕನೊಬ್ಬ ಬಂದು, ಬಾಲಕಿಯನ್ನು ಬಲವಂತವಾಗಿ ಬೇರೆ ಜಮೀನಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಬಾಲಕಿ ಮನೆಗೆ ಬಂದು ಅತ್ಯಾಚಾರದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೋಷಕರ ದೂರಿನನ್ವಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪೂರ್ವವಿಭಾಗದ ಎಸ್​ಪಿ, ಧರಂಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ "ಜನವರಿ 11 ರಂದು, ಸಂತ್ರಸ್ತೆಯ ತಂದೆ ಬಾಲಕಿಯ ಮೇಲೆ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು, ನಂತರ, ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ವಿಷಯದ ಬಗ್ಗೆ ತನಿಖೆ ನಡೆಸಿದರು, ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕಿಯ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ,'' ಎಂದು ಹೇಳಿದ್ದಾರೆ.

"ಆರೋಪಿ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯಕೀಯ ವರದಿಗಳ ಆಧಾರದ ಮೇಲೆ ಬಾಲಕನನ್ನು ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುವುದು" ಎಂದು ಎಸ್​ಪಿ ಧರಂ ಸಿಂಗ್ ಮಾಹಿತಿ ನೀಡಿದ್ದಾರೆ.

ಸ್ವಂತ ಮಗಳನ್ನೆ ಕೊಂದ ಪಾಪಿ ತಂದೆ: ಅನ್ಯ ಜಾತಿಯ ಹುಡುಗನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಕ್ಕಾಗಿ ಸ್ವಂತ ಮಗಳನ್ನು ಕೊಂದ ಆರೋಪದ ಮೇಲೆ ತಂದೆ - ಮಗ ಇಬ್ಬರನ್ನು ಪೊಲೀಸರು ಗುರುವಾರ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​ ಜಿಲ್ಲೆಯ ಐಂಚೋಡ ಕಾಂಬೋಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೊದಲು ತಮ್ಮ ಮಗಳು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಲಿಖಿತ ದೂರು ನೀಡಿ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ತನಿಖಾಧಿಕಾರಿಗೆ ಇದೊಂದು ಕೊಲೆ ಎಂಬುದು ಸ್ಪಷ್ಟವಾಗಿದ್ದು, ವಿಚಾರಣೆ ನಡೆಸಿದಾಗ ಆರೋಪಿಗಳಾದ ತಂದೆ ಮಗ ತಮ್ಮ ತಪ್ಪನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ.

ಈ ಪ್ರಕರಣದ ಬಗ್ಗೆ ಎಸ್​ಪಿ ಚಕ್ರೇಶ್ ಮಿಶ್ರಾ ಮಾತನಾಡಿ, ''ಜನವರಿ 10ರಂದು ಕಂಬೋಳ ಪೊಲೀಸ್ ಠಾಣೆ ವ್ಯಾಪ್ತಿಯ ದಾರಾಪುರ ಗ್ರಾಮದ ಶಾಹಿದ್ ಹುಸೇನ್ ಎಂಬುವರು ತಮ್ಮ ಮಗಳು ಅಸರಾಬಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರವಾದ ಕಾರಣ "ಉಸಿರುಕಟ್ಟುವಿಕೆ" ಎಂದು ತಿಳಿದು ಬಂದಿದೆ‘‘ ಎಂದು ಎಸ್​ಪಿ ಮಿಶ್ರಾ ಅವರು ತಿಳಿಸಿದರು.

ಮರಣೋತ್ತರ ಪರಿಕ್ಷೇಯ ವರದಿಯಿಂದಾಗಿ ಯುವತಿಯ ಸಾವಿಗೆ ಕುಟುಂಬವು ಭಾಗಿಯಾಗಿರುವುದು ದೃಢಪಟ್ಟಿದೆ. ಪೊಲೀಸ್​ ವಿಚಾರಣೆ ವೇಳೆ ಮೃತ ಯುವತಿಯು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು, ಅದಕ್ಕಾಗಿ ಮನೆಯವರು ಯುವತಿಯನ್ನು ಸಾಯಿಸಿದ್ದಾರೆ’’ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಮತ್ತಷ್ಟು ವಿವರಿಸಿದ ಎಸ್​ಪಿ, ’’ಮೊದಲು, ಹುಸೇನ್ ತನ್ನ ಮಗಳು ಅಸ್ರಾಬಿಗೆ ಶೆಹಜಾದ್‌ನೊಂದಿಗಿನ ಸಂಬಂಧವನ್ನು ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ. ಇದಕ್ಕೆ ಒಪ್ಪದೆ, ಶೆಹಜಾದ್‌ನನ್ನು ಕದ್ದು-ಮುಚ್ಚಿ ಭೇಟಿಯಾಗಲು ಆರಂಭಿಸಿದರು. ಇದನ್ನು ತಿಳಿದ ಅವಳ ತಂದೆ ಹುಸೇನ್ ಮತ್ತು ಸಹೋದರ ಶಹನವಾಜ್ ಅಸ್ರಾಬಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ‘‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೋಶಿಮಠದಲ್ಲಿ ಶಿಥಿಲ ಕಟ್ಟಡ ನೆಲಸಮ ಶುರು:1000 ವರ್ಷಗಳ ಹಿಂದೆಯೂ ಭೂ ಕುಸಿತದ ದುರಂತ ಸಂಭವಿಸಿದ್ದವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.