ನವದೆಹಲಿ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ 4ನೇ, ದೇಶದ ಮೊದಲ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಗೆ ಬೆದರಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ 'ಝಡ್' ಭದ್ರತೆ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
IB recommend Z security to Gautam Adani: ಗೌತಮ್ ಅದಾನಿ ಮತ್ತು ಕುಟುಂಬಕ್ಕೆ ಬೆದರಿಕೆಗಳು ತೀವ್ರವಾಗಿವೆ. ಇನ್ನಷ್ಟು ಸುರಕ್ಷತೆಗಾಗಿ "ಝಡ್ ಕೆಟಗರಿ" ಭದ್ರತೆ ಒದಗಿಸಬೇಕು ಎಂದು ಗುಪ್ತಚರ ದಳ ನೀಡಿದ ವರದಿಯ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಗುಪ್ತಚರ ದಳದಿಂದ ಬಂದಿರುವ ಮಾಹಿತಿಯ ಆಧಾರದ ಮೇಲೆ, ಅದಾನಿಗೆ ಸರ್ಕಾರವು ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಿದೆ. ಅದಕ್ಕಾಗಿ ಇಡೀ ವೆಚ್ಚವನ್ನು ಅವರೇ ಭರಿಸಲಿದ್ದಾರೆ.
ಭಾರತದ ಸಿರಿವಂತ ಮತ್ತು ಉನ್ನತ ಕೈಗಾರಿಕೋದ್ಯಮಿಗೆ ನೀಡಲಾದ ಭದ್ರತೆಯಲ್ಲಿ 30 ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅದಾನಿ ಗ್ರೂಪ್‌ನ ಷೇರುಗಳು ತೀವ್ರ ಏರಿಕೆ ಕಂಡಿವೆ. ಅದಾನಿ ವಿಶ್ವದ ಶ್ರೀಮಂತ ಕೈಗಾರಿಕೋದ್ಯಮಿಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಈ ಹಿಂದೆ ಭಾರತದ ಮತ್ತೊಬ್ಬ ಕೈಗಾರಿಕೋದ್ಯಮಿಯಾದ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೆ ಗೃಹ ಸಚಿವಾಲಯ 'ಝಡ್' ಭದ್ರತೆಯನ್ನು ನೀಡಿದ್ದು, ವೆಚ್ಚವನ್ನು ಅವರೇ ಭರಿಸುತ್ತಿದ್ದಾರೆ.
ಓದಿ: ಒಬ್ಬ ನಾಯಕನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ: ಮೋಹನ್ ಭಾಗವತ್