ETV Bharat / bharat

ಜಿ20 ಸಮ್ಮೇಳನದ ಸಭೆ: ವಾರಾಣಸಿಯಲ್ಲಿ ಬುಲ್ಡೋಜರ್‌ಗಳ ಮೂಲಕ 135 ಅಂಗಡಿಗಳ ನೆಲಸಮ - ಪಾಕಿಸ್ತಾನ ಮತ್ತು ಭಾರತ ವಿಭಜನೆ

ಜಿ20 ಸಮ್ಮೇಳನದ ಸಭೆಗಳ ನಿಮಿತ್ತ ಉತ್ತರ ಪ್ರದೇಶದ ವಾರಾಣಸಿಯಲ್ಲಿ 135 ಅಂಗಡಿಗಳನ್ನು ಬುಲ್ಡೋಜರ್‌ಗಳ ಮೂಲಕ ತೆರವು ಮಾಡಲಾಗಿದೆ.

g20-summit-bulldozers-ran-on-135-shops-in-varanasi
ಜಿ20 ಸಮ್ಮೇಳನದ ಸಭೆ: ವಾರಣಾಸಿಯಲ್ಲಿ ಬುಲ್ಡೋಜರ್‌ಗಳ ಮೂಲಕ 135 ಅಂಗಡಿಗಳ ನೆಲಸಮ
author img

By

Published : Mar 9, 2023, 3:47 PM IST

ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ಗಳು ಸದ್ದು ಮಾಡಿವೆ. ವಾರಾಣಸಿಯ ಗೊಡೌಲಿಯಾ ಚಿತ್ತರಂಜನ್ ಪ್ರದೇಶದಲ್ಲಿ ಅಂದಾಜು 135 ಅಂಗಡಿಗಳನ್ನು ಬುಲ್ಡೋಜರ್‌ಗಳ ಮೂಲಕ ನೆಲಸಮಗೊಳಿಸಲಾಗಿದೆ. ಹೋಳಿ ಹಬ್ಬದ ಸಂಭ್ರಮದ ಮರು ದಿನವೇ ನಡೆದ ಧ್ವಂಸ ಕಾರ್ಯಾಚರಣೆಯಿಂದ ಸಣ್ಣ - ಪುಟ್ಟ ವ್ಯಾಪಾರಿಗಳ ಬದುಕು ಬೀದಿಗೆ ಬಂದಂತಾಗಿದೆ. ಮತ್ತೊಂದೆಡೆ, ಕಾನೂನು ಬದ್ಧವಾಗಿರುವ ವ್ಯಾಪಾರಿಗಳಿಗೆ ದಶಾಶ್ವಮೇಧ ಪ್ರದೇಶದಲ್ಲಿ ನಿರ್ಮಿಸಲಾದ ನೂತನ ಪ್ಲಾಜಾದಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1950ರಲ್ಲಿ ಪಾಕಿಸ್ತಾನ ಮತ್ತು ಭಾರತ ವಿಭಜನೆಯ ಸಮಯದಲ್ಲಿ ನಿರಾಶ್ರಿತರಿಗೆ ವಾರಾಣಸಿಯಲ್ಲಿ ಅಂಗಡಿಗಳನ್ನು ಸ್ಥಾಪಿಸಲು ಮಳಿಗೆಗಳನ್ನು ನೀಡಲಾಗಿತ್ತು. ಆದರೆ, ಇದೀಗ ಜಿ20 ಸಮ್ಮೇಳನದ ಒಟ್ಟು 6 ಸಭೆಗಳು ವಾರಾಣಸಿಯಲ್ಲಿ ಏಪ್ರಿಲ್, ಮೇ ಮತ್ತು ಜೂನ್‌ ತಿಂಗಳಲ್ಲಿ ನಡೆಯಲಿವೆ. ಇದಕ್ಕಾಗಿ ಭರದ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ನಗರವನ್ನು ಸುಂದರಗೊಳಿಸುವ ಕಾರ್ಯಗಳು ಕೂಡ ಜೋರಾಗಿವೆ. ಇದರ ಭಾಗವಾಗಿಯೇ ನಿರಾಶ್ರಿತರಿಗೆ 135 ಅಂಗಡಿಗಳ ಜೊತೆಗೆ ಇನ್ನೆರಡು ಅಂಗಡಿಗಳು ಒಂದೇ ಏಟಿಗೆ ಬುಲ್ಡೋಜರ್‌ಗಳಿಂದ ನೆಲಸಮ ಮಾಡಲಾಗಿದೆ. ಹೀಗಾಗಿ ನಮ್ಮ ಮುಂದಿನ ಪುನರ್ವಸತಿ, ಜೀವನೋಪಾಯ ಹೇಗೆ ಎಂಬ ವ್ಯಾಪಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಎಲ್ಲ ದಾಖಲೆಗಳು ಇದ್ದರೂ ಅಂಗಡಿಗಳು ನೆಲಸಮ: ಭಾರತ - ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಬನಾರಸ್‌ಗೆ ಸಿಂಧಿ ಸಮುದಾಯದ ಜನರ ಬಂದಿದ್ದರು. ಈ ನಿರಾಶ್ರಿತ ಸಮುದಾಯದ ಜನರ ಜೀವನೋಪಾಯಕ್ಕಾಗಿ ಅಂದಿನ ಸರ್ಕಾರವು ಅಂಗಡಿಗಳನ್ನು ಒದಗಿಸಿತ್ತು. ಇದರಿಂದ 1950ರಲ್ಲಿ ಇಲ್ಲಿ ಮಾರುಕಟ್ಟೆಯನ್ನು ಸ್ಥಾಪಿಸಲಾಗಿತ್ತು. 1950ರಲ್ಲಿ ನಮಗೆ ಅಂಗಡಿಗಳನ್ನು ಹಸ್ತಾಂತರ ಕುರಿತು ಲಿಖಿತ ಬರೆದು ದಾಖಲೆಗಳನ್ನು ನೀಡಲಾಗಿದ್ದು, ಅದರ ಪ್ರಮಾಣ ಪತ್ರವೂ ಇಂದಿಗೂ ಎಲ್ಲರ ಬಳಿ ಇದೆ. ಆದರೂ, ನಮ್ಮ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಹೈಕೋರ್ಟ್​ನಲ್ಲಿ ಗೆಲುವು ಸಿಕ್ಕಿತ್ತು: ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಅಂಗಡಿಗಳನ್ನು ಕೆಡವುವ ವಿಷಯ ಮುನ್ನಲೆಗೆ ಬಂದಿತ್ತು. ಆಗ ನಾವು ಹೈಕೋರ್ಟ್‌ನ ಮೊರೆ ಹೋಗಿದ್ದೆವು. ನಮ್ಮ ಮನವಿಯನ್ನು ಆಲಿಸಿದ ಉಚ್ಛ ನ್ಯಾಯಾಲಯವು 1980ರಲ್ಲಿ ಅಂಗಡಿಗಳನ್ನು ಧ್ವಂಸ ಯತ್ನಕ್ಕೆ ನಿಷೇಧ ಹೇರಿತ್ತು. ಅಂದಿನಿಂದಲೂ ಈ ಅಂಗಡಿಗಳನ್ನು ತೆರವು ಪ್ರಯತ್ನಗಳು ನಡೆದಾಗಲೆಲ್ಲ ನ್ಯಾಯಾಲಯದಿಂದ ಪರಿಹಾರ ಪಡೆದು ಅಂಗಡಿಗಳು ಧ್ವಂಸವಾಗದಂತೆ ರಕ್ಷಿಸಿಕೊಂಡು ಬರಲಾಗಿದೆ.

ಈ ಬಾರಿ ವಾರಾಣಸಿ ಅಭಿವೃದ್ಧಿ ಪ್ರಾಧಿಕಾರದ ನೋಟಿಸ್ ಜಾರಿ ಮಾಡಿದಾಗಲೂ ಎಲ್ಲ ಸೂಕ್ತ ದಾಖಲೆಗಳನ್ನು ಸಲ್ಲಿಸಲಾಗಿದೆ. ಆದರೆ, ಇದಾದ ನಂತರವೂ ನಗರಸಭೆ ಅಂಗಡಿಗಳನ್ನು ಧ್ವಂಸ ಮಾಡಿದೆ. ಈ ಕ್ರಮದಿಂದ ದೇಶದ ವಿಭಜನೆಯ ಸಮಯದಲ್ಲಿ ನಿರಾಶ್ರಿತರಾಗಿ ಬಂದಿದ್ದ ನಾವು ಮತ್ತೆ ನಿರಾಶ್ರಿತರಾಗಿದ್ದೇವೆ ಎಂದು ವ್ಯಾಪಾರಿಗಳು ಆಳಲು ತೋಡಿಕೊಂಡರು.

ಅಧಿಕಾರಿಗಳು ಹೇಳಿದ್ದೇನು?: ಈ ಕುರಿತು ನಗರಸಭೆಯ ಹೆಚ್ಚುವರಿ ಆಯುಕ್ತ ಸುಮಿತ್ ಕುಮಾರ್ ಮಾತನಾಡಿ, ನಗರಸಭೆಯಿಂದ ದಾಖಲೆಗಳ ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ. ವ್ಯಾಪಾರಿಗಳ ಬಳಿ ಎಲ್ಲ ದಾಖಲೆಗಳು ಸರಿಯಾಗಿದ್ದರೆ, ಅವರಿಗೆ ಪರಿಹಾರ ಸಿಗುತ್ತದೆ. ಸದ್ಯ ನಮಗೆ ನೀಡಿದ ಆದೇಶದ ಮೇರೆಗೆ ನಾವು ಅಂಗಡಿಗಳನ್ನು ನೆಲಸಮಗೊಳಿಸಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ವಾರಾಣಸಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸುನಿಲ್ ವರ್ಮಾ ಮಾತನಾಡಿ, ಚಿತ್ತರಂಜನ್ ಪ್ರದೇಶದಲ್ಲಿ ಹೊರಹಾಕಲ್ಪಟ್ಟವರಿಗೆ ದಶಾಶ್ವಮೇಧ್ ಪ್ರದೇಶದಲ್ಲಿ ನಿರ್ಮಿಸಲಾದ ನೂತನ ಪ್ಲಾಜಾದಲ್ಲಿ ಅಂಗಡಿಗಳನ್ನು ಮಂಜೂರು ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲು ಬಂದವರಿಗೆ ಆದ್ಯತೆ ಎಂಬ ಮಾದರಿಯಲ್ಲಿ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಈ ಎಲ್ಲ ವ್ಯಾಪಾರಿಗಳಿಗೆ ಇಲ್ಲಿ ಶಾಶ್ವತ ಮಳಿಗೆಗಳನ್ನು ಒದಗಿಸಲಾಗುವುದು. ಆದರೆ, ಹೊಸ ಅಂಗಡಿಗಳಿಗೆ ವ್ಯಾಪಾರಿಗಳು ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: IAS​ ಅಧಿಕಾರಿಯನ್ನೇ ಕೂಡಿಹಾಕಿ ಥಳಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡ ಮೀನುಗಾರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.