ಪಾಟ್ನಾ: ಬಿಹಾರದ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ನ ಐದು ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರುವಾರ ಭೇಟಿಯಾದರು.
ಇದು ಸಿಎಂ ಅವರ ಅಧಿಕೃತ ನಿವಾಸದಲ್ಲಿ ನಡೆದ ಸೌಜನ್ಯ ಸಭೆ, ಇದು ಯಾವುದೇ ರಾಜಕೀಯ ಮೈತ್ರಿ ಅಥವಾ ಜೆಡಿ-ಯು ಜೊತೆ ವಿಲೀನಕ್ಕೆ ಯಾವುದೇ ಸಂಬಂಧವಿಲ್ಲ, ನಾವು ಬಿಹಾರದ ಸೀಮಾಂಚಲ್ ಪ್ರದೇಶದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇವೆ ಎಂದು ಎಐಎಂಐಎಂನ ಬಿಹಾರ ಘಟಕದ ಅಧ್ಯಕ್ಷ ಅಖ್ತರುಲ್ ಇಮಾನ್ ಹೇಳಿದ್ದಾರೆ.
ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಅಮೌರ್, ಕೊಚ್ಧಾಮ್, ಜೋಕಿಹಾಟ್, ಬಯಾಸಿ ಮತ್ತು ಬಹದ್ದೂರ್ಗಂಜ್ ಕ್ಷೇತ್ರಗಳಲ್ಲಿ ಗೆದ್ದಿತ್ತು. ಸೀಮಾಂಚಲ್ ಪ್ರದೇಶದಲ್ಲಿ ತನ್ನ ಅದ್ಭುತ ಪ್ರದರ್ಶನದ ನಂತರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸದುದ್ದೀನ್ ಒವೈಸಿ ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಓದಿ : ಅಧಿವೇಶನ ಆರಂಭಕ್ಕೆ ಕ್ಷಣಗಣನೆ: ಸರ್ವ ಪಕ್ಷ ಸಭೆ ಕರೆದ ಸ್ಪೀಕರ್ ಓಂ ಬಿರ್ಲಾ
"ನಾವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ನಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಎಐಎಂಐಎಂ ಶಾಸಕ ಶಹನವಾಜ್ ಆಲಂ ಹೇಳಿದ್ದಾರೆ.