ETV Bharat / bharat

3 ತಿಂಗಳ ಪುಟ್ಟ ಕಂದ ಸೇರಿ ಮೂವರು ಮಕ್ಕಳನ್ನು ಕೊಂದು ಬಾವಿಗೆಸೆದ ಪಾಪಿ ಅಪ್ಪ - odishas Sundargarh district

ಮನೆಗೆ ಕುಡಿದು ಬಂದು ಪತ್ನಿಯೊಂದಿಗೆ ಜಗಳ ತೆಗೆದಿದ್ದ ವ್ಯಕ್ತಿಯೋರ್ವ ಕೊಡಲಿಯಿಂದ ಹಲ್ಲೆ ನಡೆಸಿ ಆಕೆಯ ಕೊಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಆಕೆ ಕಟುಕ ಗಂಡನ ಕೈಯಿಂದ ಬಚಾವ್​ ಆಗಿದ್ದಾಳೆ. ಆದರೆ, ಪುಟ್ಟ ಮಕ್ಕಳೆನ್ನದೇ ಆ ಪಾಪಿ ತಂದೆ ತನ್ನ ಮೂವರು ಮಕ್ಕಳನ್ನೂ ಕೊಚ್ಚಿ ಕೊಲೆ ಮಾಡಿದ್ಧಾನೆ.

Father kills and throws bodies of 3 children into well
ಮೂವರು ಮಕ್ಕಳನ್ನು ಕೊಂದು ಬಾವಿಗೆ ಎಸೆದ ಪಾಪಿ ಅಪ್ಪ
author img

By

Published : May 1, 2022, 1:44 PM IST

ಸುಂದರ್​ಗಢ್​ (ಒಡಿಶಾ): ಅಪ್ಪ-ಅಮ್ಮನ ಕಲಹದಲ್ಲಿ ಮೂವರು ಪುಟ್ಟ ಕಂದಮ್ಮಗಳು ಬಲಿಯಾಗಿದ್ಧಾರೆ. ಹೆತ್ತ ತಂದೆಯೇ ಸಣ್ಣ-ಸಣ್ಣ ಮಕ್ಕಳನ್ನು ದಾರುಣವಾಗಿ ಕೊಲೆಗೈದು ಬಾವಿಗೆ ಎಸೆದಿದ್ದಾನೆ. ಒಡಿಶಾದ ಸುಂದರ್​ಗಢ್​ ಜಿಲ್ಲೆಯ ಕುಲಾ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

ಪಾಂಡು ಮುಂಡ ಎಂಬಾತನೇ ಈ ಪಾಪಿ ತಂದೆಯಾಗಿದ್ದು, 5 ವರ್ಷದ ಮಗಳು ಸೀಮಾ, 2 ವರ್ಷದ ಮಗ ರಾಜು ಮತ್ತು ಮೂರು ತಿಂಗಳ ಪುಟ್ಟ ಮಗಳು ತಂದೆಯ ಕೈಯಲ್ಲಿ ಹತರಾದ ನತದೃಷ್ಟರು.

ಮೂವರು ಮಕ್ಕಳನ್ನು ಕೊಂದು ಬಾವಿಗೆ ಎಸೆದ ಪಾಪಿ ಅಪ್ಪ

ಕುಡಿದು ಬಂದಿದ್ದ ಹಂತಕ: ಪಾಂಡು ಶನಿವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ. ಇದರಿಂದ ಪತ್ನಿ ಧುಬಾಲಿಯೊಂದಿಗೆ ಜಗಳ ಶುರುವಾಗಿತ್ತು. ಅಂತೆಯೇ ಕೊಡಲಿ ತೆಗೆದುಕೊಂಡು ಪತ್ನಿ ಮೇಲೆ ದಾಳಿ ಮಾಡಿ ಕೊಲೆ ಯತ್ನಿಸಿದ್ದ. ಆಗ ಹಂತಕ ಪತಿಯಿಂದ ತಪ್ಪಿಸಿಕೊಂಡು ಆಕೆ ಜೀವ ಉಳಿಸಿಕೊಂಡಿದ್ದಾಳೆ. ಆದರೆ, ಇದೇ ಕೊಡಲಿಯಿಂದ ಸಣ್ಣ ಮಕ್ಕಳ ಮೇಲೆ ಮೇಲೂ ಕಟುಕ ಪಾಂಡು ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಅಲ್ಲದೇ, ರಾತ್ರಿಯೇ ಮೂವರು ಮಕ್ಕಳ ಶವಗಳನ್ನು ಪಕ್ಕದ ಬಾವಿಯಲ್ಲಿ ಎಸೆದು ಪರಾರಿಯಾಗಿದ್ಧಾನೆ. ಈ ಘಟನೆಯ ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳ ಶವಗಳನ್ನು ಬಾವಿಯಿಂದ ಹೊರತೆಗೆದಿದ್ಧಾರೆ. ಸದ್ಯ ಮೂರೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದಾಗ ಕಾರು-ಲಾರಿ ಅಪಘಾತ; ಮಹಿಳೆ ಸಾವು, ನಾಲ್ವರಿಗೆ ಗಾಯ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.