ETV Bharat / bharat

ಉಗ್ರರ ಮೇಲಿನ ಏರ್​ಸ್ಟ್ರೈಕ್​ ಕಂಡು ಇಡೀ ಜಗತ್ತೆ ಅಚ್ಚರಿಗೊಂಡಿತ್ತು: ಅಮಿತ್ ಶಾ

ವೈಮಾನಿಕ ದಾಳಿಗಳು ಅಮೆರಿಕ ಮತ್ತು ಇಸ್ರೇಲ್​ನಂತಹ ಪ್ರತಿದಾಳಿ ನಡೆಸುವ ಸಾಮರ್ಥ್ಯವಿರುವ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

author img

By

Published : Dec 4, 2021, 8:59 PM IST

Amit shah
ಅಮಿತ್ ಶಾ

ನವದೆಹಲಿ: ಹಿಂದೆಲ್ಲಾ ಉಗ್ರರು ಬಂದು ನಮ್ಮ ಸೈನಿಕರನ್ನು ಹತ್ಯೆ ಮಾಡಿ ಹಿಂತಿರುಗಿದ್ದಾಗ ಯಾವುದೇ ಪ್ರತೀಕಾರ ನೀಡುತ್ತಿರಲಿಲ್ಲ. ಆದರೆ, ಇದೀಗ ನಮ್ಮ ಗಡಿ ಉಲ್ಲಂಘನೆಯಂತಹ ಕೃತ್ಯ ಎಸಗವುದು ಅಷ್ಟು ಸುಲಭದ ಮಾತಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಾಬೀತು ಮಾಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಉತ್ತರ ಎಂದರೆ ಪ್ರಬಲ ಪ್ರತ್ಯುತ್ತರ ನೀಡುವುದು. ಇದು ದೇಶ ಮೊದಲು ಎಂಬ ಸಂಕಲ್ಪವನ್ನು ಮುಂದಿಡುತ್ತದೆ ಎಂದು ಶಾ ಪ್ರತಿಪಾದಿಸಿದ್ದಾರೆ.

ವೈಮಾನಿಕ ದಾಳಿಯ ಮೂಲಕ ಭಾರತೀಯರು ಉಗ್ರರ ಮನೆಗಳೊಳಗೆ ನುಗ್ಗಿ ಹೊಡೆದು ('ಘರ್ ಮೇ ಘುಸ್ ಕರ್') ಭಯೋತ್ಪಾದಕ ದಾಳಿಗೆ ತಕ್ಕ ಉತ್ತರವನ್ನು ನೀಡಿದಾಗ ಇಡೀ ಜಗತ್ತೇ ಆಶ್ಚರ್ಯಚಕಿತರಾದರು ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೇ ಅಮಿತ್ ಶಾ ಟಾಂಗ್​ ಕೊಟ್ಟಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಮಾತ್ರ ಇಂತಹ ದಾಳಿಯ ಪ್ರತ್ಯುತ್ತರ ನೀಡಿ ವಿಶ್ವಕ್ಕೆ ತಮ್ಮ ಶಕ್ತಿ ಪ್ರರ್ದಶನ ಮಾಡಿದ್ದವು. ಈ ದಾಳಿಗಳು ಅಂತಹ ಕಾರ್ಯಾಚರಣೆಗಳ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಮೂರನೇ ಹೆಸರಾಗಿ ಸೇರಿಸಿದೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ರಕ್ಷಣಾ ನೀತಿಯು ವಿದೇಶಾಂಗ ನೀತಿಯ ನೆರವಿನಿಂದ ಹೊರಬಂದಿದೆ. ಎಲ್ಲರೊಂದಿಗೆ ಶಾಂತಿ ಬಯಸುತ್ತೇವೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ನಾವು ಯಾರೊಂದಿಗೂ ದ್ವೇಷ ಬಯಸುವುದಿಲ್ಲ. ಆದರೆ, ನಮ್ಮ ಗಡಿಗಳನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿನ್​​ ಹಾಕಲು ಬಂದ ಮಹಿಳಾ ಸಿಬ್ಬಂದಿ ಮೇಲೆ ಇಟ್ಟಿಗೆಯಿಂದ ಹಲ್ಲೆ.. ವಿಡಿಯೋ ವೈರಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.