ETV Bharat / bharat

ಡೇರಾ ಸಚ್ಚಾ ಸೌದಾ ಅನುಯಾಯಿ ಕೊಲೆ ಕೇಸ್​: ಗ್ಯಾಂಗ್​ಸ್ಟರ್​ಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು - ಪಂಜಾಬ್​ ಪೊಲೀಸರು

ಜೈಪುರದ ರಾಮನಗರಿಯ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಂಗ್​ಸ್ಟರ್ ರಾಜ್ ಹೂಡಾ ಅಡಗಿದ್ದ ಖಚಿತ ಮಾಹಿತಿ ಹಿನ್ನೆಲೆ ಪಂಜಾಬ್​ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದೆ.

encounter-in-dera-premi-murder-case-in-jaipur-gangster-raj-hooda-shot-in-the-leg
ಡೇರಾ ಸಚ್ಚಾ ಸೌದಾ ಅನುಯಾಯಿ ಕೊಲೆ ಕೇಸ್​: ಗ್ಯಾಂಗ್​ಸ್ಟರ್​ಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು
author img

By

Published : Nov 20, 2022, 6:10 PM IST

ಜೈಪುರ/ಚಂಡೀಗಢ: ಪಂಜಾಬ್​ನಲ್ಲಿ ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್​ ಸಿಂಗ್​ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು ರಾಜಸ್ಥಾನದ ಜೈಪುರಕ್ಕೆ ತೆರಳಿದ್ದಾರೆ. ಈ ವೇಳೆ ಪಂಜಾಬ್​ ಪೊಲೀಸರು ಮತ್ತು ಆರೋಪಿಗಳ ನಡುವೆ ಎನ್​ಕೌಂಟರ್​ ನಡೆದಿದೆ. ರಾಜ್ ಹೂಡಾ ಎಂಬ ಗ್ಯಾಂಗ್​ಸ್ಟರ್​ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮ ನಿಂದನೆ ಪ್ರಕರಣದ ಆರೋಪಿಯಾಗಿದ್ದ ಪ್ರದೀಪ್​ ಸಿಂಗ್​ನನ್ನು ನ.10ರಂದು ಫರೀದ್​ಕೋಟ್​ನಲ್ಲಿ ಆರು ಜನ ಶೂಟರ್​ಗಳು ಸೇರಿಕೊಂಡು ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಪಂಜಾಬ್​ ಪೊಲೀಸರು ಜೈಪುರಕ್ಕೆ ಆಗಮಿಸಿದ್ದರು.

ಅಪಾರ್ಟ್‌ಮೆಂಟ್‌ನಲ್ಲಿ ಅಡಗಿದ್ದ ಗ್ಯಾಂಗ್​ಸ್ಟರ್​: ರೋಹ್ಟಕ್ ಹರಿಯಾಣದ ಗ್ಯಾಂಗ್​ಸ್ಟರ್​ ಆಗಿರುವ ರಾಜ್ ಹೂಡಾ ಜೈಪುರದಲ್ಲಿ ಅಡಗಿದ್ದಾನೆ ಎಂದು ಪಂಜಾಬ್ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದೇ ಮಾಹಿತಿ ಮೇರೆಗೆ ಭಾನುವಾರ ಜೈಪುರಕ್ಕೆ ಪೊಲೀಸರು ತೆರಳಿದ್ದರು. ಜೈಪುರದ ರಾಮನಗರಿಯ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಅಡಗಿದ್ದ ಖಚಿತ ಮಾಹಿತಿ ಹಿನ್ನೆಲೆ ಪೊಲೀಸರು ಹಿಡಿಯಲು ಹೋಗಿದ್ದರು.

ಈ ವೇಳೆ ಪೊಲೀಸ್ ತಂಡ ಹಾಗೂ ಗ್ಯಾಂಗ್​ಸ್ಟರ್​ ರಾಜ್ ಹೂಡಾ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ರಾಜ್ ಹೂಡಾ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಇದರಿಂದ ಹಂತಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾಲಿಗೆ ಗುಂಡು ತಾಗಿರುವ ಹಿನ್ನೆಲೆಯಲ್ಲಿ ರಾಜ್ ಹೂಡಾಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಪೊಲೀಸರು ಗ್ಯಾಂಗ್​ಸ್ಟರ್​ನನ್ನು ಪಂಜಾಬ್‌ಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಗ್ಯಾಂಗ್‌ಸ್ಟರ್ ರಾಜ್ ಹೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆರೋಪಿಯನ್ನು ದಾಖಲಿಸಿದ ಆಸ್ಪತ್ರೆಯ ಮಾಹಿತಿಯ ಗೌಪ್ಯವಾಗಿ ಇಡಲಾಗಿದೆ.

ಏನಿದು ಪ್ರಕರಣ?: 2015 ರಲ್ಲಿ ಬರ್ಗರಿ ಗ್ರಾಮದಲ್ಲಿ ಗುರು ಗ್ರಂಥ ಸಾಹಿಬ್​ಅನ್ನು ಅಪವಿತ್ರಗೊಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ದಾಖಲಾದ ಧರ್ಮ ನಿಂದನೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿಯಾಗಿದ್ದ ಪ್ರದೀಪ್ ಸಿಂಗ್ 63ನೇ ಆರೋಪಿಯಾಗಿದ್ದ. ಆದರೆ, ಜಾಮೀನಿನ ಮೇಲೆ ಹೊರಬಂದಿದ್ದ. ನ.10ರಂದು ಪ್ರದೀಪ್ ಸಿಂಗ್​ನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಫರೀದ್‌ಕೋಟ್‌ನಲ್ಲಿ ತಮ್ಮ ಡೈರಿಯಲ್ಲಿದ್ದಾಗ ಪ್ರದೀಪ್ ಸಿಂಗ್ ಮೇಲೆ ಆರು ಜನ ಶೂಟರ್​​ಗಳು ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದರು. ಪ್ರದೀಪ್ ಮೇಲೆ 60 ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಬೆನ್ನಲ್ಲೇ ಕಾರ್ಯಪ್ರವೃತರಾಗಿದ್ದ ಪೊಲೀಸರು, ಆರೋಪಗಳನ್ನು ಪತ್ತೆ ಹಚ್ಚಿದ್ದರು.

ಆರು ಶೂಟರ್‌ಗಳ ಪೈಕಿ ನಾಲ್ವರು ಹರಿಯಾಣದವರು ಮತ್ತು ಇಬ್ಬರು ಪಂಜಾಬ್‌ನವರು ಎಂದು ಗುರುತಿಸಲಾಗಿತ್ತು. ಅಲ್ಲದೇ, ಈ ಶಂಕಿತರೆಲ್ಲರೂ ಗ್ಯಾಂಗ್​ಸ್ಟರ್​​ ಲಾರೆನ್ಸ್ ಬಿಷ್ಣೋಯ್ ಗುಂಪಿಗೆ ಸೇರಿದವರು ಎಂದು ಪತ್ತೆ ಹಚ್ಚಲಾಗಿತ್ತು. ಜೊತೆಗೆ ನ.11ರಂದು ಪಟಿಯಾಲ ಬಳಿ ಮಾಡಿ ಮೂವರನ್ನು ಶೂಟರ್​ಗಳನ್ನು ಪೊಲೀಸರು ಬಂಧಿಸಿದ್ದರು. ಆಗಲೂ ಕೂಡ ಹಂತಕರು ಮತ್ತು ಪೊಲೀಸರು ನಡುವೆ ಗುಂಡಿನ ದಾಳಿ ನಡೆದಿತ್ತು.

ಇದನ್ನೂ ಓದಿ: ಧರ್ಮ ನಿಂದನೆ ಪ್ರಕರಣದ ಆರೋಪಿ ಹತ್ಯೆ ಕೇಸ್: ಮೂವರು ಶೂಟರ್​ಗಳನ್ನು ಬಂಧಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.