ETV Bharat / bharat

ತಂಗಿ ಮೇಲೆ ಲೈಂಗಿಕ ಕಿರುಕುಳ: ವಿವಾಹಿತ ಸಹೋದರಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲು!

ಮನೆಯ ಹಾಲ್‌ನಲ್ಲಿ ಮಲಗಿದ್ದ ತಂಗಿಯ ಮೇಲೆ ಅಕ್ಕನಿಂದ ಲೈಂಗಿಕ ದೌರ್ಜನ್ಯ - ತಂಗಿಯ ದೂರಿನ ಆಧಾರದ ಮೇಲೆ ಪುಣೆ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಆರೋಪಿ ಅಕ್ಕನ ವಿರುದ್ಧ ಪ್ರಕರಣ ದಾಖಲು

author img

By

Published : Jan 27, 2023, 10:05 PM IST

Elder sister molested younger sister in Pune
ತಂಗಿಗೆ ಲೈಂಗಿಕ ಕಿರುಕುಳ:ವಿವಾಹಿತ ಸಹೋದರಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲು!

ಪುಣೆ(ಮಹಾರಾಷ್ಟ್ರ): ಅಕ್ಕ ತನ್ನ ಸ್ವಂತ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಪುಣೆಯ ವಿಮಾನನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಅಕ್ಕನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿದೆ. 18 ವರ್ಷದ ತಂಗಿ ನೀಡಿದ ದೂರಿನ ಆಧಾರದ ಮೇಲೆ ಪುಣೆ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ 24 ವರ್ಷದ ಆರೋಪಿ ಅಕ್ಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ನೀಡಿರುವ ಪ್ರಕಾರ, ಆರೋಪಿ ಅಕ್ಕ ಉನ್ನತ ಶಿಕ್ಷಣ ಪಡೆದಿದ್ದು, ವಿವಾಹಿತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ದೂರುದಾರ 18 ವರ್ಷದ ಬಾಲಕಿ ಮತ್ತು 24 ವರ್ಷದ ಆರೋಪಿ ಸಹೋದರಿಯಾಗಿದ್ದಾರೆ. ಇಬ್ಬರೂ ವಿಮಾನನಗರ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಜನವರಿ 23 ರಂದು ತಂಗಿ ಹಾಲ್ ನಲ್ಲಿ ಮಲಗಿರುವಾಗ ಆರೋಪಿ ಅಕ್ಕ ಕಿರುಕುಳ ನೀಡಿದ್ದಾರೆ. ಅಕ್ಕನ ಕಿರುಕುಳ ಸಹಿಸಲಾರದೇ ಸಹೋದರಿ ಪೊಲೀಸ್ ಠಾಣೆಗೆ ಧಾವಿಸಿ ಅಕ್ಕನ ವಿರುದ್ಧ ದೂರು ದಾಖಲಿಸಿದ್ದಾರೆ.

ತಂಗಿಯ ತೀವ್ರ ಆಕ್ಷೇಪ: ಮನೆಯ ಹಾಲ್‌ನಲ್ಲಿ ಮಲಗಿದ್ದ ತಂಗಿಯ ಮೇಲೆ ಅಕ್ಕನಿಂದ ಲೈಂಗಿಕ ದೌರ್ಜನ್ಯ ನಡೆದಿದೆಯಂತೆ. ಮಲಗಿದ್ದ ತಂಗಿಗೆ ಮೊದಮೊದಲು ಏನಾಗುತ್ತಿದೆ ಎಂಬುದೇ ತಿಳಿದಿರಲಿಲ್ಲ. ಕಣ್ಣು ತೆರೆದಾಗ ಅಕ್ಕ ತನ್ನ ಮೈಮೇಲೆ ಕೈಯಾಡಿಸುವುದನ್ನು ಕಂಡಿದ್ದಾಳೆ. ಬಳಿಕ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆದರೆ, ಅಕ್ಕ ಬಲವಂತ ಮಾಡಲು ಯತ್ನಿಸಿದ್ದಾರೆ ಎಂದು ದೂರುದಾರೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ. ಇದಕ್ಕೆ ತಂಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ತಂಗಿಯ ದೇಹವನ್ನು ಅಕ್ಕ ಅನುಚಿತವಾಗಿ ಸ್ಪರ್ಶಿಸಿ ತಬ್ಬಿಕೊಂಡಿದ್ದರು. ಈ ಘಟನೆಯಿಂದ ತಂಗಿ ಭಯಭೀತಳಾಗಿದ್ದು ಮತ್ತು ಅಕ್ಕ ತನ್ನ ಮಾತನ್ನು ಕೇಳದಿದ್ದಾಗ ಅಂತಿಮವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೇನೆ ಎಂದು ತನ್ನ ದೂರಿನಲ್ಲಿ ಸಂತ್ರಸ್ತೆ ಹೇಳಿದ್ದಾರೆ.

ಬಿಹಾರದಲ್ಲಿ ಸಾಮೂಹಿಕ ಅತ್ಯಾಚಾರ: ಇದು ಪುಣೆಯ ಕಥೆಯಾದರೆ, ಬಿಹಾರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಗಣರಾಜ್ಯೋತ್ಸವ ಆಚರಣೆಗೆಂದು ಗುರುವಾರ ಶಾಲೆಗೆ ತೆರಳುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಹೀನ ಕೃತ್ಯದ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಡೀ ದೇಶವು ಗುರುವಾರ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮದಲ್ಲಿ ಇತ್ತು. ಇದೇ ವೇಳೆ, ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಅಪ್ತಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮಾನಗೇಡಿ ಘಟನೆ ವರದಿಯಾಗಿದೆ. ಇಲ್ಲಿನ ಸಿಕ್ರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಮೂವರು ಆರೋಪಿಗಳು ಆಕೆಯನ್ನು ಬಲವಂತವಾಗಿ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮನೀಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಪತ್ನಿ ನೋಡಲು ಚೆನ್ನಾಗಿಲ್ಲ ಎಂದು ಕೊಲೆಗೈದ ಪತಿಗೆ ದಂಡಸಹಿತ ಜೀವಾವಧಿ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.