ಪುಣೆ : ಪುಣೆಯ ಕತ್ರಜ್ ಪ್ರದೇಶದ ಪುಣೆ - ಬೆಂಗಳೂರು ಹೆದ್ದಾರಿ ಬಳಿ ಸರ್ವಿಸ್ ರಸ್ತೆಯಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ವಿಲಕ್ಷಣ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಏಳರಿಂದ ಎಂಟು ವಾಹನಗಳು ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಸುಮಾರು ನಾಲ್ಕರಿಂದ ಐದು ಜನರು ಗಾಯಗೊಂಡಿದ್ದಾರೆ. ಇವರನ್ನ ಸ್ಥಳಿಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿಶಾಮಕ ದಳದ ಪೊಲೀಸರ ಮಾಹಿತಿ ಪ್ರಕಾರ, ಪುಣೆ - ಬೆಂಗಳೂರು ಹೆದ್ದಾರಿಯ ಜಂಬುಲ್ವಾಡಿ ರಸ್ತೆಯಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಕಂಟೇನರ್ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಮತ್ತು ಕ್ಲೀನರ್ ವಾಹನದಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ ಇನ್ನೂ ಕೆಲವು ವಾಹನಗಳನ್ನು ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ಹಿಂದಿನಿಂದ ಬರುತ್ತಿದ್ದ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ. ನಂತರ ಎಲ್ಲ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಈ ವಿಲಕ್ಷಣ ಅಪಘಾತಕ್ಕೆ ಕಾರಣವಾಗಿದೆ.
ಓದಿ: ಭೀಕರ ರಸ್ತೆ ಅಪಘಾತ: ಚಿಕಿತ್ಸೆಗೆ ಎಂದು ಹೊರಟು ಚಿರನಿದ್ರೆಗೆ ಜಾರಿದ ನಾಲ್ವರು
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಸಿಂಹಗಡ್ ರಸ್ತೆ ಪೊಲೀಸ್, ಪಿಎಂಆರ್‌ಡಿಎಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ನಂತರ ಕೆಲ ಹೊತ್ತು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.