ಮಲಪ್ಪುರಂ(ಕೇರಳ): ಸಾಮಾನ್ಯವಾಗಿ ಕೋಳಿ ಮೊಟ್ಟೆ ಇತರೆ ಪಕ್ಷಿಗಳಿಗಿಂತ ದಪ್ಪ ಇರುತ್ತದೆ. ಆದರೆ ಕೇರಳದ ಮಲಪ್ಪುರಂನ ಓರ್ವ ವ್ಯಕ್ತಿ ಸಾಕಿರುವ ಕೋಳಿ ದ್ರಾಕ್ಷಿ ಗಾತ್ರದ ಮೊಟ್ಟೆ ಇಡುವ ಮೂಲಕ ಗಮನ ಸೆಳೆದಿದ್ದು, ಕೋಳಿಯ ಈ ಮೊಟ್ಟೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಲಪ್ಪುರಂನ ಎಆರ್ ನಗರದ ನಿವಾಸಿ ಸಮದ್ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ 5 ವರ್ಷದ ಕೋಳಿಯೊಂದು ಹೀಗೆ ವಿಚಿತ್ರವಾದ ಮೊಟ್ಟೆಗಳನ್ನು ಇಡುತ್ತಿದೆ. ಇದರ ಮೊತ್ತೊಂದು ಅಚ್ಚರಿ ಅಂದ್ರೆ ಕೋಳಿಯ ಈ ಅತಿ ಸಣ್ಣ ಮೊಟ್ಟೆಯಲ್ಲಿ ಹಳದಿ ಬಣ್ಣದಲ್ಲಿರುವ ಲೋಳೆ ಇಲ್ಲ. ಕೇವಲ ಬಿಳಿ ಬಣ್ಣದ ಲೋಳೆ ಮಾತ್ರ ಇದೆ.
ಕೆಲ ದಿನಗಳ ಕಾಲ ಕೋಳಿ ಸಾಮಾನ್ಯ ಗಾತ್ರದ ಮೊಟ್ಟೆಗಳನ್ನು ಇಡುತ್ತಿತ್ತು. ಆದರೆ ದಿನ ಕಳೆಯುತ್ತಿದ್ದಂತೆ ಈ ರೀತಿಯ ಸಣ್ಣ ಮೊಟ್ಟೆಗಳನ್ನು ಇಡುತ್ತಿದೆ. ಈವರೆಗೆ 9 ಚಿಕ್ಕ ಮೊಟ್ಟೆಗಳನ್ನು ಇಟ್ಟಿದೆ ಎಂದು ಸಮದ್ ಹೇಳಿದ್ದಾರೆ.
ನಾನು ಒಂದು ಸಣ್ಣ ಮೊಟ್ಟೆಯನ್ನು ಒಡೆದು ನೋಡಿದೆ. ಅದರಲ್ಲಿ ಹಳದಿ ಬಣ್ಣದ ಲೋಳೆ ಇಲ್ಲ. ಕೇವಲ ಬಿಳಿ ಬಣ್ಣದ ಲೋಳೆ ಮಾತ್ರ ಇದೆ. ಇದಕ್ಕೆ ಕಾರಣ ಏನು ಅಂತ ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿರುವ ಇತರೆ ಕೋಳಿಗಳಿಗೆ ಇಡುವ ಆಹಾರವನ್ನೇ ಇದಕ್ಕೂ ಇಡುತ್ತೇನೆ. ಆದರೆ ಇಷ್ಟು ಚಿಕ್ಕ ಗಾತ್ರದಲ್ಲಿ ಮೊಟ್ಟೆ ಇಡುತ್ತಿದೆ ಎಂದು ಸಮದ್ ವಿವರಿಸಿದ್ದಾರೆ.
ಸದ್ಯ ಈ ಕೋಳಿಯ ವಿಚಿತ್ರ ಮೊಟ್ಟೆಗಳ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ಗಮನಿಸಿದ ಸಾಕಷ್ಟು ಜನ ಕೋಳಿ, ಮೊಟ್ಟೆಗಳನ್ನು ನೋಡಲು ಸಮದ್ ಮನೆಗೆ ಬರುತ್ತಿದ್ದಾರಂತೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್ ವಿಪರೀತ: ಪೊಲೀಸರಿಗೂ 'ವರ್ಕ್ ಫ್ರಮ್ ಹೋಮ್'