ETV Bharat / bharat

ಕೇಂದ್ರದ - ಅಸ್ಸೋಂ ಡಬಲ್​ ಇಂಜಿನ್ ಸರ್ಕಾರವಿದ್ದಂತೆ: ಸಾಂಸ್ಕೃತಿಕ - ಭೌಗೋಳಿಕ ಅಂತರ ಕಡಿಮೆ ಮಾಡಲು ಯತ್ನ: ನಮೋ - ನರೇಂದ್ರ ಮೋದಿ ಇತ್ತೀಚಿನ ಸುದ್ದಿ

ಸಬ್​ ಕಾ ಸಾಥ್ ಸಬ್​ ಕಾ ವಿಕಾಸ್ ಮಂತ್ರ ಜಪಿಸಿರುವ ನರೇಂದ್ರ ಮೋದಿ, ಅಸ್ಸೋಂನಲ್ಲಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

pm modi
pm modi
author img

By

Published : Feb 18, 2021, 3:49 PM IST

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಅಸ್ಸೋಂ ಡಬಲ್​ ಇಂಜಿನ್​ ಸರ್ಕಾರವಿದ್ದಂತೆ, ಭೌಗೋಳಿಕ ಮತ್ತು ಸಾಂಸ್ಕೃತಿಕ ಅಂತರ ಕಡಿಮೆ ಮಾಡಲು ಎರಡು ಪ್ರಯತ್ನ ನಡೆಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಪರೆನ್ಸ್​ ಮೂಲಕ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಿಂದ ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಧುಬ್ರಿ ಅಸ್ಸೋಂ ಮತ್ತು ಫುಲ್ಬಾರಿ ನಡುವಿನ ಸೇತುವೆ ಅಡಿಪಾಯ ಹಾಕಿ ನಮೋ ಮಾತನಾಡಿದರು. ಸದ್ಯ ಅಸ್ಸೋಂ ಮತ್ತು ಮೇಘಾಲಯದ ನಡುವಿನ ಅಂತರ ರಸ್ತೆ ಮೂಲಕ ಸುಮಾರು 250 ಕಿಲೋ ಮೀಟರ್​ ಇದೆ. ಭವಿಷ್ಯದಲ್ಲಿ ಇದು ಕೇವಲ 19-20 ಕಿಲೋ ಮೀಟರ್​ ಆಗಿರಲಿದೆ ಎಂದಿದ್ದಾರೆ. ಇದು ಅಂತಾರಾಷ್ಟ್ರೀಯ ಸಂಚಾರಕ್ಕೂ ಮಹತ್ವದಾಗಿರಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಅಸ್ಸೋಂ ಮಹಾಬಾಹು-ಬ್ರಹ್ಮಪುತ್ರಾ ಸಂಪರ್ಕ ಯೋಜನೆಗೆ ಚಾಲನೆ ನೀಡಿದ ನಮೋ, ಕೆಲಸವೇ ನಮ್ಮ ಧರ್ಮ, ನಾವು ಹೊಸ ಕಾಲದ ಹೊಸ ಜನ ಅವರಿಗಾಗಿ ವಿವಿಧ ಯೋಜನೆ ರೂಪಿಸುತ್ತಿದ್ದೇವೆ ಎಂದರು. ಅಸ್ಸೋಂ ಸಂಸ್ಕೃತಿಯಲ್ಲಿ ಆಧ್ಯಾತ್ಮ ಇದೆ. ದೇಶದ ವಿವಿಧ ನಗರಗಳೊಂದಿಗಿನ ಸಂಪರ್ಕಕ್ಕಾಗಿ ಅನೇಕ ಯೋಜನೆ ರೂಪಿಸಿದ್ದೇವೆ ಎಂದು ನಮೋ ಇದೇ ವೇಳೆ ಹೇಳಿದರು.

ಓದಿ: ಬಸ್​ ಕಾಲುವೆಗೆ ಬಿದ್ದು ಪ್ರಯಾಣಿಕರ ಸಾವು ಪ್ರಕರಣ: ಒಂದೇ ಚಿತೆಯಲ್ಲಿ ಸತಿ-ಪತಿ ಅಂತ್ಯಕ್ರಿಯೆ!

ಅಸ್ಸೋಂ ಮತ್ತು ಮೇಘಾಲಯದ ಸೇತುವೆ ಮೂಲಕ ಪಶ್ಚಿಮ ಬಂಗಾಳದೊಂದಿಗೆ ನೇರ ಸಂಪರ್ಕ ಹೊಂದಲಿದೆ. ಪಶ್ಚಿಮ ಬಂಗಾಳದ ಸೆರಾಂಪೋರ್​ನಿಂದ ಅಸ್ಸೋಂ ಧುಬ್ರಿವರೆಗೆ 55 ಕಿಲೋ ಮೀಟರ್​ ಉದ್ದದ ರಸ್ತೆ ನಿರ್ಮಾಣ ಅಕ್ಟೋಬರ್​​ನಲ್ಲಿ ಪ್ರಾರಂಭವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್​ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.