ಮಧ್ಯಪ್ರದೇಶ: ಇಲ್ಲಿನ ಧಾರ್ ಜಿಲ್ಲೆಯ ಖಲ್ಘಾಟ್ ಎಂಬಲ್ಲಿ ಇಂದು ಬೆಳಗ್ಗೆ ನದಿಗೆ ಬಸ್ ಬಿದ್ದು ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 13 ಪ್ರಯಾಣಿಕರು ಮೃತಪಟ್ಟಿದ್ದು, ನದಿಯಿಂದ ಶವಗಳನ್ನು ಹೊರೆತೆಗೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಂದು ಮಗು, ನಾಲ್ಕು ಮಹಿಳೆಯರು ಸೇರಿ 13 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಸಾರಿಗೆ ಸಮಸ್ಥೆಯ ಬಸ್ 30-32 ಪ್ರಯಾಣಿಕರೊಂದಿಗೆ ಮಧ್ಯಪ್ರದೇಶದ ಇಂದೋರ್ನಿಂದ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಗೆ ಹೋಗುತ್ತಿತ್ತು. ಬೆಳಿಗ್ಗೆ 10 ರಿಂದ 10.15ರ ವೇಳೆಗೆ ಬಸ್ ಬ್ರಿಡ್ಜ್ ಬದಿಗೆ ಡಿಕ್ಕಿ ಹೊಡೆದು, ನರ್ಮದಾ ನದಿಗೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಧಾರ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇದುವರೆಗೆ 15 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ನಿಲ್ಲದ ಗುಂಡಿನ ದಾಳಿ: ಮಾಲ್‌ನಲ್ಲಿ ನಾಲ್ವರು ಬಲಿ, ಇಬ್ಬರಿಗೆ ಗಾಯ
ಅಪಘಾತದಲ್ಲಿ ಮೃತಪಟ್ಟವರಿಗೆ ಮಹಾರಾಷ್ಷ್ರ ಸಿಎಂ ಏಕನಾಥ್ ಶಿಂದೆ ಸಂತಾಪ ಸೂಚಿಸಿ, ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ ಪರಿಹಾರ ನೀಡುವಂತೆ ಸೂಚಿಸಿದ್ದರು. ಆ ಬಳಿಕ MSRTC 10 ಲಕ್ಷ ರೂ ಪರಿಹಾರ ಘೋಷಿಸಿದೆ. ಜೊತೆಗೆ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದೆ.
-
दुर्घटना स्थल पर जिला प्रशासन की टीम मौजूद है। बस को निकाल लिया गया है।
— Shivraj Singh Chouhan (@ChouhanShivraj) July 18, 2022 " class="align-text-top noRightClick twitterSection" data="
खरगोन, धार जिला प्रशासन के साथ मैं निरंतर संपर्क में हूं। घायलों के समुचित इलाज की व्यवस्था के निर्देश दिये हैं।
दु:ख की इस घड़ी में पीड़ित परिवार स्वयं को अकेला न समझे,मैं व संपूर्ण प्रदेश साथ है।
">दुर्घटना स्थल पर जिला प्रशासन की टीम मौजूद है। बस को निकाल लिया गया है।
— Shivraj Singh Chouhan (@ChouhanShivraj) July 18, 2022
खरगोन, धार जिला प्रशासन के साथ मैं निरंतर संपर्क में हूं। घायलों के समुचित इलाज की व्यवस्था के निर्देश दिये हैं।
दु:ख की इस घड़ी में पीड़ित परिवार स्वयं को अकेला न समझे,मैं व संपूर्ण प्रदेश साथ है।दुर्घटना स्थल पर जिला प्रशासन की टीम मौजूद है। बस को निकाल लिया गया है।
— Shivraj Singh Chouhan (@ChouhanShivraj) July 18, 2022
खरगोन, धार जिला प्रशासन के साथ मैं निरंतर संपर्क में हूं। घायलों के समुचित इलाज की व्यवस्था के निर्देश दिये हैं।
दु:ख की इस घड़ी में पीड़ित परिवार स्वयं को अकेला न समझे,मैं व संपूर्ण प्रदेश साथ है।
ಘಟನೆ ಬೆನ್ನಲ್ಲೇ ಎನ್ಡಿಆರ್ಎಫ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. 15 ಜನರನ್ನು ರಕ್ಷಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ಎನ್.ಮಿಶ್ರಾ ಮಾಹಿತಿ ನೀಡಿದ್ದಾರೆ. ಜಲಗಾಂವ್ ಮೂಲದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಶವ ಸೇರಿ 13 ಜನರ ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
-
धार जिले के खलघाट में पुल की रेलिंग तोड़ने के बाद महाराष्ट्र रोडवेज की एक बस नर्मदा नदी में गिर गई। बस में करीब 50-60 यात्री सवार थे pic.twitter.com/skeVD2hByP
— Anurag Dwary (@Anurag_Dwary) July 18, 2022 " class="align-text-top noRightClick twitterSection" data="
">धार जिले के खलघाट में पुल की रेलिंग तोड़ने के बाद महाराष्ट्र रोडवेज की एक बस नर्मदा नदी में गिर गई। बस में करीब 50-60 यात्री सवार थे pic.twitter.com/skeVD2hByP
— Anurag Dwary (@Anurag_Dwary) July 18, 2022धार जिले के खलघाट में पुल की रेलिंग तोड़ने के बाद महाराष्ट्र रोडवेज की एक बस नर्मदा नदी में गिर गई। बस में करीब 50-60 यात्री सवार थे pic.twitter.com/skeVD2hByP
— Anurag Dwary (@Anurag_Dwary) July 18, 2022