ಹೈದರಾಬಾದ್: ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಹೆಪಟೈಟಿಸ್ ಔಷಧಿಯನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ಬಳಸಲು'Zydus Cadila' ಎಂಬ ಔಷಧೀಯ ಕಂಪನಿಗೆ ಅನುಮತಿ ನೀಡಿದೆ.
ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ, ಪೆಗಿಹೆಪ್ (PegIFN) ನ ಮೂರನೇ ಹಂತದ ಪ್ರಯೋಗಗಳು ಸೋಂಕಿನ ಚಿಕಿತ್ಸೆಯಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದ ನಂತರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ಅನುಮೋದನೆ ಪಡೆದಿದೆ. ಕ್ಯಾಡಿಲಾ ಹೆಲ್ತ್ ಬಿಡುಗಡೆ ಮಾಡಿದ ಪ್ರಕಾರ, " ಈ ಔಷಧವು ಇತರ ವೈರಲ್ ಸೋಂಕುಗಳ ವಿರುದ್ಧವೂ ಪರಿಣಾಮಕಾರಿತ್ವವನ್ನು ತೋರಿಸಿದೆ.
"ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರ್ವಿಲ್ ಪಟೇಲ್ ಅವರು, “ನಾವು ಚಿಕಿತ್ಸೆ ನೀಡಲು ಸಮರ್ಥರಾಗಿದ್ದೇವೆ, ಇದು ಉತ್ತಮ ರೋಗ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಈ ಕಂಪನಿಯ ಪ್ರಕಾರ, ಪೆಗಿಫ್‌ಎನ್‌ನೊಂದಿಗೆ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಶೇಕಡಾ 91.15 ರಷ್ಟು ಜನರ ಆರ್‌ಟಿ ಪಿಸಿಆರ್ ರಿಪೋರ್ಟ್ ನೆಗೆಟಿವ್ ಬಂದಿದೆ.
ಕೋವಿಡ್ ರೋಗಿಗಳಲ್ಲಿ 84 ಗಂಟೆಗಳಿಂದ ಪೂರಕ ಆಮ್ಲಜನಕದ ಅವಧಿಯನ್ನು 56 ಗಂಟೆಗಳವರೆಗೆ ಪೆಗಿಫ್ಎನ್ ಕಡಿಮೆಗೊಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಆರಂಭದಲ್ಲಿ ನೀಡಲಾಗುವ ಒಂದು ಡೋಸ್ ರೋಗಿಗಳಲ್ಲಿ ಹೆಚ್ಚಿನ ವೈದ್ಯಕೀಯ ಸುಧಾರಣೆಯನ್ನು ತೋರಿಸುತ್ತದೆ. ಇತರ ಆಂಟಿ-ವೈರಲ್ ಏಜೆಂಟ್‌ಗಳಿಗೆ ಹೋಲಿಸಿದರೆ ಹಲವಾರು ಪ್ರಯೋಜನಗಳನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಸೋಂಕಿನ ಸಮಯದಲ್ಲಿ ನೀಡಲಾದ ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಈ ಕೊರತೆಯನ್ನು ಬದಲಾಯಿಸುತ್ತದೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಮೂರನೇ ಹಂತದ ಪ್ರಯೋಗಗಳನ್ನು ಭಾರತದ 20-25 ಕೇಂದ್ರಗಳಲ್ಲಿ 250 ರೋಗಿಗಳ ಮೇಲೆ ನಡೆಸಲಾಯಿತು ಮತ್ತು ಇದರ ವಿವರವಾದ ಫಲಿತಾಂಶಗಳನ್ನು ಪೀರ್-ರಿವ್ಯೂಡ್ ಜರ್ನಲ್ನಲ್ಲಿ ಪ್ರಕಟಿಸಲಾಗುವುದು ಎಂದು ಕಂಪನಿ ತಿಳಿಸಿದೆ.