ಜೈಪುರ: ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ)ಯ ಹೊಸ ಸೀಸನ್ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನವೇ ಸೈಬರ್ ವಂಚಕರು ಕೆಬಿಸಿ ಲಾಟರಿ ಹೆಸರಿನಲ್ಲಿ ಜನರಿಗೆ ವಂಚಿಸಲು ಆರಂಭಿಸಿದ್ದಾರೆ. ಕಳೆದ 1 ವಾರದಿಂದ ಸೈಬರ್ ದರೋಡೆಕೋರರು ವಿವಿಧ ನಂಬರ್‌ಗಳಿಂದ 25 ಲಕ್ಷ ರೂಪಾಯಿ ಲಾಟರಿ ಗೆಲ್ಲುವಂತೆ ವಾಟ್ಸಾಪ್‌ಗೆ ಸಂದೇಶ ಕಳುಹಿಸುತ್ತಿದ್ದಾರೆ. ಸಂದೇಶದಲ್ಲಿ ನೀಡಲಾದ ಸಂಖ್ಯೆಗೆ ವಾಟ್ಸಾಪ್ ಕರೆ ಮಾಡಿ ವಿಜೇತ ಮೊತ್ತವನ್ನು ಪಡೆಯುವುದು ಟ್ರಿಕ್ ಆಗಿದೆ. ಸೈಬರ್ ದರೋಡೆಕೋರರು ಲಾಟರಿ ಗೆದ್ದ ಸಂದೇಶವನ್ನು ಜನರಿಗೆ ರವಾನಿಸುತ್ತಿರುವ ಸಂಖ್ಯೆಗಳು, ಆ ಸಂಖ್ಯೆಗಳ ಡಿಪಿಯಲ್ಲಿ ಕೆಬಿಸಿ ಅಥವಾ ಎಸ್‌ಬಿಐ ಬ್ಯಾಂಕ್‌ನ ಫೋಟೋ ಹಾಕಲಾಗಿದೆ. ಇದನ್ನು ನೋಡಿ ಹಲವರು ಪುಂಡರ ಬಲೆಗೆ ಬೀಳುತ್ತಿದ್ದಾರೆ.
ವಂಚನೆಗೆ ಬಲಿಯಾದ ಅಮಾಯಕರು: ಕೆಬಿಸಿ ಲಾಟರಿ ಹೆಸರಿನಲ್ಲಿ ಜನರನ್ನು ವಂಚಿಸಿ ಬಲಿಪಶು ಮಾಡಲು ಪುಂಡರು ವಾಟ್ಸಾಪ್ ನಂಬರ್ಗಳಿಗೆ ವಿಡಿಯೋ ಸಂದೇಶ ರವಾನಿಸುತ್ತಿದ್ದಾರೆ. ಇದರಲ್ಲಿ ಕೆಬಿಸಿಯಿಂದ ಆಯ್ದ ಸಂಖ್ಯೆಯನ್ನು ಆಯ್ಕೆ ಮಾಡುವ ಮೂಲಕ ಲಾಟರಿ ತೆಗೆಯಲಾಗಿದೆ. ಈ ವೇಳೆ ನಿಮ್ಮ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದ್ದು, ನಿಮಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ. ಲಾಟರಿ ಮೊತ್ತವನ್ನು ಮುಂಬೈನ ಎಸ್‌ಬಿಐ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗಿದೆ. ಆ ಹಣವನ್ನು ಪಡೆಯಲು ಸಂದೇಶದಲ್ಲಿ ನೀಡಲಾದ ಸಂಖ್ಯೆಯನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿ ಮತ್ತು ವಾಟ್ಸಾಪ್‌ಗೆ ಕರೆ ಮಾಡಿ ಮೊತ್ತವನ್ನು ಸ್ವೀಕರಿಸುವ ಬಗ್ಗೆ ಮಾಹಿತಿ ಪಡೆಯಿರಿ. ಸಂದೇಶದಲ್ಲಿ ನೀಡಲಾದ ಸಂಖ್ಯೆ ಬ್ಯಾಂಕ್ ಮ್ಯಾನೇಜರ್ ಅವರದ್ದು ಆಗಿದ್ದು, ವಾಟ್ಸಾಪ್ ಕರೆಗಳನ್ನು ಮಾತ್ರ ಮಾಡಿ ಎಂದು ಈ ರೀತಿಯ ಸಂದೇಶಗಳನ್ನು ಅಮಾಯಕ ಜನರಿಗೆ ಸೈಬರ್ ವಂಚಕರು ಕಳುಹಿಸುತ್ತಿದ್ದಾರೆ.
ಓದಿ: ಸಾಲ ವಂಚನೆಗಳಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುವುದು?.. ಇಲ್ಲಿದೆ ಮಾಹಿತಿ
ಬ್ಯಾಂಕ್ ಡಿಟೇಲ್ಸ್: ಸಂದೇಶದ ಜೊತೆ ವಿವಿಧ ಕಂಪನಿಗಳ ಲಾಟರಿ ಸಂಖ್ಯೆಗಳು ಮತ್ತು ಲೋಗೊಗಳನ್ನು ಲಗತ್ತಿಸಲಾದ ಸಂದೇಶದ ಜೊತೆಗೆ ಫೋಟೋವನ್ನು ಕಳುಹಿಸಲಾಗುತ್ತದೆ. ಯಾವುದೇ ವ್ಯಕ್ತಿ ಸಂದೇಶದಲ್ಲಿ ನೀಡಿರುವ ಸಂಖ್ಯೆಗೆ ವಾಟ್ಸ್‌ಆ್ಯಪ್‌ಗೆ ಕರೆ ಮಾಡಿ ಲಾಟರಿ ಮೊತ್ತ ಪಡೆಯಲು ಮಾಹಿತಿ ಪಡೆದ ತಕ್ಷಣ ಲಿಂಕ್ ಕಳುಹಿಸುವ ಮೂಲಕ ಅದರಲ್ಲಿ ಬ್ಯಾಂಕ್ ಮಾಹಿತಿಯನ್ನು ನಮೂದಿಸಲು ಹೇಳಲಾಗುತ್ತದೆ. ಆ ವ್ಯಕ್ತಿಯು ತನ್ನ ಬ್ಯಾಂಕಿನ ಎಲ್ಲಾ ಮಾಹಿತಿಯನ್ನು ನೀಡಿದ ತಕ್ಷಣ ಅವನ ಖಾತೆ ಕನ್ನ ಹಾಕುತ್ತಾರೆ.
ಎಚ್ಚರ ವಹಿಸಿ: ಸೈಬರ್ ದರೋಡೆಕೋರರು ಟಿವಿಗಳಲ್ಲಿ ವಿವಿಧ ರೀತಿಯ ಯೋಜನೆಗಳು ಮತ್ತು ಕಾರ್ಯಕ್ರಮಗಳ ಹೆಸರನ್ನು ದುರುಪಯೋಗ ಪಡಿಸಿಕೊಂಡು ಲಾಟರಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ದುರಾಸೆಯಿಂದ ಜನರು ಪುಂಡರ ಬಲೆಯಲ್ಲಿ ಸಿಕ್ಕಿಬಿದ್ದು ನಂತರ ವಂಚನೆಗೆ ಬಲಿಯಾಗುತ್ತಾರೆ. ಯಾವುದೇ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು, ಕರೆಗಳು ಮತ್ತು ಲಿಂಕ್‌ಗಳ ಬಗ್ಗೆ ಗಮನ ಹರಿಸಬಾರದು ಮತ್ತು ತಪ್ಪಾಗಿಯೂ ಉತ್ತರಿಸಬಾರದು. ಈ ರೀತಿಯ ವಂಚನೆಯನ್ನು ತಡೆಯುವ ಏಕೈಕ ಮಾರ್ಗವೆಂದರೆ ಜನರ ಜಾಗರೂಕತೆಯಿಂದ ಇರುವುದಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಕ್ರೈಮ್ ಅಜಯ್ ಪಾಲ್ ಲಂಬಾ ಹೇಳುತ್ತಾರೆ.
ಓದಿ: ಕ್ರಿಪ್ಟೋ ಕರೆನ್ಸಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಕೋಟ್ಯಂತರ ವಂಚನೆ : 17 ಕೋಟಿ ರೂಪಾಯಿ ಜಪ್ತಿ
ಪೊಲೀಸರಿಗೆ ದೂರು ನೀಡಿ: ನೀವೇನಾದ್ರೂ ಆರ್ಥಿಕ ವಂಚನೆಯ ಬಲೆಯಲ್ಲಿ ಸಿಲುಕಿದರೆ ತಕ್ಷಣವೇ ಪೊಲೀಸರಿಗೆ ದೂರು ನೀಡಬೇಕು. ಪೊಲೀಸ್ ನಿಯಂತ್ರಣ ಕೊಠಡಿಯ ಫೋನ್ ಸಂಖ್ಯೆ 100ಕ್ಕೆ ಡಯಲ್ ಮಾಡಿ ತಮ್ಮ ದೂರನ್ನು ತಿಳಿಸಬಹುದಾಗಿದೆ. ಅವರ ಕರೆಯನ್ನು ಸೈಬರ್ ಸೆಲ್‌ಗೆ ವರ್ಗಾಯಿಸಲಾಗುತ್ತದೆ. ಸೈಬರ್ ಸೆಲ್ ತಂಡ ಸಂತ್ರಸ್ತರಿಗೆ ಸಂಪೂರ್ಣ ಸಹಾಯ ಒದಗಿಸುತ್ತದೆ. ವಂಚನೆಗೆ ಒಳಗಾದ ತಕ್ಷಣವೇ ಪೊಲೀಸರಿಗೆ ಎಷ್ಟು ಬೇಗ ದೂರು ನೀಡುತ್ತೀರೋ ಅಷ್ಟು ಬೇಗ ವಂಚಿಸಿದ ಮೊತ್ತವನ್ನು ಫ್ರೀಜ್ ಮಾಡಿ ಸಂತ್ರಸ್ತರಿಗೆ ಮರಳಿ ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವಂಚನೆಗೆ ಬಲಿಯಾದ ನಂತರ ಸಂತ್ರಸ್ತರು ತಕ್ಷಣವೇ ಪೊಲೀಸ್ ಮತ್ತು ಬ್ಯಾಂಕ್ ಅನ್ನು ಸಂಪರ್ಕಿಸಬೇಕು. ಪೊಲೀಸರು ಮತ್ತು ಬ್ಯಾಂಕ್ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಲಂಬಾ ಮಾಹಿತಿ ನೀಡಿದ್ದಾರೆ.