ETV Bharat / bharat

ಪೆಗಾಸಸ್​ ಸ್ಪೈವೇರ್​ ಕುರಿತ ತುರ್ತು ಚರ್ಚೆಗೆ ಸಭಾಪತಿಗೆ ನೋಟಿಸ್​ ನೀಡಿದ ರಾಜ್ಯಸಭೆ ಸದಸ್ಯ ಬಿನೋಯ್​ ವಿಶ್ವಂ

ರಾಜ್ಯಸಭೆ ಸದಸ್ಯರಾಗಿ ತಮಗೆ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ರಾಜ್ಯಸಭೆಯ ಅಧ್ಯಕ್ಷರಿಗೆ ಮನವಿ ನೋಟಿಸ್​ ನೀಡಿದ್ದು, ಪೆಗಾಸಸ್​ ಸ್ಪೈವೇರ್​ ಕುರಿತು ತುರ್ತಾಗಿ ಸುದೀರ್ಘ ಚರ್ಚೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.

author img

By

Published : Feb 2, 2022, 10:32 AM IST

Pegasus spyware
ಪೆಗಾಸಸ್​ ಸ್ಪೈವೇರ್​

ನವದೆಹಲಿ: ಗಣ್ಯರ ಚಲನವಲನಗಳ ಮೇಲೆ ನಿಗಾ ಇಡುವ ಪೆಗಾಸಸ್​ ಸ್ಪೈವೇರ್​ ಖರೀದಿ ಮತ್ತು ಬಳಕೆಯ ಕುರಿತು ತುರ್ತು ಚರ್ಚೆ ನಡೆಸಬೇಕು ಎಂದು ರಾಜ್ಯಸಭೆ ಸದಸ್ಯ ಬಿನೋಯ್ ವಿಶ್ವಂ ಒತ್ತಾಯಿಸಿದ್ದಾರೆ.

ರಾಜ್ಯಸಭೆ ಸದಸ್ಯರಾಗಿ ತಮಗೆ ಪ್ರದತ್ತವಾದ ಅಧಿಕಾರ ಬಳಸಿಕೊಂಡು ರಾಜ್ಯಸಭೆಯ ಅಧ್ಯಕ್ಷರಿಗೆ ಮನವಿ ನೋಟಿಸ್​ ನೀಡಿದ್ದು, ಪೆಗಾಸಸ್​ ಸ್ಪೈವೇರ್​ ಕುರಿತು ತುರ್ತಾಗಿ ಸುದೀರ್ಘ ಚರ್ಚೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಪೆಗಾಸಸ್​ ಸ್ಪೈವೇರ್​ ಬಳಸಿಕೊಂಡು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿದಂತೆ ದೇಶದ ಪ್ರಮುಖ ಪತ್ರಕರ್ತರು, ರಾಜಕಾರಣಿಗಳ ವಿರುದ್ಧ ಗೂಢಾಚಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಅಗತ್ಯ ಚರ್ಚೆ ನಡೆಸಬೇಕಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ರಜಿನಿಕಾಂತ್​ ಪುತ್ರಿ ಐಶ್ವರ್ಯಾಗೆ ಕೋವಿಡ್​ ಪಾಸಿಟಿವ್​

ಅಲ್ಲದೇ, ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಸದನದಲ್ಲಿ ನೀಡಿದ ಹೇಳಿಕೆಗಳ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆಯ ಅಡಿ ಬಿನೋಯ್​ ವಿಶ್ವಂ ನೋಟಿಸ್ ನೀಡಿದ್ದರು.

ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮವಾದ 'ದಿ ವೈರ್' ನಲ್ಲಿ ಪ್ರಕಟವಾದ ವರದಿಯಂತೆ ರಾಹುಲ್ ಗಾಂಧಿ ಮತ್ತು ಕೆಲವು ಭಾರತೀಯ ಪತ್ರಕರ್ತರು ಸೇರಿದಂತೆ ಕೆಲವು ರಾಜಕೀಯ ನಾಯಕರ ಮೇಲೆ ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಅನ್ನು ಬಳಸಿ ಕಣ್ಗಾವಲಿಟ್ಟಿದೆ ಎಂದು ಆರೋಪಿಸಿತ್ತು.

ಈ ಆರೋಪಕ್ಕೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಇಂತಹ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.