ETV Bharat / bharat

ದೇಶದಲ್ಲಿ 2 ಕೋಟಿ ಸೋಂಕಿತರು ಗುಣಮುಖ... ಒಂದೇ ದಿನ 4,000 ಮಂದಿ ಸಾವು

ಭಾರತದಲ್ಲಿ ಈವರೆಗೆ ಒಟ್ಟು 2,40,46,809 ಕೋವಿಡ್​ ಕೇಸ್​ಗಳು ವರದಿಯಾಗಿದ್ದು, ಈ ಪೈಕಿ 2 ಕೋಟಿಗೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ.

Total number of corona cases, deaths, Vaccination in India
ದೇಶದಲ್ಲಿ 2 ಕೋಟಿ ಸೋಂಕಿತರು ಗುಣಮುಖ
author img

By

Published : May 14, 2021, 9:59 AM IST

ನವದೆಹಲಿ: ದಾರುಣ ಕೊರೊನಾ ಪರಿಸ್ಥಿತಿಗೆ ಸಾಕ್ಷಿಯಾಗಿರುವ ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮತ್ತೆ ಹೊಸದಾಗಿ 3,43,144 ಸೋಂಕಿತರು ಪತ್ತೆಯಾಗಿದ್ದು, 4,000 ಜನರು ಅಸುನೀಗಿದ್ದಾರೆ. ಈ ಮೂಲಕ ದೇಶದಲ್ಲಿನ ಕೋವಿಡ್​ ಕೇಸ್​ಗಳ ಸಂಖ್ಯೆ 2,40,46,809ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 2,62,317 ಮಂದಿ ಬಲಿಯಾಗಿದ್ದಾರೆ.

2 ಕೋಟಿಗೂ ಅಧಿಕ ಸೋಂಕಿತರು ಗುಣಮುಖ

2.40 ಕೋಟಿ ಪ್ರಕರಣಗಳ ಪೈಕಿ 37,04,893 ಕೇಸ್​​ಗಳು ಸಕ್ರಿಯವಾಗಿವೆ. ಗುರುವಾರ ಒಂದೇ ದಿನ 3,44,776 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 2,00,79,599 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

17.92 ಕೋಟಿ ಮಂದಿಗೆ ಲಸಿಕೆ

ಜನವರಿ 16ರಿಂದ ದೇಶಾದ್ಯಂತ ಕೋವಿಡ್​ ವ್ಯಾಕ್ಸಿನೇಷನ್​ ಡ್ರೈವ್​ ಆರಂಭವಾಗಿದ್ದು, ಗುರುವಾರದವರೆಗೆ ಒಟ್ಟು 17,92,98,584 ಮಂದಿಗೆ ಲಸಿಕೆ ನೀಡಲಾಗಿದೆ. ವ್ಯಾಕ್ಸಿನ್​ ಅಭಾವದಿಂದಾಗಿ 18 ವರ್ಷ ಮೇಲ್ಪಟ್ಟವರು ನೋಂದಣಿ ಮಾಡಿಸಿದರೂ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಸಮಯ ಹಾಗೂ ಸ್ಥಳ ನಿಗದಿ ಮಾಡುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.