ನವದೆಹಲಿ: 2021ರ ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಮುಖ ಡ್ರಗ್ ಕಂಪೆನಿ ಸಿಪ್ಲಾದ ಏಕೀಕೃತ ನಿವ್ವಳ ಲಾಭ 412 ಕೋಟಿ ರೂ. ತಲುಪಿದ್ದು, ಶೇಕಡಾ 73ರಷ್ಟು ಏರಿಕೆಯಾಗಿದೆ.
2019-20ರ ಜನವರಿ-ಮಾರ್ಚ್ ತಿಂಗಳಲ್ಲಿ ಸಿಪ್ಲಾದ ನಿವ್ವಳ ಲಾಭವು 238 ಕೋಟಿ ರೂ. ಇತ್ತು.
2019-20ರ ಇದೇ ಅವಧಿಯಲ್ಲಿ 4,376 ಕೋಟಿ ರೂ. ಇದ್ದ ಒಟ್ಟು ಆದಾಯ, ಇದೀಗ ಒಟ್ಟು ಆದಾಯ 4,606 ಕೋಟಿ ರೂ.ಗೆ ಏರಿದೆ ಎಂದು ಸಿಪ್ಲಾ ತಿಳಿಸಿದೆ.
2020-21ರ ಆರ್ಥಿಕ ವರ್ಷದಲ್ಲಿ ಸಿಪ್ಲಾ 2,389 ಕೋಟಿ ರೂ. ಒಟ್ಟು ನಿವ್ವಳ ಲಾಭ ಗಳಿಸಿದ್ದು, 2019-20ರಲ್ಲಿ ಇದು 1,500 ಕೋಟಿ ರೂ. ಇತ್ತು.