ಬೀಜಿಂಗ್(ಚೀನಾ): ಬಾಹ್ಯಾಕಾಶ ಇತಿಹಾಸದಲ್ಲಿ ಚೀನಾ ಇದೀಗ ಮತ್ತೊಂದು ಸಾಧನೆ ಮಾಡಿದ್ದು, ಅಮೆರಿಕ ನಂತರ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ರೋವರ್ ಇಳಿಸಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೀನಾ ಇದೀಗ ತನ್ನ ರೋವರ್ ಅನ್ನ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮಂಗಳ ಗ್ರಹದ ದಕ್ಷಿಣ ಪ್ರದೇಶದಲ್ಲಿ ಜುರಾಂಗ್ ರೋವರ್ ಇಳಿಸಲಾಗಿದ್ದು, ಸೌರಶಕ್ತಿ ಚಾಲಿತ ಆರು ಗಾಲಿಗಳ ಜುರಾಂಗ್ ರೋವರ್ 240 ಕಿ.ಗ್ರಾಂ ತೂಕವಿತ್ತು. ಇದಕ್ಕೆ ಆರು ವೈಜ್ಞಾನಿಕ ಸಾಧನ ಅಳವಡಿಕೆ ಮಾಡಲಾಗಿತ್ತು. ಮಂಗಳ ಗ್ರಹದ ಮೇಲೆ ಜೀವಿಗಳ ಹುಡುಕುವ ಕೆಲಸ ಮಾಡಲಿದ್ದು, ಮೂರು ತಿಂಗಳ ಕಾರ್ಯಾಚರಣೆ ನಡೆಸಲಿದೆ.
-
Another version of landing animation from People’s Daily, with ancient Chinese characters as annotation. Also CCTV News reporter to the audience: “Data transmitting across very long distance. Please wait for a while for pictures.” pic.twitter.com/yNZn4ShynR
— Chinese Zhurong Mars Rover (@MarsZhurong) May 15, 2021 " class="align-text-top noRightClick twitterSection" data="
">Another version of landing animation from People’s Daily, with ancient Chinese characters as annotation. Also CCTV News reporter to the audience: “Data transmitting across very long distance. Please wait for a while for pictures.” pic.twitter.com/yNZn4ShynR
— Chinese Zhurong Mars Rover (@MarsZhurong) May 15, 2021Another version of landing animation from People’s Daily, with ancient Chinese characters as annotation. Also CCTV News reporter to the audience: “Data transmitting across very long distance. Please wait for a while for pictures.” pic.twitter.com/yNZn4ShynR
— Chinese Zhurong Mars Rover (@MarsZhurong) May 15, 2021
ಇದನ್ನೂ ಓದಿ: ಸಿಗದ ಸೂಕ್ತ ಬೆಲೆ.. ರಸ್ತೆ ಮೇಲೆ ತರಕಾರಿ ಚೆಲ್ಲಿ ಆಕ್ರೋಶ ಹೊರಹಾಕಿದ ರೈತ
ಚೀನಿ ಪುರಾಣಗಳ ಪ್ರಕಾರ ಬೆಂಕಿ ದೇವರ ಹೆಸರು ಜುರಾಂಗ್ ಎಂದು ರೋವರ್ಗೆ ಹೆಸರಿಡಲಾಗಿದೆ. ಆರ್ಭಿಟರ್, ಲ್ಯಾಂಡರ್ ಹಾಗೂ ರೋವರ್ ಹೊಂದಿದ್ದ ಟಿಯಾನ್ವೆನ್-1 2020ರ ಜುಲೈ 23ರಂದು ಹೈನಾನ್‌ನ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.