ನವದೆಹಲಿ : ಸಿಂಗಾಪುರ ರಾಯಭಾರಿ ಕಚೇರಿಯ ನಕಲಿ ನಂಬರ್ ಪ್ಲೇಟ್ ಹೊಂದಿರುವ ಕಾರು ರಾಜಧಾನಿ ದೆಹಲಿಯಲ್ಲಿ ಪತ್ತೆಯಾಗಿದೆ. ಭಾರತದಲ್ಲಿ ಸಿಂಗಾಪುರದ ರಾಯಭಾರಿ ಸೈಮನ್ ವಾಂಗ್ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶುಕ್ರವಾರ ಚಿತ್ರವನ್ನು ಹಂಚಿಕೊಂಡ ನಂತರ ಅವರು ವಿದೇಶಾಂಗ ಸಚಿವಾಲಯ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
-
Alert ‼️⚠️‼️The car below bearing 63 CD plate is FAKE. This is NOT our Embassy car. We have alerted MEA & the Police. With so many threats around, be extra careful when you see this car parked unattended. Especially at the IGI. - 🙏🙏HC Wong@DelhiPolice @MEAIndia @DelhiAirport pic.twitter.com/qphXYzhoVF
— Singapore in India (@SGinIndia) November 24, 2023 " class="align-text-top noRightClick twitterSection" data="
">Alert ‼️⚠️‼️The car below bearing 63 CD plate is FAKE. This is NOT our Embassy car. We have alerted MEA & the Police. With so many threats around, be extra careful when you see this car parked unattended. Especially at the IGI. - 🙏🙏HC Wong@DelhiPolice @MEAIndia @DelhiAirport pic.twitter.com/qphXYzhoVF
— Singapore in India (@SGinIndia) November 24, 2023Alert ‼️⚠️‼️The car below bearing 63 CD plate is FAKE. This is NOT our Embassy car. We have alerted MEA & the Police. With so many threats around, be extra careful when you see this car parked unattended. Especially at the IGI. - 🙏🙏HC Wong@DelhiPolice @MEAIndia @DelhiAirport pic.twitter.com/qphXYzhoVF
— Singapore in India (@SGinIndia) November 24, 2023
ಭಾರತದ ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು, ಟ್ವಿಟ್ಟರ್ನಲ್ಲಿ ತಮ್ಮ ದೇಶದ ನಕಲಿ ರಾಜತಾಂತ್ರಿಕ ಕಾರ್ಪ್ಸ್ ನಂಬರ್ ಪ್ಲೇಟ್ ಹೊಂದಿರುವ ಸಿಲ್ವರ್ ಬಣ್ಣದ ಕಾರಿನ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, "ಇದು ನಮ್ಮ ರಾಯಭಾರಿ ಕಾರು ಅಲ್ಲ" ಎಂದು ತಿಳಿಸಿದ್ದಾರೆ.
ನಂಬರ್ ಪ್ಲೇಟ್ ಮೇಲೆ 63 ಸಿಡಿ ಎಂದು ಬರೆಯಲಾಗಿದೆ. ಈ ಕಾರು ನಕಲಿ ಎಂದು ವಾಂಗ್ ಹೇಳಿದ್ದಾರೆ. ಇದು ನಮ್ಮ ರಾಯಭಾರಿ ಕಚೇರಿಯ ಕಾರು ಅಲ್ಲ. ಈ ಬಗ್ಗೆ ನಾವು ವಿದೇಶಾಂಗ ಸಚಿವಾಲಯ ಮತ್ತು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇವೆ. ಸುತ್ತಲೂ ಹಲವಾರು ಅಪಾಯಗಳಿರುವಾಗ, ಈ ಕಾರನ್ನು ಇಲ್ಲಿ ನಿಲ್ಲಿಸಿದ್ದಾರೆ. ಹೀಗಾಗಿ ನೀವು ಹೆಚ್ಚು ಜಾಗರೂಕರಾಗಿರಿ. ವಿಶೇಷವಾಗಿ ಐಜಿಐ ವಿಮಾನ ನಿಲ್ದಾಣ ಪೊಲೀಸರಿಗೆ ಈ ವಿಷಯದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.
ಪೊಲೀಸರು ಅಲರ್ಟ್: ನಕಲಿ ನಂಬರ್ ಪ್ಲೇಟ್ ಹೊಂದಿರುವ ಸಿಂಗಾಪುರ್ ರಾಯಭಾರಿ ಕಚೇರಿಯ ಕಾರಿನ ಚಿತ್ರ ಮತ್ತು ಹೈಕಮಿಷನರ್ ಟ್ವೀಟ್ ಕಾಣಿಸಿಕೊಂಡ ನಂತರ ಎಲ್ಲೆಡೆ ಸಂಚಲನ ಮೂಡಿಸಿದೆ. ಏರ್‌ಪೋರ್ಟ್ ಪೊಲೀಸರಿಂದ ಹಿಡಿದು ಇತರ ಭದ್ರತಾ ಏಜೆನ್ಸಿಗಳವರೆಗೆ ಈ ಸ್ಥಳದಲ್ಲಿ ಅಲರ್ಟ್ ಆಗಿದ್ದು, ಈ ಕಾರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಸ್ವತಃ ಸಿಂಗಾಪುರ ರಾಯಭಾರ ಕಚೇರಿಯು ಈ ಕಾರಿನ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ದೆಹಲಿ ಪೊಲೀಸರು ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದೆ.
ಈ ವಿಷಯವನ್ನು ಖಚಿತಪಡಿಸಿರುವ ವಿಮಾನ ನಿಲ್ದಾಣದ ಡಿಸಿಪಿ ದೇವೇಶ್ ಮಹೇಲಾ, ಈ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ. ನಾವು ಈ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದೇವೆ. ಪಿಕೆಟ್‌ಗಳನ್ನು ಸ್ಥಾಪಿಸಿ ನಿರಂತರವಾಗಿ ತನಿಖೆ ನಡೆಸುತ್ತಿದ್ದೇವೆ. ಇದನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದಲೂ ಪತ್ತೆ ಮಾಡುತ್ತಿದ್ದೇವೆ. ಈ ವಾಹನ ಪತ್ತೆಯಾದ ತಕ್ಷಣ ಪರಿಶೀಲನೆ ನಡೆಸಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶೋರೂಂನಲ್ಲಿ ಮಾರಾಟಕ್ಕೆ ನಿಂತಿದ್ದ ಎಂಎಲ್ಎ ಕಾರು: ನಕಲಿ ಕಾರು ಮಾರಾಟ ದಂಧೆಗೆ ಶಾಸಕರೇ ತಬ್ಬಿಬ್ಬು