ETV Bharat / bharat

ಲೂಟಿಕೋರ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನಿಂದ ಉದ್ಯಮಿಗಳಿಗೆ ಹಣಕ್ಕಾಗಿ ಬೆದರಿಕೆ ಕರೆ - ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗಿಂದ ಉದ್ಯಮಿಗಳಿಗೆ ಬೆದರಿಕೆ

ಉತ್ತರಾಖಂಡ ಪ್ರಮುಖ ಉದ್ಯಮಿಗಳಿಗೆ ಕೆನಡಾ ಮೂಲದ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಕಡೆಯವರು ಎಂದು ಹೇಳಿಕೊಂಡು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಕರೆ ಮಾಡಲಾಗಿದೆ.

bullion-traders-of-uttarakhands
ಬಿಷ್ಣೋಯ್​ ಗ್ಯಾಂಗ್​ನಿಂದ ಉದ್ಯಮಿಗಳಿಗೆ ಹಣಕ್ಕಾಗಿ ಬೆದರಿಕೆ ಕರೆ
author img

By

Published : Nov 3, 2022, 10:44 PM IST

ಕಾಶಿಪುರ (ಉತ್ತರಾಖಂಡ): ಪಂಜಾಬ್​ ಗಾಯಕ ಸಿದು ಮೂಸೆವಾಲಾ ಕೊಲೆ ಮಾಡಿದ ಆರೋಪ ಹೊತ್ತಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಅವರ ಹೆಸರಿನಲ್ಲಿ ಗ್ಯಾಂಗೊಂದು ಉತ್ತರಾಖಂಡದ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದೆ. ಇದು ಅಲ್ಲಿನ ಉದ್ಯಮಿಗಳಿಗೆ ಆತಂಕ ಮೂಡಿಸಿದೆ.

ಉತ್ತರಾಖಂಡದ ಕಾಶಿಪುರದ ವಿವಿಧ ಬುಲಿಯನ್ ಉದ್ಯಮಿಗಳಿಗೆ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿ 30 ಲಕ್ಷ ನೀಡುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ಸಾಯಲು ಸಿದ್ಧರಾಗಿರಿ ಎಂದು ಬೆದರಿಸಿದ್ದಾನೆ. ಇದನ್ನು ಉದ್ಯಮಿಯೊಬ್ಬರು ರೆಕಾರ್ಡ್​ ಮಾಡಿದ್ದಾರೆ. ಫೋನ್ ಮಾಡಿದ ವ್ಯಕ್ತಿ ತಾನು ಪಂಜಾಬ್‌ನಿಂದ ಕರೆ ಮಾಡಿದ್ದಾಗಿ ಹೇಳಿರುವುದು ಕಾಲ್​ ರೆಕಾರ್ಡ್​ನಲ್ಲಿದೆ.

ಈ ಬಗ್ಗೆ ಉದ್ಯಮಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬುಲಿಯನ್​ ಉದ್ಯಮಿಗಳಿಗೆ ಪೊಲೀಸ್​ ಭದ್ರತೆ ಒದಗಿಸುವುದಾಗಿ ಅಧಿಕಾರಿಗಲೂ ಭರವಸೆ ನೀಡಿದ್ದಾರೆ. ಈ ಬಗ್ಗೆ ದೂರು ಪಡೆದ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಕರೆ ಬಂದ ಸ್ಥಳವನ್ನಾಧರಿಸಿ ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಎಸ್‌ಟಿಎಫ್ ಕೂಡ ತನಿಖೆಯಲ್ಲಿ ತೊಡಗಿದ್ದು, ನೆರೆಯ ರಾಜ್ಯಗಳ ಪೊಲೀಸರ ಸಹಾಯವನ್ನೂ ಪಡೆಯಲಾಗುತ್ತಿದೆ.

ನವೆಂಬರ್ 1 ರಂದು ಮಧ್ಯಾಹ್ನದ ವೇಳೆ ಉದ್ಯಮಿಗೆ ದುಷ್ಕರ್ಮಿ ಕರೆ ಮಾಡಿ ತಾನು ಕೆನಡಾ ಮೂಲದ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಕಡೆಯವನಾಗಿದ್ದು, ಗುರುವಾರ ಸಂಜೆಯೊಳಗೆ 30 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್​ ಖಾತೆಗೆ ಕಳುಹಿಸಬೇಕು. ಇಲ್ಲವಾದಲ್ಲಿ ನಿನ್ನ ಮತ್ತು ಕುಟುಂಬವನ್ನು ಕೊಲೆ ಮಾಡುವುದಾಗಿ ಪೋನ್​ನಲ್ಲಿ ಬೆದರಿಕೆ ಹಾಕಿದ್ದಾನೆ.

ಇದನ್ನು ಆ ಉದ್ಯಮಿ ರೆಕಾರ್ಡ್​ ಮಾಡಿದ್ದಾನೆ. ಉದ್ಯಮಿಗೆ ಕರೆ ಮಾಡಿದ ವ್ಯಕ್ತಿ ತಾನು ಪಂಜಾಬ್‌ನ ಮೋಗಾ ಜೈಲಿನಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕೆನಡಾ ಮೂಲದ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಹೆಸರಿನಲ್ಲಿ ಸುಲಿಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ವರದಿಯಾಗಿದೆ.

ಓದಿ: ಇಮ್ರಾನ್​ಖಾನ್​ ಹತ್ಯೆ ಯತ್ನ.. ಈ ಕಾರಣಕ್ಕಾಗಿಯೇ ಇಮ್ರಾನ್​ ಖಾನ್ ಕೊಲ್ಲಲು ಬಯಸಿದ್ದೆ.. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.