ಪಠಾಣ್‌ಕೋಟ್(ಪಂಜಾಬ್): ಗುರುದಾಸ್‌ಪುರ ವಲಯದ ದೀನಾನಗರದ ಗಡಿ ಗ್ರಾಮವಾದ ದಿಂಡಾದಲ್ಲಿ ಶನಿವಾರ ಮಧ್ಯರಾತ್ರಿ ಡ್ರೋನ್ ಪತ್ತೆಯಾಗಿದೆ. ಡ್ರೋನ್ ಶಬ್ದ ಕೇಳಿದ ಕೂಡಲೇ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.
ಡ್ರೋನ್ ಅನ್ನು ಗುರುತಿಸಲು ಮೂರು ಬೆಳಕಿನ ಬಾಂಬ್‌ಗಳನ್ನು ಎಸೆದು ನಂತರ 46 ಸುತ್ತು ಗುಂಡು ಹಾರಿಸಲಾಯಿತು. ಅಂತಿಮವಾಗಿ, ಡ್ರೋನ್ ಪಾಕಿಸ್ತಾನದ ಗಡಿ ಭಾಗಕ್ಕೆ ಹಿಂತಿರುಗಿದೆ. ಬಿಎಸ್‌ಎಫ್ ಸಿಬ್ಬಂದಿ ಮತ್ತು ಪೊಲೀಸರು ಭಾನುವಾರ ಬೆಳಗ್ಗೆ ದಿಂಡಾ ಮತ್ತು ಸುತ್ತಮುತ್ತಲಿನ ಗಡಿ ಪ್ರದೇಶಗಳಲ್ಲಿ ಶೋಧ ಕಾರ್ಯ ಪ್ರಾರಂಭಿಸಿದರಾದರೂ ಅನುಮಾನಾಸ್ಪದ ವಸ್ತು ಏನೂ ಕಂಡುಬಂದಿಲ್ಲ.
ಇದಕ್ಕೂ ಮುನ್ನ ಜುಲೈ 13 ರಂದು ಅಮೃತಸರದಿಂದ 2.6 ಕೆಜಿ ಹೆರಾಯಿನ್ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು. ಇನ್ನೊಂದು ಘಟನೆಯಲ್ಲಿ, ಜೂನ್ 24 ರಂದು ಅಮೃತಸರದಿಂದ 3 ಕೆಜಿ ಹೆರಾಯಿನ್ ಮತ್ತು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಭೋವಿ ಸ್ವಾಮೀಜಿ ಮತ್ತು ಶಾಸಕರಿಗೆ ಜೀವ ಬೆದರಿಕೆ.. ಆರೋಪಿ ವೈದ್ಯನ ಬಂಧನ