ETV Bharat / bharat

ಬಿಜೆಪಿ ಸಂಸದ ಗೌತಮ್​​ ಗಂಭೀರ್​ಗೆ ಎರಡನೇ ಕೊಲೆ ಬೆದರಿಕೆ ಕರೆ

ಭಯೋತ್ಪಾದಕ ಗುಂಪು ಐಸಿಸ್ ಕಾಶ್ಮೀರದಿಂದ ಭಾರತೀಯ ಜನತಾ ಪಾರ್ಟಿ ಸಂಸದ ಗೌತಮ್​ ಗಂಭೀರ್​​ ಅವರಿಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ.

author img

By

Published : Nov 24, 2021, 9:49 PM IST

bjp mp Gautam gambhir
bjp mp Gautam gambhir

ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್, ಬಿಜೆಪಿ ಸಂಸದ ಗೌತಮ್​ ಗಂಭೀರ್​ಗೆ ಇದೀಗ ಎರಡನೇ ಜೀವ ಬೆದರಿಕೆ ಕರೆ ಬಂದಿದೆ. ಐಸಿಸ್​​​ ಕಾಶ್ಮೀರದಿಂದ ಈ ಕೊಲೆ ಬೆದರಿಕೆ ಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಗೌತಮ್​ ಗಂಭೀರ್​ ನಿವಾಸದ ಹೊರಗಿನ ಕೆಲ ದೃಶ್ಯಾವಳಿಗಳನ್ನು ಈ ಬೆದರಿಕೆ ವಿಡಿಯೋದಲ್ಲಿ ಲಗತ್ತಿಸಲಾಗಿದ್ದು,ಇ-ಮೇಲ್​​ ಮೂಲಕ ರವಾನೆ ಮಾಡಲಾಗಿದೆ.

bjp mp Gautam gambhir

ಇಂದು ಬೆಳಗ್ಗೆ ಕೂಡ ಇ-ಮೇಲ್​ ಮೂಲಕ ಜೀವ ಬೆದರಿಕೆ ಪಡೆದುಕೊಂಡಿದ್ದ ಗೌತಮ್​ ಗಂಭೀರ್​ ಇದೇ ವಿಚಾರವಾಗಿ ದೆಹಲಿಯ ರಾಜೇಂದ್ರ ನಗರ ಪೊಲೀಸ್​ ಠಾಣೆ ಹಾಗೂ ಜಿಲ್ಲಾ ಡಿಸಿಪಿ ಅವರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

  • BJP MP & former Cricketer Gautam Gambhir has allegedly received a second death threat from 'ISIS Kashmir'. A video containing footage from outside his residence is also attached with the threat e-mail: Delhi Police

    — ANI (@ANI) November 24, 2021 " class="align-text-top noRightClick twitterSection" data=" ">

ಇದನ್ನೂ ಓದಿ: ತೆರೆದ ಜೀಪ್‌ ಚಲಾಯಿಸಿ ತಾನಿನ್ನೂ ಗಟ್ಟಿಯಾಗಿದ್ದೇನೆ ಎಂಬ ಸಂದೇಶ ರವಾನಿಸಿದ ಲಾಲೂ

ಕಳೆದ ಕೆಲ ದಿನಗಳ ಹಿಂದೆ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಪಾಕ್​ನ ಕರ್ತಾರ್​​ಪುರ್​ಗೆ ಭೇಠಿ ನೀಡಿದ್ದ ವೇಳೆ ಇಮ್ರಾನ್ ಖಾನ್​ ತಮ್ಮ ಅಣ್ಣ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಗಂಭೀರ್​​ ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಜೊತೆಗೆ ನಿಮ್ಮ ಮಕ್ಕಳನ್ನು ಗಡಿ ಕಾಯುವುದಕ್ಕೆ ಕಳುಹಿಸಿಕೊಡಿ ಎಂದು ಹೇಳಿಕೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.