ಭಿಲ್ವಾರ: ರಾಜಸ್ಥಾನದ ಬಿಜೆಪಿ ಮುಖಂಡ ಭನ್ವರ್ ಸಿಂಗ್ ಪಾಲ್ಡಾ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಭನ್ವರ್ ಸಿಂಗ್ ರಿವಾಲ್ವರ್ ತೋರಿಸಿ ಬೆದರಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಭಿಲ್ವಾರಾ ಜಿಲ್ಲೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್, ಅಜ್ಮೀರ್‌ನ ಪ್ರತಾಪ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಖಂಡ ದೌರ್ಜನ್ಯ ಎಸಗಿದ್ದಲ್ಲದೆ, ತನ್ನ ಅಶ್ಲೀಲ ಫೋಟೋಗಳನ್ನು ತೆಗೆದಿದ್ದು, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಸಬ್ ಇನ್ಸ್‌ಪೆಕ್ಟರ್ ದೂರಿದ್ದಾರೆ. ಈ ಸಂಬಂಧ ಪಾಲ್ಡಾ ಹಾಗೂ ಅವರ ಕಾರು ಚಾಲಕ ಸೇರಿದಂತೆ 11 ಜನರ ವಿರುದ್ಧ ದೂರು ದಾಖಲಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
2018ರಲ್ಲಿ ಒಮ್ಮೆ ತಮ್ಮ ಕಾರು ಕೆಟ್ಟುಹೋಗಿದ್ದ ಕಾರಣ ಕೆಲಕಾಲ ತಮ್ಮ ಕ್ವಾರ್ಟರ್ಸ್ಗೆ ಭನ್ವರ್ ಸಿಂಗ್ ಬಂದಿದ್ದ. ಕೆಲಕಾಲ ಇದ್ದು ತೆರಳುವುದಾಗಿ ತಿಳಿಸಿದ್ದ ಭನ್ವರ್, ಬಳಿಕ ತಾವು ಅಡುಗೆ ಕೋಣೆಯಲ್ಲಿದ್ದಾಗ ಹಿಂದಿನಿಂದ ಬಂದು ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಇನ್ನೊಮ್ಮೆ ಅಜ್ಮೀರ್‌ನಿಂದ ಭಿಲ್ವಾರಕ್ಕೆ ತೆರಳುತ್ತಿದ್ದಾಗ ಪೊಲೀಸ್ ಲೈನ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಭೇಟಿ ಮಾಡಿದ್ದ ಆರೋಪಿಯು ರಿವಾಲ್ವರ್ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಅಶ್ಲೀಲ ಫೋಟೋ ತೆಗೆದುಕೊಂಡಿದ್ದು, ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 450, 376 ಡಿ, 3762 ಎನ್, 354, 506, 365, 323 ಮತ್ತು 120ಬಿ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಚದ ವಿಷ್ಯ.. ಬೆಂಗಳೂರಲ್ಲಿ ಸಹೋದರರ ಮಧ್ಯದ ಜಗಳ ಬಿಡಿಸಲು ಹೋದವನೇ ಹೆಣವಾದ!