ನವದೆಹಲಿ: ಜಿಎಸ್‌ಟಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಮೋದಿಗೋಸ್ಕರ ದೇಶದ ಮುಖ್ಯಮಂತ್ರಿಗಳು ಜನರ ಭವಿಷ್ಯ ಅಡವಿಡುತ್ತಿರುವುದೇಕೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆ ಜಿಎಸ್‌ಟಿ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕೋವಿಡ್ ಕಾರಣ ದೇಶದ ಆರ್ಥಿಕತೆ ಸಂಪೂರ್ಣವಾಗಿ ಹದಗಟ್ಟಿದೆ. ಈ ವೇಳೆ ಕಾರ್ಪೋರೇಟ್ ಸಂಸ್ಥೆಗಳ 1.4 ಲಕಲ್ಷ ಕೋಟಿ ಟ್ಯಾಕ್ಸ್ ಮನ್ನಾ ಮಾಡಿದ್ದಾರೆ. ಬರೋಬ್ಬರಿ 8,400 ಕೋಟಿ ನೀಡಿ ಎರಡು ಐಷಾರಾಮಿ ವಿಮಾನ ಖರೀದಿ ಮಾಡಿದ್ದಾರೆ. ಆದರೆ, ರಾಜ್ಯಗಳಿಗೆ ನೀಡಲು ಕೇಂದ್ರದ ಬಳಿ ಹಣವಿಲ್ಲ. ಹಣಕಾಸು ಸಚಿವೆ ಹೇಳುತ್ತಾರೆ ಕೇಂದ್ರದ ಬಳಿ ಸಾಲ ಪಡೆದುಕೊಳ್ಳಿ ಎಂದು ಹೇಳುತ್ತಾರೆಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
-
1. Centre promises GST revenue for States
— Rahul Gandhi (@RahulGandhi) October 12, 2020 " class="align-text-top noRightClick twitterSection" data="
2. Economy shattered by PM & Covid
3. PM gives 1.4 lakh Crs tax cuts to Corporates, buys 2 planes for himself for 8400 Crs
4. Centre has no money to pay States
5. FM tells States- Borrow
Why is your CM mortgaging your future for Modi?
">1. Centre promises GST revenue for States
— Rahul Gandhi (@RahulGandhi) October 12, 2020
2. Economy shattered by PM & Covid
3. PM gives 1.4 lakh Crs tax cuts to Corporates, buys 2 planes for himself for 8400 Crs
4. Centre has no money to pay States
5. FM tells States- Borrow
Why is your CM mortgaging your future for Modi?1. Centre promises GST revenue for States
— Rahul Gandhi (@RahulGandhi) October 12, 2020
2. Economy shattered by PM & Covid
3. PM gives 1.4 lakh Crs tax cuts to Corporates, buys 2 planes for himself for 8400 Crs
4. Centre has no money to pay States
5. FM tells States- Borrow
Why is your CM mortgaging your future for Modi?
ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಮುಂದೆ ಎರಡು ಆಯ್ಕೆ ಇಟ್ಟಿದೆ. ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಗೋಸ್ಕರ 97,000 ಕೋಟಿ ರೂ.ಸಾಲವಾಗಿ ಪಡೆಯುವುದು. ಅಥವಾ, ಜಿಎಸ್‌ಟಿ ಆದಾಯ ಕೊರತೆ ಹಾಗೂ ಕೋವಿಡ್-19ನಿಂದ ಆಗಿರುವ ನಷ್ಟವನ್ನೂ ಒಳಗೊಂಡ ಒಟ್ಟು 2.35 ಲಕ್ಷ ಕೋಟಿ ರೂ.ಯನ್ನೂ ಸಾಲವಾಗಿ ಪಡೆಯುವುದು ಎಂಬ ಎರಡು ಆಯ್ಕೆಯಿಟ್ಟಿದೆ. ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್ ಮಾಡಿ ದೇಶದ ಮುಖ್ಯಮಂತ್ರಿಗಳ ವಿರುದ್ಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜಿಎಸ್‌ಟಿ ಪರಿಹಾರ ವಿಷಯದಲ್ಲಿ ಕೇಂದ್ರದ ಸಾಲ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವ ಕಾರಣ, ಮೋದಿಯವರಿಗಾಗಿ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನೇಕೆ ಅಡವಿಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.