ETV Bharat / bharat

ವಿಶೇಷ ಲೇಖನ.. ಮದ್ಯ ಸೇವನೆಯಿಂದ ಕೊರೊನಾ ವೈರಸ್​ ಬೇಗ ಹರಡುತ್ತೆ.. WHO ಎಚ್ಚರಿಕೆ - WHO on corona

ಮದ್ಯಪಾನ ಮಾಡುವ ವ್ಯಕ್ತಿಯು, ಅವನ ವರ್ತನೆಯಿಂದಾಗಿ ವೈರಸ್‌ನ ಸಮಾಜದಲ್ಲಿ ಸುಲಭವಾಗಿ ಹರಡಲು ಕಾರಣವಾಗಬಹುದು ಎಂದು ಡಬ್ಲ್ಯುಹೆಚ್‌ಒ ಬಹಿರಂಗಪಡಿಸಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯವನ್ನು ಸೇವಿಸುವುದರಿಂದ ಮಾನವರಲ್ಲಿ ನ್ಯುಮೋನಿಯಾ ಉಂಟಾಗುವ ಅಪಾಯಕ್ಕೆ ಕಾರಣವಾಗುತ್ತದೆ. ಯಾಕಂದರೆ, ಅದು ಪ್ರತಿರೋಧಕತೆಯನ್ನು ಕಡಿಮೆ ಮಾಡುತ್ತದೆ.

drunkards
ಮದ್ಯ
author img

By

Published : May 8, 2020, 1:47 PM IST

ಹೈದರಾಬಾದ್ : ಲಾಕ್‌ಡೌನ್ ಮಾನದಂಡಗಳು ಸಡಿಲಗೊಂಡ ಬೆನ್ನಲ್ಲೇ ಮತ್ತು ದೇಶಾದ್ಯಂತ ವೈನ್ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿದ ತಕ್ಷಣ, ರಾಜ್ಯದ ವೈನ್ ಶಾಪ್‌ಗಳ ಎದುರು ಜಾತ್ರೋಪಾದಿಯಲ್ಲಿ ಜನರ ಉದ್ದನೆಯ ಸಾಲುಗಳೇ ಕಾಣುತ್ತಿದ್ದವು.

ಜೊತೆಗೆ ಜನದಟ್ಟಣೆಯನ್ನು ನಿಯಂತ್ರಿಸಲು ವೈನ್ ಮಳಿಗೆಗಳ ಎದುರು ಪೊಲೀಸರು ಪ್ರವೇಶಿಸಿ ಕ್ರಮ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಯಿತು. ಕೋವಿಡ್‌-19 ದೇಶದಾದ್ಯಂತ ಹಬ್ಬುತ್ತಿರುವ ಹೊತ್ತಿನಲ್ಲಿ ಜನರು ಮದ್ಯ ಸೇವನೆ ಮಾಡುವುದಕ್ಕೆ ವೈದ್ಯಕೀಯ ಲೋಕ ಅನುಮತಿ ನೀಡುವುದಿಲ್ಲ. ವಿಶ್ವಆರೋಗ್ಯ ಸಂಸ್ಥೆ ಪ್ರಕಾರ ಮದ್ಯಪಾನ ಮಾಡುವುದು ಕೋವಿಡ್-19ಗೆ ವಿರೋಧ. ಮದ್ಯ ಸೇವೆನೆಯಿಂದಾಗಿ ಕರೋನಾ ವೈರಸ್‌ ಸುಲಭವಾಗಿ ದೇಹವನ್ನು ಪ್ರವೇಶಿಸುತ್ತದೆ ಮತ್ತು ಹರಡುತ್ತದೆ ಎಂದು WHO ಮುನ್ನೆಚ್ಚರಿಕೆ ನೀಡಿದೆ.

ಮದ್ಯಪಾನ ಮಾಡುವ ವ್ಯಕ್ತಿಯು, ಅವನ ವರ್ತನೆಯಿಂದಾಗಿ ವೈರಸ್‌ನ ಸಮಾಜದಲ್ಲಿ ಸುಲಭವಾಗಿ ಹರಡಲು ಕಾರಣವಾಗಬಹುದು ಎಂದು ಡಬ್ಲ್ಯುಹೆಚ್‌ಒ ಬಹಿರಂಗಪಡಿಸಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯವನ್ನು ಸೇವಿಸುವುದರಿಂದ ಮಾನವರಲ್ಲಿ ನ್ಯುಮೋನಿಯಾ ಉಂಟಾಗುವ ಅಪಾಯಕ್ಕೆ ಕಾರಣವಾಗುತ್ತದೆ. ಯಾಕಂದರೆ, ಅದು ಪ್ರತಿರೋಧಕತೆಯನ್ನು ಕಡಿಮೆ ಮಾಡುತ್ತದೆ. 2015ರಲ್ಲಿ ನಡೆಸಿದ ಅಧ್ಯಯನವು ಇದನ್ನು ಬಹಿರಂಗಪಡಿಸಿತು ಮತ್ತು ಅದನ್ನು 'ಜರ್ನಲ್ ಆಲ್ಕೋಹಾಲ್ ರೀಸರ್ಚ್'ನಲ್ಲಿ ಪ್ರಕಟಿಸಲಾಗಿದೆ.

ರಕ್ತದಲ್ಲಿ ಆಲ್ಕೋಹಾಲ್ ಶೇಕಡಾವಾರು ಪ್ರಮಾಣ ಹೆಚ್ಚಾದಾಗ ದೇಹದಲ್ಲಿನ ನೈಸರ್ಗಿಕ ರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹೆಚ್ಚಿನ ಮದ್ಯ ಸೇವನೆಯು ಕುಟುಂಬಗಳಲ್ಲಿ ಕೌಟುಂಬಿಕ ಹಿಂಸಾಚಾರ ಮತ್ತು ಸಮಾಜದಲ್ಲಿ ತೊಂದರೆಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

ಇಂಥ ಸನ್ನಿವೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಗಾಯಗೊಳ್ಳುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಇಂತಹ ಘಟನೆಗಳು ಸ್ವಯಂಪ್ರೇರಿತ ಸಾವಿಗೆ ಕಾರಣವಾಗಬಹುದು ಎಂದು ಅದು ಹೇಳಿದೆ. WHO ಈ ವರ್ಷದ ಫೆಬ್ರವರಿಯಲ್ಲಿನ ತನ್ನ ಆದ್ಯತೆಯ ಪಟ್ಟಿಯಲ್ಲಿ ಮದ್ಯದ ಘಟನೆಗಳನ್ನು ಸೇರಿಸಿದೆ. ವಿಶ್ವದಾದ್ಯಂತ ಮದ್ಯ ಮಾರಾಟವನ್ನು ನಿಯಂತ್ರಿಸಲು ಉತ್ತೇಜನ ನೀಡುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮದ್ಯ ಮಾರಾಟ ಮತ್ತು ವೈರಸ್ ಹರಡುವಿಕೆಯನ್ನು ಪರೀಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳನ್ನು ಕೇಳಿದೆ. ಇಂಥ ಸ್ಥಿತಿಯಲ್ಲಿ ಭಾರತ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ವಿಪರ್ಯಾಸವೇ ಸರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.