ETV Bharat / bharat

ಅರೆಸ್ಟ್​ ಆದ 24 ಗಂಟೆಯಲ್ಲೇ ದುಬೆ ಮಟಾಷ್​​​​​​​​​: ದಿಶಾ ಹತ್ಯೆ ಆರೋಪಿಗಳ ಎನ್​​​ಕೌಂಟರ್​​​​​​ ನೆನಪಿಸಿದ ಪ್ರಕರಣ!! - ದಿಶಾ ಘಟನೆ ಸುದ್ದಿ,

ಬಂಧಿಸಿದ 24 ಗಂಟೆಯೊಳಗೆ ಮೋಸ್ಟ್​ ವಾಂಟೆಡ್​ ವಿಕಾಸ್​ ದುಬೆಯನ್ನ ಪೊಲೀಸರು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಲಾಗಿದೆ. ಈ ಮೂಲಕ ಹೈದರಾಬಾದ್​ನಲ್ಲಿ ನಡೆದ ದಿಶಾ ಹತ್ಯೆ ಪ್ರಕರಣದ ಆರೋಪಿಗಳನ್ನ ಎನ್​ಕೌಂಟರ್​ ಮಾಡಿದ ಘಟನೆಯನ್ನ ನೆನಪಿಸಿದಂತಾಗಿದೆ.

Vikas dubey died, Vikas dubey died in kanpur, Vikas dubey died in encounter, Vikas dubey died news, Disha incident, remember Disha incident, Disha incident news, ವಿಕಾಸ್​ ದುಬೆ ಸಾವು, ಕಾನ್ಪುರಿನಲ್ಲಿ ವಿಕಾಸ್​ ದುಬೆ ಸಾವು, ಎನ್​ಕೌಂಟರ್​ನಲ್ಲಿ ವಿಕಾಸ್​ ದುಬೆ ಸಾವು, ದಿಶಾ ಘಟನೆ, ನೆನಪಿಸಿದ ದಿಶಾ ಘಟನೆ, ದಿಶಾ ಘಟನೆ ಸುದ್ದಿ,
ಅರೆಸ್ಟ್​ ಆಗಿ 24 ಗಂಟೆಯಲ್ಲೇ ವಿಕಾಸ್​ ದುಬೆ ಎನ್​ಕೌಂಟರ್
author img

By

Published : Jul 10, 2020, 9:32 AM IST

Updated : Jul 10, 2020, 2:43 PM IST

ಹೈದರಾಬಾದ್​: ಇಂದು ಬೆಳ್ಳಂಬೆಳಗ್ಗೆ ಯುಪಿ ಪೊಲೀಸರು ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ವಿಕಾಸ್​ ದುಬೆಯನ್ನ ಬೇಟೆಯಾಡಿದ್ದಾರೆ. ಆದ್ರೆ ಈ ಎನ್​ಕೌಂಟರ್​ ನಮಗೆ ದಿಶಾ ಘಟನೆಯನ್ನ ನೆನಪಿಸುವಂತಿದೆ.

ಹೌದು, 2019 ನವೆಂಬರ್​ 27ರ ರಾತ್ರಿ ನಾಲ್ವರು ದುಷ್ಕರ್ಮಿಗಳು ದಿಶಾಳನ್ನು ಅತ್ಯಾಚಾರ ಎಸಗಿ ಜೀವಂತವಾಗಿ ಸುಟ್ಟು ಹಾಕಿದ್ದರು. ತೆಲಂಗಾಣ ಪೊಲೀಸರು 24 ಗಂಟೆಯಲ್ಲೇ ನಾಲ್ವರು ಆರೋಪಿಗಳನ್ನು ಬಂಧಿಸಿ 9 ದಿನದೊಳಗೆ ಎನ್​ಕೌಂಟರ್​ ಮಾಡಿ ಅವರ ಕಥೆ ಮುಗಿಸಿದ್ದರು.

ದುಷ್ಟರಿಗೆ ತಕ್ಕ ಪಾಠ ಕಲಿಸಿದ್ದ ಕುರುನಾಡ ಕಲಿ...!

ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು ಕಾಮುಕರು. ಈ ಕಾಮಪಿಪಾಸುಗಳ ವಿರುದ್ಧ ದೇಶದ ಜನರೇ ರೊಚ್ಚಿಗೆದ್ದು ಬೀದಿಗಿಳಿದಿದ್ದರು. ಕರುನಾಡ ಮಣ್ಣಿನ ಅಧಿಕಾರಿ ಅಂದು ಈ ದುಷ್ಟರಿಗೆ ತಕ್ಕ ಪಾಠ ಕಲಿಸಿದ್ದರು. ಈ ಸೂಪರ್​ ಕಾಪ್​ ಕ್ರಮಕ್ಕೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.

ಅರೆಸ್ಟ್​ ಆಗಿ 24 ಗಂಟೆಯಲ್ಲೇ ವಿಕಾಸ್​ ಎನ್​ಕೌಂಟರ್!

ನಿನ್ನೆ ಮಧ್ಯೆಪ್ರದೇಶದ ಉಜ್ಜೈನಿಯಲ್ಲಿ ವಿಕಾಸ್​ ದುಬೆಯನ್ನು ಬಂಧಿಸಲಾಗಿತ್ತು. ಉತ್ತರಪ್ರದೇಶದ ಕಾನ್ಪುರ ಪೊಲೀಸರಿಗೆ ಉಜ್ಜೈನಿ ಪೊಲೀಸರು ವಿಕಾಸ್​ನನ್ನು ಹಸ್ತಾಂತರಿಸಿದ್ದರು. ಇಂದು ಬೆಳಗ್ಗೆ ಕಾನ್ಪುರಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ವಿಕಾಸ್​ ದುಬೆ ಇದ್ದ ಕಾರು ಪಲ್ಟಿಯಾಗಿತ್ತು. ಈ ವೇಳೆ, ಪೊಲೀಸರ ಗನ್​ ಕಿತ್ಕೊಂಡು ವಿಕಾಸ್​ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಮತ್ತು ವಿಕಾಸ್​ ದುಬೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಯುಪಿ ಪೊಲೀಸರು ವಿಕಾಸ್​ ದುಬೆಯನ್ನು ಎನ್​ಕೌಂಟರ್​ ಮಾಡಿದ್ದಾರೆ. ಅರೆಸ್ಟ್​ ಆಗಿ 24 ಗಂಟೆಯಲ್ಲೇ ವಿಕಾಸ್​ ದುಬೆ ಎನ್​ಕೌಂಟರ್​ ಆಗಿರುವುದು ಇಲ್ಲಿ ಗಮನಿಸಬಹುದಾಗಿದೆ.

ಒಟ್ಟಿನಲ್ಲಿ ಈ ಎನ್​ಕೌಂಟರ್​ ದಿಶಾ ಘಟನೆಯನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

Last Updated : Jul 10, 2020, 2:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.