ETV Bharat / bharat

ಹಿಮದಲ್ಲಿ ಸಿಲುಕಿದ್ದ ವಾಹನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಸೇನೆ

ಶನಿವಾರ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ರಜ್ದಾನ್ ಮೇಲ್ಭಾಗದಲ್ಲಿ ಎರಡು ಪ್ರಯಾಣಿಕರ ವಾಹನಗಳು ಸಿಲುಕಿಕೊಂಡಿವೆ. ಹಿಮದಲ್ಲಿ ಹೂತುಹೋಗಿದ್ದ ವಾಹನಗಳನ್ನು ಸುರಕ್ಷಿತ ಸ್ಥಳಗಳಿಗೆ ಸೇನೆ ಸ್ಥಳಾಂತರಿಸಿದೆ.

author img

By

Published : Dec 20, 2020, 4:57 PM IST

Vehicles trapped in snow rescued by Army in J-K
ಹಿಮದಲ್ಲಿ ಸಿಲುಕಿದ್ದ ವಾಹನಗಳ ಸ್ಥಳಾಂತರ

ಬಂಡಿಪೋರಾ (ಜಮ್ಮು ಮತ್ತು ಕಾಶ್ಮೀರ): ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ಎರಡು ಪ್ರಯಾಣಿಕ ವಾಹನಗಳು ರಜ್ದಾನ್ ಮೇಲ್ಭಾಗದಲ್ಲಿ ಹಿಮದಲ್ಲಿ ಸಿಲುಕಿಕೊಂಡಿದ್ದು, ಭಾರತೀಯ ಸೇನೆ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.

ಶನಿವಾರ ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ರಜ್ದಾನ್ ಮೇಲ್ಭಾಗದಲ್ಲಿ ಎರಡು ಪ್ರಯಾಣಿಕ ವಾಹನಗಳು ಹಿಮದಲ್ಲಿ ಸಿಲುಕಿದ್ದವು. ಬಳಿಕ ವಾಹನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೇನೆ ನಿನ್ನೆಯೇ ಸುರಕ್ಷಿತವಾಗಿ ಸ್ಥಳಾಂತರಿಸಿತ್ತು. ಇಂದು ಹಿಮದಲ್ಲಿ ಸಿಕ್ಕಿಬಿದ್ದ ವಾಹನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಓದಿ: ಕೊರೊನಾ ಬಾಧಿಸಿದ ವಿಮಾನಯಾನ​ ಸಿಬ್ಬಂದಿಗೆ 10 ದಿನ ಹೋಂ ​ಐಸೋಲೇಷನ್ ಕಡ್ಡಾಯ: ಡಿಜಿಸಿಎ

ಡಿಸೆಂಬರ್​ 12 ಚಳಿಗಾಲದ ಆರಂಭದಲ್ಲೇ ಕಾಶ್ಮೀರವು ಭಾರಿ ಹಿಮಪಾತದಿಂದ ಬಿಳಿ ಕಂಬಳಿ ಹೊದ್ದಂತೆ ಕಾಣುತ್ತಿತ್ತು. ಇದು ಪ್ರವಾಸಿಗರು ಹಾಗೂ ಜನರಲ್ಲಿ ಭರವಸೆ ಮತ್ತು ಉತ್ಸಾಹ ಮೂಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.