ETV Bharat / bharat

ವಲಸೆ ಕಾರ್ಮಿಕರ ವಿಷಯದಲ್ಲಿ ಯುಪಿ ಸರ್ಕಾರದಿಂದ ಚಿಲ್ಲರೆ ರಾಜಕಾರಣ: ಕಾಂಗ್ರೆಸ್​ ಆರೋಪ - ಉತ್ತರಪ್ರದೇಶ

ಉತ್ತರ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಲು ಕಾಂಗ್ರೆಸ್‌ ವ್ಯವಸ್ಥೆ ಮಾಡಿದ್ದ ಬಸ್‌ಗಳಿಗೆ ಉದ್ದೇಶ ಪೂರ್ವಕವಾಗಿಯೇ ಅನುಮತಿ ನೀಡಲಾಗಿಲ್ಲ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಜುಬೈರ್‌ ಖಾನ್‌ ಆರೋಪಿಸಿದ್ದಾರೆ.

up-govt-playing-petty-politics-over-migrants-suffering-cong-leader-zubair-khan
ವಲಸೆ ಕಾರ್ಮಿಕರ ವಿಷ್ಯದಲ್ಲಿ ಯುಪಿ ಸರ್ಕಾರದ್ದು ಚಿಲ್ಲರೆ ರಾಜಕಾರಣ; ಎಐಸಿಸಿ ಕಾರ್ಯದರ್ಶಿ ಜುಬೈರ್‌ ಖಾನ್‌ ಆಕ್ರೋಶ
author img

By

Published : May 20, 2020, 3:41 PM IST

ಉತ್ತರ ಪ್ರದೇಶ: ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಉತ್ತರ ಪ್ರದೇಶ ಸರ್ಕಾರ ವಲಸೆ ಕಾರ್ಮಿಕರ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಜುಬೈರ್‌ ಖಾನ್‌ ಆರೋಪಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್‌ ವ್ಯವಸ್ಥೆ ಮಾಡಿದ್ದ ಬಸ್‌ ಸೇವೆಗೆ ಅನುಮತಿ ನೀಡಲು ಉದ್ದೇಶ ಪೂರ್ವಕವಾಗಿ ನಿರಾಕರಿಸಲಾಗಿದೆ. ಇದೊಂದು ಚಿಲ್ಲರೆ ರಾಜಕಾರಣ ಅಂತ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಇಂದು ಸಂಜೆ 4 ಗಂಟೆವರೆಗೆ ಯುಪಿ ಗಡಿಯಲ್ಲಿ ಬಸ್‌ಗಾಗಿ ಕಾಯುತ್ತಾರೆ ಎಂದು ಖಾನ್‌ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.