ಅಯೋಧ್ಯೆ( ಉತ್ತರ ಪ್ರದೇಶ): ಐದು ದಶಕಗಳ ಹೋರಾಟದ ಬಳಿಕ ಇವತ್ತು 135 ಕೋಟಿ ಭಾರತೀಯರ ಸಂಕಲ್ಪ ಪೂರ್ಣವಾಗುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಂತಸ ವ್ಯಕ್ತಪಡಿಸಿದರು.
ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿದ ಬಳಿಕ ಮಾತನಾಡಿದ ಅವರು, ಇವತ್ತು ಭಾರತೀಯರಿಗೆ ಐತಿಹಾಸಿಕ ಮತ್ತು ಭಾವನಾತ್ಮಕ ದಿನ. 500 ವರ್ಷಗಳ ಸಂಕಲ್ಪ ಮತ್ತು ತಾಳ್ಮೆಗೆ ಫಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರ ದೃಢ ಸಂಕಲ್ಪದಿಂದಾಗಿ ಇಂದು ಶಿಲಾನ್ಯಾಸ ನೆರವೇರಿದೆ ಎಂದು ಬಣ್ಣಿಸಿದರು.
ನಾವು ಮೂರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ದೀಪೋತ್ಸವ ಕಾರ್ಯಕ್ರಮ ಆರಂಭಿಸಿದ್ದೆವು. ಇವತ್ತು ಅದರ ಪ್ರತಿಫಲ ನಮಗೆ ಸಿಕ್ಕಿದೆ ಎಂದು ಬಹಳ ಖುಷಿಯಿಂದ ಹೇಳಿದರು. ಇದು ಕೇವಲ ರಾಮ ಮಂದಿರ ನಿರ್ಮಾಣದ ಕಾರ್ಯಕ್ರಮವಲ್ಲ. ರಾಮರಾಜ್ಯ ನಿರ್ಮಾಣದ ಕನಸಿನ ಕಾರ್ಯಕ್ರಮ ಎಂದು ಈ ವೇಳೆ ಯೋಗಿ ಆದಿತ್ಯನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.