ETV Bharat / bharat

ಸ್ಪೈಸ್ ಜೆಟ್​ನಿಂದಲೂ ಕುನಾಲ್​ ಕಮ್ರಾಗೆ ನಿಷೇಧ... ಮುಂದಿನ ಸೂಚನೆವರೆಗೆ ವಿಮಾನ ಪ್ರಯಾಣ ಅಮಾನತು - ಪತ್ರಕರ್ತ ಅರ್ನಾಬ್ ಗೋಸ್ವಾಮಿ

ಮಂಗಳವಾರ ಮುಂಬೈಯಿಂದ ಲಕ್ನೋಗೆ ಇಂಡಿಗೊ ವಿಮಾನ 6ಇ5317ರಲ್ಲಿ ಪ್ರಯಾಣಿಸುತ್ತಿದ್ದ ಸ್ಟಾಂಡ್​-ಅಪ್​ ಕಾಮಿಡಿಯನ್​ ಕುನಾಲ್​ ಕಮ್ರಾ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಅವಹೇಳನಕಾರಿ ವಿಡಿಯೋವೊಂದನ್ನು ಮಾಡಿ ಆಗಿಂದಾಗಲೇ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಘಟನೆ ಪ್ರತಿಷ್ಠಿತ ಇಂಡಿಗೋ ವಿಮಾನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ನಡೆದಿದೆ. ಈ ಹಿನ್ನೆಲೆ ಇಂಡಿಗೋ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಕಮ್ರಾಗೆ ತಮ್ಮ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ನಿಷೇಧ ಹೇರಿವೆ.

SpiceJet has decided to suspend Kunal Kamra from flying with the airline till further notice
ಸ್ಪೈಸ್ ಜೆಟ್ ಹೇಳಿಕೆ: ಮುಂದಿನ ಸೂಚನೆವರೆಗೆ ಕುನಾಲ್ ಕಮ್ರಾ ವಿಮಾನಯಾನ ಅಮಾನತು
author img

By

Published : Jan 29, 2020, 3:47 PM IST

ನವದೆಹಲಿ: ಮಂಗಳವಾರ ಇಂಡಿಗೂ ವಿಮಾನದಲ್ಲಿನ ಕುನಾಲ್​ ಕಮ್ರಾ ನಡವಳಿಕೆಯನ್ನು ಖಂಡಿಸಿರುವ ಸ್ಪೈಸ್​ ಜೆಟ್, ತನ್ನ ವಿಮಾನದಲ್ಲೂ ಕೂಡ​ ಕಮ್ರಾ ಅವರ ಪ್ರಯಾಣಕ್ಕೆ ಮುಂದಿನ ಆರು ತಿಂಗಳವರೆಗೆ ಅಮಾನತು ನಿಷೇಧ ಹೇರಿದೆ.

ಮಂಗಳವಾರ ಮುಂಬೈಯಿಂದ ಲಕ್ನೋಗೆ ಇಂಡಿಗೊ ವಿಮಾನ 6ಇ5317ರಲ್ಲಿ ಪ್ರಯಾಣಿಸುತ್ತಿದ್ದ ಸ್ಟಾಂಡ್​-ಅಪ್​ ಕಾಮಿಡಿಯನ್​ ಕುನಾಲ್​ ಕಮ್ರಾ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಗ್ಗೆ ಅವಹೇಳನಕಾರಿ ವಿಡಿಯೋವೊಂದನ್ನು ಮಾಡಿ ಆಗಿಂದಾಗಲೇ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಘಟನೆ ಪ್ರತಿಷ್ಠಿತ ಇಂಡಿಗೋ ವಿಮಾನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ನಡೆದಿತ್ತು. ಈ ಹಿನ್ನಲೆ ಸ್ಪೈಸ್​ ಜೆಟ್ ಕೂಡ ಈ ಮಹತ್ವ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಸ್ವತಃ ಸ್ಪೈಸ್​ ಜೆಟ್​ ಹೇಳಿಕೆ ನೀಡಿದ್ದು, ಕಮ್ರಾ ಅವರ ಆನ್‌ಬೋರ್ಡ್ ನಡವಳಿಕೆ(ಹೊರಟ ವಿಮಾನದಲ್ಲಿ ನಡೆದುಕೊಂಡ ರೀತಿ) "ಸ್ವೀಕಾರಾರ್ಹವಲ್ಲ". ಈ ರೀತಿಯ ನಡವಳಿಕೆಗಳು ಸಹ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯುಂಟುಮಾಡುತ್ತದೆ. ಹೀಗಾಗಿ, ಕುನಾಲ್ ಕಮ್ರಾ ಅವರು ಇಂಡಿಗೊದಲ್ಲಿ ಆರು ತಿಂಗಳ ಕಾಲ ಹಾರಾಟ ಮಾಡುವುದನ್ನು ನಾವು ಅಮಾನತುಗೊಳಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.