ETV Bharat / bharat

ಶಾರ್ಟ್​​ ಸರ್ಕ್ಯೂಟ್‌: 5 ಮಕ್ಕಳು ಸೇರಿ ಒಂದೇ ಕುಟುಂಬದ ​​6 ಮಂದಿ ಸಾವು - short circuit in UP

ಉತ್ತರ ಪ್ರದೇಶದ ಗಾಜಿಯಾಬಾದ್​ನ ಲೋನಿಯಲ್ಲಿರುವ ಮನೆಯೊಂದರಲ್ಲಿ ವಿದ್ಯುತ್​ ಅವಘಡ ಸಂಭವಿಸಿ ಓರ್ವ ಮಹಿಳೆ ಹಾಗೂ ಐದು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ​​ಆರು ಮಂದಿ ಮೃತಪಟ್ಟಿದ್ದಾರೆ.

Six people from the same family electrocuted
5 ಮಕ್ಕಳು ಸೇರಿ ಒಂದೇ ಕುಟುಂಬದ ​​6 ಮಂದಿ ಸಾವು
author img

By

Published : Dec 30, 2019, 1:07 PM IST

Updated : Dec 30, 2019, 1:42 PM IST

ಗಾಜಿಯಾಬಾದ್: ಶಾರ್ಟ್​​ ಸರ್ಕ್ಯೂಟ್‌ನಿಂದಾಗಿ​ ಓರ್ವ ಮಹಿಳೆ ಹಾಗೂ ಐದು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ​​ಆರು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.

5 ಮಕ್ಕಳು ಸೇರಿ ಒಂದೇ ಕುಟುಂಬದ ​​6 ಮಂದಿ ಸಾವು

ಗಾಜಿಯಾಬಾದ್​ನ ಲೋನಿಯಲ್ಲಿರುವ ಮೌಲಾನಾ ಆಜಾದ್ ಕಾಲೋನಿಯಲ್ಲಿರುವ ಮನೆಯೊಂದರಲ್ಲಿ ವಿದ್ಯುತ್​ ಅವಘಡ ಸಂಭವಿಸಿದೆ. ಶಾರ್ಟ್​​ ಸರ್ಕ್ಯೂಟ್‌ನಿಂದ ರೆಫ್ರಿಜರೇಟರ್ ಸುಟ್ಟು ಬೂದಿಯಾಗಿದ್ದು, ವಿದ್ಯುತ್​ ಶಾಕ್​ ತಗುಲಿ ಮನೆಯಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅಜಯ್​ ಶಂಕರ್​ ಪಾಂಡೆ ತಿಳಿಸಿದ್ದಾರೆ.

ಮೃತರನ್ನು ಪರ್ವೀನ್ (40), ಫಾತಿಮಾ (12), ಸಾಹಿಮಾ (10), ರತಿಯಾ (8) , ಅಬ್ದುಲ್ ಅಜೀಮ್​ (8) ಹಾಗೂ ಅಬ್ದುಲ್ ಅಹದ್​ (5) ಎಂದು ಗುರುತಿಸಲಾಗಿದೆ. ಇನ್ನು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:Body:Conclusion:
Last Updated : Dec 30, 2019, 1:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.