ಮುಂಬೈ: ಗ್ರಾಹಕರಿಗೆ ಕಡಿಮೆ ದರದಲ್ಲಿ ಜಿಯೋ ಮೊಬೈಲ್ ನೆಟ್ವರ್ಕ್ ನೀಡಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಮುಖೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಇದೀಗ ರಿಲಯನ್ಸ್ ಜಿಯೋ ಗಿಗಾಫೈಬರ್ ನೀಡಲು ಮುಂದಾಗಿದ್ದು, ಮತ್ತೊಮ್ಮೆ ಹೊಸ ಕ್ರಾಂತಿಯ ಸಂಚಲನ ಮೂಡಿಸುವುದು ಬಹುತೇಕ ಖಚಿತವಾಗಿದೆ.
ಮುಂಬೈನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮುಖೇಶ್ ಅಂಬಾನಿ ಹತ್ತು ಹಲವು ಆಫರ್ ಘೋಷಣೆ ಮಾಡಿದ್ದು, ಇದರ ಮಧ್ಯೆ ರಿಲಯನ್ಸ್ ಎಫ್‌ಟಿಟಿಎಚ್ ಬ್ರಾಡ್‌ಬ್ಯಾಂಡ್ ಸೇವೆಯ ಜಿಯೋ ಫಾರೆವರ್ ವಾರ್ಷಿಕ ಪ್ಲಾನ್ ಪಡೆದುಕೊಳ್ಳುವ ಗ್ರಾಹಕರಿಗೆ ಫುಲ್ ಎಚ್‌ಡಿ 4K ಎಲ್‌ಇಡಿ ಟಿವಿ ಅಥವಾ ಹೋಮ್ ಪಿಸಿ ಉಚಿತವಾಗಿ ದೊರೆಯಲಿದೆ. ಜತೆಗೆ 4K ಸೆಟಪ್ ಬಾಕ್ಸ್ ಉಚಿತವಾಗಿ ಲಭ್ಯವಾಗಲಿದೆ ಎಂದು ತಿಳಿಸಿದೆ.
ಮನೆಯಲ್ಲೇ ಕುಳಿತು ಮೊದಲ ದಿನದ ಮೊದಲ ಶೋ ವೀಕ್ಷಿಸಿ...! ಸಿನಿಮಾ ವೀಕ್ಷಣೆಗೆ ಜಿಯೋ ಹೊಸ ಕ್ರಾಂತಿ
ಜಿಯೋ ಗಿಗಾಫೈಬರ್ ಬೆಲೆ ತಿಂಗಳಿಗೆ 700 ರೂ.ಗೆ ಆರಂಭವಾಗಿ 10,000 ರೂ.ವರೆಗಿನ ಪ್ಲಾನ್ ಇರಲಿದೆ. ವಾರ್ಷಿಕ್ ಪ್ಲಾನ್ ಪಡೆದುಕೊಳ್ಳುವ ಗ್ರಾಹಕರಿಗೆ ಮಾತ್ರ ಈ ಸೇವೆ ಲಭ್ಯವಾಗಲಿದೆ. ಇನ್ನು ಗ್ರಾಹಕರಿಗೆ ಯಾವ ಟಿವಿ ನೀಡಲಿದೆ ಎಂಬುದನ್ನ ಇಲ್ಲಿ ಬಹಿರಂಗಪಡಿಸಿಲ್ಲ. ಸೆಪ್ಟೆಂಬರ್ 5ರಿಂದ ವಾಣಿಜ್ಯ ಬಳಕೆಗೆ ಜಿಯೋ ಗಿಗಾಫೈಬರ್ ಬ್ರಾಂಡ್ಬ್ಯಾಂಡ್ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ ಗಿಗಾಫೈಬರ್ 100 MBPS ವೇಗದಿಂದ 1 GBPS ವೇಗದವರೆಗಿನ ವಿವಿಧ ಪ್ಲ್ಯಾನ್‌ಗಳನ್ನು ಹೊಂದಿದೆ.
ಇದೇ ವೇಳೆ ಜಮ್ಮು-ಕಾಶ್ಮೀರದಲ್ಲೂ ಬಂಡವಾಳ ಹೂಡಿಕೆಗೆ ಮುಂದಾಗಿರುವ ಮುಖೇಶ್ ಅಂಬಾನಿ ಅದಕ್ಕಾಗಿ ಹೊಸ ತಂಡ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.