ETV Bharat / bharat

ರಾಗಾ ಹಾಗೆ ಆರೋಪ ಮಾಡೇ ಇಲ್ಲ: ಯೂಟರ್ನ್ ಹೊಡೆದ ಗುಲಾಮ್​ ನಬಿ - Congress

ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ರಾಹುಲ್​ ಗಾಂಧಿ ಕಾರ್ಯಕಾರಿ ಸಮಿತಿಯಲ್ಲಾಗಲಿ, ಹೊರಗಡೆಯಾಗಲಿ ಹೇಳೇ ಇಲ್ಲ ಎಂದು ಗುಲಾಮ್​​ ನಬಿ ಆಜಾದ್ ಹೇಳಿಕೆ ನೀಡಿದ್ದಾರೆ.

Ghulam Nabi Azad
ಗುಲಾಬ್​ ನಬಿ ಆಜಾದ್
author img

By

Published : Aug 24, 2020, 5:19 PM IST

ನವದೆಹಲಿ: ನಾವು ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂಬ ರಾಹುಲ್​ ಗಾಂಧಿಯವರ ಆರೋಪ ನಿಜವೇ ಆಗಿದ್ದಲ್ಲಿ ನಾನು ರಾಜೀನಾಮೆ ನೀಡುವೆ ಎಂದು ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್​ ನಬಿ ಆಜಾದ್​ ಇದೀಗ ಉಲ್ಟಾ ಹೊಡೆದಿದ್ದಾರೆ.

ಪಕ್ಷದಲ್ಲಿ ಪೂರ್ಣಾವಧಿ, ಪರಿಣಾಮಕಾರಿ ನಾಯಕತ್ವ ಹಾಗೂ ಸುಧಾರಣೆಗಳ ಅಗತ್ಯವಿದೆ ಎಂದು ಉಲ್ಲೇಖಿಸಿ ಆಜಾದ್ ಸೇರಿದಂತೆ ಕಾಂಗ್ರೆಸ್​ನ 23 ನಾಯಕರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಇಂದು ನಡೆಯುತ್ತಿರುವ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ.

  • Rahul Gandhi never said it, neither in CWC or outside, that this letter (to Sonia Gandhi about party leadership) was written in collusion with BJP: Ghulam Nabi Azad, Congress (File pic) pic.twitter.com/nv0MWWyodV

    — ANI (@ANI) August 24, 2020 " class="align-text-top noRightClick twitterSection" data=" ">

ಕೈ ಮುಖಂಡರ ಪತ್ರಕ್ಕೆ ಸಭೆಯಲ್ಲಿ ರಾಹುಲ್​ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗ ಏಕೆ ಈ ವಿಚಾರ ಪ್ರಸ್ತಾಪ ಮಾಡಲಿಲ್ಲ. ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿರುವಾಗ ಏಕೆ ಪತ್ರ ಬರೆದಿದ್ದೀರಾ? ಎಂದು ಪ್ರಶ್ನಿಸಿದ್ದರು. ಅಲ್ಲದೇ ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ, ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಗಾ ಹೇಳಿಕೆ ನೀಡಿದ್ದರು ಎಂದು ಆರೋಪ ಮಾಡಿದ್ದರು ಎಂದು ಮೂಲಗಳು ತಿಳಿಸಿದ್ದವು.

ರಾಹುಲ್​ ಗಾಂಧಿ ಆರೋಪಕ್ಕೆ ಗುಲಾಬ್​ ನಬಿ ಆಜಾ ಕೂಡ ಪ್ರತಿಕ್ರಿಯೆ ನೀಡಿ, ಆರೋಪ ಸಾಬೀತಾದಲ್ಲಿ ರಾಜೀನಾಮೆ ನೀಡುವೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಕಾರ್ಯಕಾರಿ ಸಮಿತಿಯಲ್ಲಾಗಲಿ, ಹೊರಗಡೆಯಾಗಲಿ ರಾಗಾ ಹಾಗೇ ಆರೋಪ ಮಾಡೇ ಇಲ್ಲ ಎಂದು ಆಜಾದ್​ ಯೂಟರ್ನ್​​ ಹೊಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.