ಲೂಧಿಯಾನ್(ಪಂಜಾಬ್): 30 ವರ್ಷದ ಯುವತಿ ಮೇಲೆ ಕಾಮುಕರಿಬ್ಬರು ಕಾರಿನಲ್ಲಿ ಅತ್ಯಾಚಾರ ಎಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 21ರಂದು ಯುವತಿ ದೂರು ದಾಖಲು ಮಾಡಿದ್ದು, ಅದರ ಅನ್ವಯ ಇಬ್ಬರ ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಯುವತಿಯ ಸ್ನೇಹಿತರು ಚಲಿಸುತ್ತಿದ್ದ ಕಾರಿನಲ್ಲಿ ಆಕೆಯ ಮೇಲೆ ದುಷ್ಕೃತ್ಯವೆಸಗಿದ್ದಾರೆ. ಇಬ್ಬರನ್ನು ಉತ್ತರಪ್ರದೇಶದ ಪರಶಾಂತ್ ಶುಕ್ಲಾ ಹಾಗೂ ರಣದೀರ್ ಸಿಂಗ್ ಎಂದು ಗುರುತಿಸಲಾಗಿದೆ. ಶುಕ್ಲಾ ಸದ್ಯ ಲೂಧಿಯಾನದ ಹೊಸ ರಾಜ್ಗುರು ನಗರದಲ್ಲಿ ವಾಸಿಸುತ್ತಿದ್ದಾರೆ.
-
Punjab: Two arrested for allegedly raping a girl in a car in Ludhiana.
— ANI (@ANI) October 23, 2020 " class="align-text-top noRightClick twitterSection" data="
"The victim came to lodge a rape complaint allegedly committed on Oct 21. An FIR has been registered & we have arrested the 2 accused & impounded the car. An investigation is underway," says Police. pic.twitter.com/ImPsod9QAh
">Punjab: Two arrested for allegedly raping a girl in a car in Ludhiana.
— ANI (@ANI) October 23, 2020
"The victim came to lodge a rape complaint allegedly committed on Oct 21. An FIR has been registered & we have arrested the 2 accused & impounded the car. An investigation is underway," says Police. pic.twitter.com/ImPsod9QAhPunjab: Two arrested for allegedly raping a girl in a car in Ludhiana.
— ANI (@ANI) October 23, 2020
"The victim came to lodge a rape complaint allegedly committed on Oct 21. An FIR has been registered & we have arrested the 2 accused & impounded the car. An investigation is underway," says Police. pic.twitter.com/ImPsod9QAh
ಮಹಿಳೆಯ ಸ್ನೇಹಿತನಾಗಿರುವ ಪರಶಾಂತ್ನನ್ನು ಬುಧವಾರ ಫಿರೋಜ್ಪುರ್ ರಸ್ತೆಯಲ್ಲಿ ಭೇಟಿಯಾಗಲು ಬಂದಿದ್ದಳು. ಸ್ನೇಹಿತನ ಜನ್ಮದಿನ ಆಚರಣೆ ಮಾಡಲು ಬರುವಂತೆ ಆಕೆಗೆ ಮನವಿ ಮಾಡಿದ್ದನು. ಮಹಿಳೆ ಭೇಟಿಯಾಗಿ ವಾಪಸ್ ಹೋಗುತ್ತಿದ್ದ ವೇಳೆ ಕಾರಿನೊಳಗೆ ಎಳೆದುಕೊಂಡು ಹೋಗಿ ದುಷ್ಕೃತ್ಯವೆಸಗಿದ್ದಾರೆ. ಜತೆಗೆ ಮುಂಜಾನೆ 3 ಗಂಟೆಗೆ ರಾಜ್ಗುರು ನಗರದ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಇದರ ಬಗ್ಗೆ ಪತಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಮದುವೆಯಾಗಿರುವ ಮಹಿಳೆಗೆ 8 ವರ್ಷದ ಮಗುವಿದೆ.
ಇಬ್ಬರು ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ) ಮತ್ತು 120-ಬಿ( ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಇವರನ್ನ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.