ETV Bharat / bharat

ಇಲ್ಲಿ ಖಾಸಗಿ ಬಸ್​​​​ಗಳಲ್ಲಿ ತೃತೀಯ ಲಿಂಗಿಗಳಿಗೂ ಆಸನಗಳು ಮೀಸಲು - ತೃತೀಯ ಲಿಂಗಿಗಳು

ಪಶ್ಚಿಮ ಬಂಗಾಳದ 35 ಸಾವಿರದಿಂದ 40 ಸಾವಿರ ಬಸ್​​ಗಳಲ್ಲಿ ತೃತೀಯ ಲಿಂಗಿಗಳಿಗೂ ಆಸನ ಮೀಸಲಿರಿಸಲು ಅಲ್ಲಿನ ಖಾಸಗಿ ಬಸ್​ಗಳ ಒಕ್ಕೂಟ ಮುಂದಾಗಿದೆ. ಜನರಲ್ಲಿ ತೃತೀಯ ಲಿಂಗಿಗಳ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಈ ನಿಯಮ ಜಾರಿ ಮಾಡಲಾಗುವುದು ಎಂಬ ಮಾಹಿತಿ ಸಿಕ್ಕಿದೆ.

Private bus operator in Bengal reserves seats for transgenders in buses
ಬಂಗಾಳದ ಖಾಸಗಿ ಬಸ್​ನಲ್ಲಿ ತೃತೀಯ ಲಿಂಗಿಗಳಿಗೂ ಸೀಟ್ ಮೀಸಲು
author img

By

Published : Aug 17, 2020, 2:09 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಖಾಸಗಿ ಬಸ್ ನಿರ್ವಾಹಕರ ಸಂಘಟನೆ ಇನ್ನುಮುಂದೆ ತಮ್ಮ ಬಸ್​ಗಳಲ್ಲಿ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿರಿಸಲು ಮುಂದಾಗಿರುವ ವಿಚಾರ ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಬಸ್​ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ತಪನ್ ಬ್ಯಾನರ್ಜಿ, ಎಲ್ಲ ಬಸ್​ಗಳಲ್ಲಿ ಮೀಸಲಿಡಲು ನಿರ್ಧರಿಸಿರುವ 2 ಸೀಟ್​​ಗಳನ್ನು ‘ತ್ರಿಧಾರ’ ಎಂದು ಕರೆಯಲು ಉದ್ದೇಶಿಸಲಾಗಿದೆ.

ಅಲ್ಲದೇ ರಾಜ್ಯದ 35 ಸಾವಿರದಿಂದ 40 ಸಾವಿರ ಬಸ್​​ಗಳಲ್ಲಿ ಈ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ. ಜನರಲ್ಲಿ ತೃತೀಯ ಲಿಂಗಿಗಳ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಈ ನಿಯಮ ಜಾರಿ ಮಾಡಲಾಗುವುದು ಎಂದು ನಿರ್ವಾಹಕರ ಒಕ್ಕೂಟ ತಿಳಿಸಿದೆ.

ಈಗಾಗಲೇ ಎಲ್ಲ ಬಸ್​ಗಳಲ್ಲಿ ಈ ಸೌಲಭ್ಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಈ ಮೂಲಕ ತೃತೀಯ ಲಿಂಗಿಗಳ ಕುರಿತಂತೆ ಜನರಲ್ಲಿ ಹಾಗೂ ಸಿಬ್ಬಂದಿಯಲ್ಲಿ ಗೌರವ ಮೂಡುವುದಲ್ಲದೇ ಇವರನ್ನ ಎಲ್ಲರಂತೆ ಸಮಾನವಾಗಿ ಕಾಣುವಂತಾಗುತ್ತದೆ ಎಂದಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಬಸ್​ ಮಾಲೀಕರು ಈ ವ್ಯವಸ್ಥೆ ಜಾರಿ ಮಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.