ETV Bharat / bharat

ಕೊರೊನಾ ಲಾಕ್‌ಡೌನ್‌ ಪರಿಣಾಮ: ಗರ್ಭಿಣಿಯರು, ಶಿಶುಗಳಿಗೆ ಆರೋಗ್ಯ ವ್ಯವಸ್ಥೆ ಕೊರತೆಯ ಸವಾಲು - ನವಜಾತ ಮಕ್ಕಳು

ಜಗತ್ತಿನೆಲ್ಲೆಡೆ ವಿಧಿಸಲಾಗಿರುವ ಲಾಕ್​ಡೌನ್​ ಹಾಗೂ ಕರ್ಫ್ಯೂಗಳಿಂದಾಗಿ ಗರ್ಭಿಣಿಯರು, ನವಜಾತ ಮಕ್ಕಳು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆರೋಗ್ಯ ವ್ಯವಸ್ಥೆಗಳು ಒತ್ತಡದಿಂದ ನಲುಗುತ್ತಿವೆ.

Pregnant mothers
Pregnant mothers
author img

By

Published : May 7, 2020, 5:43 PM IST

ಹೈದರಾಬಾದ್: ಕೋವಿಡ್​-19 ಕಾಣಿಸಿಕೊಂಡ ನಂತರದ 9 ತಿಂಗಳ ಅವಧಿಯಲ್ಲಿ ಸುಮಾರು 116 ಮಿಲಿಯನ್​ ಮಕ್ಕಳು ಹುಟ್ಟಲಿದ್ದು, ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಗರ್ಭಿಣಿಯರು ಮತ್ತು ಶಿಶುಗಳ ಆರೋಗ್ಯ ಕಾಪಾಡಲು ಹೆಚ್ಚು ಕಾಳಜಿ ವಹಿಸಬೇಕೆಂದು ಯುನಿಸೆಫ್​ ಕರೆ ನೀಡಿದೆ.

"ಜಗತ್ತಿನೆಲ್ಲೆಡೆ ವಿಧಿಸಲಾಗಿರುವ ಲಾಕ್​ಡೌನ್​ ಹಾಗೂ ಕರ್ಫ್ಯೂಗಳಿಂದಾಗಿ ಗರ್ಭಿಣಿಯರು, ನವಜಾತ ಮಕ್ಕಳು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆರೋಗ್ಯ ವ್ಯವಸ್ಥೆಗಳು ಒತ್ತಡದಿಂದ ನಲುಗುತ್ತಿವೆ. ವೈದ್ಯಕೀಯ ಸಲಕರಣೆಗಳ ಕೊರತೆಯೂ ಸಾಕಷ್ಟಿದೆ. ನುರಿತ ಪ್ರಸೂತಿ ತಜ್ಞರು, ನರ್ಸ್​, ಆಯಾಗಳು ಹೀಗೆ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಕೋವಿಡ್​ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಗರ್ಭಿಣಿ ಹಾಗೂ ಶಿಶುಗಳ ಆರೈಕೆ ಕಷ್ಟವಾಗುತ್ತಿದೆ ಎಂದು ಯುನಿಸೆಫ್ ಹೇಳಿದೆ.

ಕೋವಿಡ್​ ನಂತರದ 9 ತಿಂಗಳಲ್ಲಿ ಭಾರತದಲ್ಲಿ 20.1 ಮಿಲಿಯನ್​, ಚೀನಾದಲ್ಲಿ 13.5 ಮಿಲಿಯನ್, ನೈಜೀರಿಯಾದಲ್ಲಿ 6.4 ಮಿಲಿಯನ್​, ಪಾಕಿಸ್ತಾನದಲ್ಲಿ 5 ಮಿಲಿಯನ್​ ಮಕ್ಕಳು ಹುಟ್ಟಲಿವೆ. ಕೋವಿಡ್​ ಕಾಣಿಸಿಕೊಳ್ಳುವುದಕ್ಕೂ ಮುಂಚಿನಿಂದಲೇ ಈ ದೇಶಗಳಲ್ಲಿ ಶಿಶುಮರಣ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೋವಿಡ್​ ಸಂಕಷ್ಟದ ಮಧ್ಯೆ ತಾಯಿ ಹಾಗೂ ಶಿಶು ಮರಣಗಳನ್ನು ಕಡಿಮೆ ಮಾಡುವತ್ತ ದೇಶಗಳು ಗಮನಹರಿಸಬೇಕಿದೆ ಎಂದು ಯುನಿಸೆಫ್​ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.