ನವದೆಹಲಿ: ದೇಶಾದ್ಯಂತ ಕೊರೊನಾ ಲಸಿಕೆಯ ಎರಡನೇ ಹಂತದ ಡ್ರೈರನ್ ಇಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಲಸಿಕೆ ವಿತರಣೆ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
-
At 4 PM on 11th January, PM Narendra Modi will interact with Chief Ministers of all states via video conferencing. They will discuss the #COVID19 situation and the vaccination rollout. pic.twitter.com/0EwGrPnEXA
— ANI (@ANI) January 8, 2021 " class="align-text-top noRightClick twitterSection" data="
">At 4 PM on 11th January, PM Narendra Modi will interact with Chief Ministers of all states via video conferencing. They will discuss the #COVID19 situation and the vaccination rollout. pic.twitter.com/0EwGrPnEXA
— ANI (@ANI) January 8, 2021At 4 PM on 11th January, PM Narendra Modi will interact with Chief Ministers of all states via video conferencing. They will discuss the #COVID19 situation and the vaccination rollout. pic.twitter.com/0EwGrPnEXA
— ANI (@ANI) January 8, 2021
ಸೋಮವಾರ ಸಂಜೆ 4ಗಂಟೆಗೆ ಈ ಸಭೆ ನಡೆಯಲಿದ್ದು, ಎಲ್ಲ ರಾಜ್ಯದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಸೇರಿದಂತೆ ಕೆಲ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಕೋವಿಡ್ ವ್ಯಾಕ್ಸಿನ್ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಎಲ್ಲ ರಾಜ್ಯಗಳಿಗೂ ಹಂಚಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.
ಮೊದಲ ಹಂತದಲ್ಲಿ ದೇಶದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿವಿಧ ರಾಜ್ಯಗಳಿಂದ ಲಸಿಕೆಯ ಬೇಡಿಕೆ, ಪೂರೈಕೆ, ಲಸಿಕೆ ಕೊಡಲು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಪ್ರಧಾನಿ ಚರ್ಚಿಸಲಿದ್ದಾರೆ.