ಶ್ರೀನಗರ : ಜಮ್ಮುವಿನಲ್ಲಿ ಕಳೆದ ಎಂಟು ತಿಂಗಳಲ್ಲಿ (ಜನವರಿ 1ರಿಂದ ಸೆಪ್ಟೆಂಬರ್ 7ರವರೆಗೆ) ಪಾಕಿಸ್ತಾನವು 3,186 ಕದನ ವಿರಾಮ ಉಲ್ಲಂಘನೆ ನಡೆಸಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.
ಪಾಕ್ನ ಕದನ ವಿರಾಮವು 2003ರ ಬಳಿಕ (17 ವರ್ಷ) ಈ ವರ್ಷದಲ್ಲಿ ಅತಿ ಹೆಚ್ಚು ಉಲ್ಲಂಘನೆ ಮಾಡಿದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಡಳಿತ ಅವಧಿಯಲ್ಲಿ ಅತ್ಯಧಿಕ ಕದನ ವಿರಾಮ ಉಲ್ಲಂಘಿಸಿತ್ತು.
ಜಮ್ಮು ಪ್ರದೇಶದಲ್ಲಿ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ (ಜನವರಿ 1ರಿಂದ ಆಗಸ್ಟ್ 31ರವರೆಗೆ) 242 ಗಡಿಯಾಚೆ ಗುಂಡಿನ ಚಕಮಕಿ ನಡೆದಿವೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವಾಲಯದ ರಾಜ್ಯಸಚಿವ ಶ್ರಿಪಾದ್ ನಾಯಕ್ ಹೇಳಿದ್ದಾರೆ.
ಈ ವರ್ಷದ ಕದನ ವಿರಾಮ ಉಲ್ಲಂಘನೆಯ ವೇಳೆ ಎಂಟು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇತರ ಇಬ್ಬರು ಗಾಯಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಮುಗ್ಧ ನಾಗರಿಕರು ಬಲಿಯಾಗಿ ಹಲವು ಮನೆ ಮತ್ತು ಕಟ್ಟಡಗಳು ನಾಶವಾಗಿವೆ.
ಶುಕ್ರವಾರ ಸಂಜೆ ಪಾಕಿಸ್ತಾನ ಭಾರಿ ಗುಂಡಿನ ದಾಳಿ ನಡೆಸಿದ ನಂತರ ಎಲ್‌ಒಸಿ ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಈ ಹಿಂದೆ, ಉತ್ತರ ಕಾಶ್ಮೀರದ ಗುರೆಜ್ ವಲಯದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.