ETV Bharat / bharat

ರಾಜ್ಯಸಭಾ ಅಧಿವೇಶನ ಬಹಿಷ್ಕರಿಸಿದ ಪ್ರತಿಪಕ್ಷ ಸದಸ್ಯರು.. ಸಂಸತ್ ಆವರಣದಲ್ಲಿ ಪ್ರತಿಭಟನೆ - jairam ramesh

ಪ್ರತಿಪಕ್ಷಗಳ ಸಂಸದರ ಅಮಾನತು ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಉಳಿದ ನಾಯಕರು ರಾಜ್ಯಸಭಾ ಅಧಿವೇಶನವನ್ನು ಬಹಿಷ್ಕರಿಸಿದ್ದಾರೆ.

opposition leaders
ಸಂಸದರ ಪ್ರತಿಭಟನೆ
author img

By

Published : Sep 22, 2020, 11:39 AM IST

Updated : Sep 22, 2020, 1:12 PM IST

ನವದೆಹಲಿ: ರಾಜ್ಯಸಭೆಯಲ್ಲಿ ಸಂಸದರನ್ನು ಅಮಾನತುಗೊಳಿಸಿದಾಗಿನಿಂದ ಪ್ರತಿಪಕ್ಷಗಳ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ರಾಜ್ಯಸಭಾ ಅಧಿವೇಶನ ಬಹಿಷ್ಕರಿಸಿ ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಹೇಳಿಕೆಯೊಂದನ್ನು ಹೊರಡಿಸಿದ್ದು, ಕಾಂಗ್ರೆಸ್ ಹಾಗೂ ಸಮಾನಮನಸ್ಕ ಪಕ್ಷಗಳು ರಾಜ್ಯಸಭೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಲಾಪ ಬಹಿಷ್ಕಾರಕ್ಕೆ ಹಲವು ಕಾರಣಗಳನ್ನು ನೀಡಿದ್ದು, ಸಂಸದರ ಅಮಾನತು, ಪ್ರತಿಪಕ್ಷದ ಸದಸ್ಯರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅನುಮತಿ ನೀಡದಿರುವುದು ಹಾಗೂ ಮಸೂದೆಗಳನ್ನು ವಿಶ್ಲೇಷಣೆಗೆ ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಗೆ ಅವಕಾಶ ನೀಡದಿರುವುದೇ ಪ್ರಮುಖ ಕಾರಣ ಎಂದು ಕಾಂಗ್ರೆಸ್ ಹೇಳಿದೆ.

ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿರುವುದನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ಕಾಂಗ್ರೆಸ್ ಸದಸ್ಯರು ಮೊದಲಿಗೆ ಕಲಾಪದಿಂದ ಸಭಾತ್ಯಾಗ ಮಾಡಿದರು. ಇದಾದ ನಂತರ ಆಪ್, ಟಿಎಂಸಿ ಹಾಗೂ ಕೆಲವು ಎಡಪಕ್ಷಗಳು ಕಲಾಪವನ್ನು ಬಹಿಷ್ಕರಿಸಿದವು.

ಇದಾದ ಸ್ವಲ್ಪ ಸಮಯದ ನಂತರ ಎನ್​ಸಿಪಿ, ಎಸ್​ಪಿ, ಶಿವಸೇನಾ, ಆರ್​ಜೆಡಿ ಪಕ್ಷಗಳ ಕೆಲವು ನಾಯಕರು ಕಲಾಪವನ್ನು ಬಹಿಷ್ಕರಿಸಿ ಹೊರೆನಡೆದಿದ್ದು, ಸಂಸತ್ ಆವರಣದ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.

ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅಧಿವೇಶನ ಬಹಿಷ್ಕರಿಸಿದ ನಾಯಕರಿಗೆ ಆತ್ಮಾವಲೋಕನ ನಡೆಸಿ ಚರ್ಚೆಯಲ್ಲಿ ಹಾಜರಾಗುವಂತೆ ಸೂಚಿಸಿದರೂ ಬಹಿಷ್ಕಾರವನ್ನು ಪ್ರತಿಪಕ್ಷಗಳ ಸಂಸದರು ಕೈಬಿಡಲಿಲ್ಲ. ಪ್ರತಿಪಕ್ಷಗಳ ಈ ನಡೆಗೆ ಬಿಜೆಪಿಯ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : Sep 22, 2020, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.