ಕಿನ್ನೌರ್: ಇದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆ. ಇಲ್ಲಿನ ಮಕ್ಕಳು ಸ್ಮಾರ್ಟ್ ಕ್ಲಾಸ್ ಸೌಲಭ್ಯದಿಂದ ದೂರವೇ ಉಳಿದಿದ್ದಾರೆ. ಯಾವುದೇ ಅಡ್ಡಿಯಿಲ್ಲದೆ ಆನ್‌ಲೈನ್ ತರಗತಿಗಳನ್ನು ನಡೆಸಲು ವೇಗದ ಇಂಟರ್ನೆಟ್ ಅಗತ್ಯ. ಆದರೆ, ಕಿನ್ನೌರ್ ಮತ್ತು ರಿಕಾಂಗ್‌ಪಿಯೊ ಗಡಿ ಪ್ರದೇಶಗಳಲ್ಲಿ, 4ಜಿ ಮಾತು ಬಿಡಿ, 2ಜಿ ಇಂಟರ್ನೆಟ್ ಕೂಡಾ ದೊರಕೋದು ಕಷ್ಟ. ಹೀಗಾಗಿ ಈ ಪ್ರದೇಶದ ನೂರಾರು ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಕನಸಿನ ಮಾತಾಗಿದೆ.
ಇಂಟರ್ನೆಟ್ ಬಿಡಿ, ಫೋನ್ ಕಾಲ್ಗೂ ನೆಟ್ವರ್ಕ್ ಇಲ್ಲ: ಈ ಜಿಲ್ಲೆಯ ಮಕ್ಕಳಿಗೆ Online ಶಿಕ್ಷಣ ಗಗನ ಕುಸುಮ - ಹಿಮಾಚಲ ಪ್ರದೇಶ
ಕೊರೊನಾ ವೈರಸ್ ಜಗತ್ತಿಗೆ ಸಾವುನೋವಿನ ಹೊರತಾಗಿ ಏನೆಲ್ಲಾ ಕೊಟ್ಟಿದೆಯೋ ಗೊತ್ತಿಲ್ಲ. ಆದರೆ, ವರ್ಕ್ ಫ್ರಂ ಹೋಂನ್ನು ಜನರಿಗೆ ಪರಿಚಯಿಸಿದೆ. ವಿದ್ಯಾರ್ಥಿಗಳು ಆನ್‌ಲೈನ್ ತರಗತಿ ಮತ್ತು ವರ್ಚುವಲ್ ಕಲಿಕಾ ವಿಧಾನಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ಈಗಾಗಲೇ ಪ್ರಾರಂಭಿಸಿವೆ. ಆದರೆ, ಭಾರತದ ಅನೇಕ ಹಳ್ಳಿಗಳಲ್ಲಿ ಆನ್‌ಲೈನ್ ತರಗತಿಗಳು ಗಗನ ಕುಸುಮವಾಗಿದೆ ಅನ್ನೋದಕ್ಕೆ ಈ ಜಿಲ್ಲೆ ಸಾಕ್ಷಿ..
ಈ ಜಿಲ್ಲೆಯ ಮಕ್ಕಳಿಗೆ Online ಶಿಕ್ಷಣ ಗಗನ ಕುಸುಮ