ನವದೆಹಲಿ: ಕೊರೊನಾ ವೈರಸ್ಗೆ ಲಸಿಕೆ ತಯಾರಿಸುವ ದೇಶಗಳಲ್ಲಿ ಭಾರತವೂ ಒಂದಾಗಲಿದ್ದು, ಆ ಲಸಿಕೆಯು ಸ್ಪಷ್ಟವಾದ ಉದ್ದೇಶ ಹಾಗೂ ತಕ್ಷಣಕ್ಕೆ ಎಲ್ಲರಿಗೂ ಎಲ್ಲ ಕಾಲದಲ್ಲೂ ಕಡಿಮೆ ಬೆಲೆಗೆ ದೊರೆಯುವಂತಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಲಸಿಕೆಯ ಲಭ್ಯತೆ, ಅದರ ಬೆಲೆ ನ್ಯಾಯಯುತವಾಗಿ ಇರಬೇಕು ಹಾಗೂ ರೋಗ ಗುಣಪಡಿಸುವ ಖಾತರಿ ಹೊಂದಿರಬೇಕು. ಭಾರತವು ಕೋವಿಡ್ 19ಗೆ ಲಸಿಕೆ ಉತ್ಪಾದಿಸುತ್ತಿದೆ. ಈ ಲಸಿಕೆಯು ಎಲ್ಲರಿಗೂ ಕೈಗೆಟಕುವಂತೆ ಹಾಗೂ ಸುಲಭವಾಗಿ ದೊರೆಯುವಂತೆ ಇರಬೇಕು ಎಂದು ಟ್ವೀಟ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
India will be one of the COVID-19 vaccine-producing nations.
— Rahul Gandhi (@RahulGandhi) August 14, 2020 " class="align-text-top noRightClick twitterSection" data="
It needs a clearly-defined, inclusive & equitable vaccine access strategy ensuring availability, affordability & fair distribution.
GOI must do it now.
">India will be one of the COVID-19 vaccine-producing nations.
— Rahul Gandhi (@RahulGandhi) August 14, 2020
It needs a clearly-defined, inclusive & equitable vaccine access strategy ensuring availability, affordability & fair distribution.
GOI must do it now.India will be one of the COVID-19 vaccine-producing nations.
— Rahul Gandhi (@RahulGandhi) August 14, 2020
It needs a clearly-defined, inclusive & equitable vaccine access strategy ensuring availability, affordability & fair distribution.
GOI must do it now.
ಇನ್ನು ಈ ಟ್ವೀಟ್ಗೂ ಮುಂಚಿತವಾಗಿ ದೇಶದಲ್ಲಿ ದಿನೇ ದಿನೆ ಹೆಚ್ಚಳಗೊಳ್ಳುತ್ತಿರುವ ಕೋವಿಡ್ ಪ್ರಕರಣಗಳನ್ನು ತೋರಿಸುವ ಗ್ರಾಪ್ ಅನ್ನು ಟ್ವೀಟ್ ಮಾಡಿ, ಸರ್ಕಾರದ ನಿಯಂತ್ರಣದ ವೈಫಲ್ಯವನ್ನ ದೇಶದ ಜನರ ಮುಂದಿಟ್ಟಿದ್ದರು.
ಪ್ರಸ್ತುತ ದೇಶದಲ್ಲಿ 6,61,595 ಸಕ್ರಿಯ ಪ್ರಕರಣಗಳಿವೆ. ಇಲ್ಲಿವರೆಗೆ ಸುಮಾರು 17,51,555 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 48,040 ಮಂದಿ ಕೊರೊನಾದಿಂದ ಇದುವರೆಗೂ ಸಾವನ್ನಪ್ಪಿದ್ದಾರೆ.